ಅಡುಗೆ ಮಾಡಿಲ್ಲ ಎಂದು ಪತ್ನಿಯನ್ನೇ ಕೊಂದುಬಿಟ್ಟ ಭೂಪ!

ಬೆಂಗಳೂರು: ದ್ವೇಷ, ವೈಷಮ್ಯಕ್ಕೆ ಇಲ್ಲವೆ ಸುಪಾರಿ ಕೊಲೆಗಳನ್ನು ಕೇಳಿರುತ್ತೀರಿ. ಆದರೆ, ಇಲ್ಲೊಬ್ಬ ಪತಿ ಮಹಾಶಯ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಸೂಲಕುಂಟೆಯಲ್ಲಿ ಪತಿ ವೆಂಕಟೇಶ್‌ ಎಂಬಾತ ಅಡುಗೆ ಮಾಡಿಲ್ಲ ಎನ್ನುವ ಕಾರಣಕ್ಕಾಗಿ ಪತ್ನಿಯನ್ನೇ ಕೋಲು ಹಾಗೂ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ.

ಶಿವಮೊಗ್ಗ ಮೂಲದ ಲಕ್ಷ್ಮಿ(40) ಮೃತಳು. ಸ್ವೀಪರ್‌ ಕೆಲಸ ಮಾಡುತ್ತಿದ್ದ ವೆಂಕಟೇಶ್‌ ಕುಡಿದ ಅಮಲಿನಲ್ಲಿ ತಡರಾತ್ರಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ತಿಳಿದ ಸಂಬಂಧಿಕರು ಹಲ್ಲೆಗೊಳಗಾಗಿದ್ದ ಲಕ್ಷ್ಮೀನರಸಮ್ಮಳನ್ನು ಚಿಕಿತ್ಸೆಗಾಗಿ ತ್ಯಾಮಗೊಂಡ್ಲು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾಳೆ.

ಪತಿ ವೆಂಕಟೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *