ಮೇರಠ್: ಪತ್ನಿ ಮತ್ತು ಪ್ರಿಯಕರನ ಸಂಚಿನಿಂದ ಕೊಲೆಯಾಗಿದ್ದ ಮೇರಠ್ನ ಮರ್ಚಂಟ್ ನೇವಿಯ ಅಧಿಕಾರಿ ಸೌರಭ್ ರಜಪೂತ್ರ ಮೃತದೇಹದ ಕೆಲವು ಅಂಗಗಳನ್ನು ಉಭಯ ಆರೋಪಿಗಳು ಮಿಕ್ಸರ್ನಲ್ಲಿ ರುಬ್ಬಿರುವ ಆಘಾತಕಾರಿ ಅಂಶ ಬಹಿರಂಗಗೊಂಡಿದೆ.
ಸೌರಭ್ರನ್ನು ಕೊಂದು ದೇಹವನ್ನು ತುಂಡು ತುಂಡು ಮಾಡಿದ್ದ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾ, ಅವುಗಳನ್ನು ನಾನಾ ಜಾಗಗಳಲ್ಲಿ ಅಡಗಿಸಿಟ್ಟಿದ್ದರು. ಮುಂಡವನ್ನು ಮುಸ್ಕಾನ್ ಮನೆಯ ಬೆಡ್ ಬಾಕ್ಸ್ನಲ್ಲಿಟ್ಟು ಉಳಿದ ಭಾಗಗಳನ್ನು ಸಾಹಿಲ್ನ ಮನೆಗೊಯ್ದು ಒಂದು ಸಿಮೆಂಟ್ ಡ್ರಮ್ಲ್ಲಿ ಬಚ್ಚಿಟ್ಟಿದ್ದರು. ಸೌರಭ್ರನ್ನು ಮೇರಠ್ನಲ್ಲಿ ಇರಿದು ಕೊಂದಿದ್ದ ದುರುಳರು, ದೇಹದ ಕೆಲವು ಅಂಗಗಳನ್ನು ಮಿಕ್ಸರ್ನಲ್ಲಿ ರುಬ್ಬಿದ್ದರು ಎನ್ನಲಾಗಿದೆ.