ಪರಪುರುಷನ ಸಂಗ ಮಾಡಿದಳಾ ಪತ್ನಿ? ಅನುಮಾನಗೊಂಡ ಪತಿ ಮಾಡಿದ್ದೇನು?

ಬೆಂಗಳೂರು: ಈ ಪತಿಗೆ ಪತ್ನಿ ಮೇಲೆ ಅನುಮಾನ. ಆಕೆ ಇನ್ಯಾರದ್ದೋ ಸಂಗ ಮಾಡಿದ್ದಾಳೆ ಎಂದು. ಒಂದು ದಿನ ಪತ್ನಿ ಮೊಬೈಲ್​ ಪರಿಶೀಲನೆ ಮಾಡಿದಾಗ ಓರ್ವ ವ್ಯಕ್ತಿ  ಪ್ರತಿನಿತ್ಯ ಹಲವಾರು ಸಂದೇಶ ಕಳಿಸಿ, ಕರೆ ಮಾಡಿ ಮಾತನಾಡುತ್ತಿದ್ದುದು ಬೆಳಕಿಗೆ ಬಂದಿತ್ತು.

ಆಂಧ್ರಪ್ರದೇಶ ಮೂಲದ ದೊಡ್ಡತೂಗೂರು ನಿವಾಸಿ ರಮೇಶ್ ಬಾಬು (29),  ಪ್ರಿಯಾಂಕಾ (24) ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. 5 ವರ್ಷದ ಹೆಣ್ಣುಮಗುವಿದೆ. ರಮೇಶ್​ ಖಾಸಗಿ ಕಂಪನಿಯಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಪ್ರಿಯಾಂಕಾ ಗಾರ್ಮೆಂಟ್ಸ್​ನಲ್ಲಿ ಕೆಲಸದಲ್ಲಿದ್ದಳು. ಪತ್ನಿ ಮತ್ತೊಬ್ಬನ ಸಂಗ ಮಾಡಿದ್ದಾಳೆಂದು ಅನುಮಾನಗೊಂಡ ಪತಿ ರಮೇಶ್​ ಬಾಬು ಪ್ರತಿದಿನ ಜಗಳ ಮಾಡುತ್ತಿದ್ದ.

ಕೊನೆಗೊಂದು ದಿನ ಪತ್ನಿಯ ಮೊಬೈಲ್​ ಕೂಡ ಪರಿಶೀಲನೆ ಮಾಡಿದಾಗ. ಅನುಮಾನಕ್ಕೆ ಪುಷ್ಟಿ ನೀಡುವಂತೆ ಆಕೆಗೆ ಓರ್ವ ವ್ಯಕ್ತಿಯಿಂದ ಹಲವಾರು ಸಂದೇಶ, ಕರೆಗಳು ಬಂದಿದ್ದನ್ನು ನೋಡಿದ್ದಾನೆ. ನಂತರ ಏ.20ರಂದು ಆಕೆಯ ಕತ್ತಿಗೆ ದಾವಣಿಯಿಂದ ಬಿಗಿದು ಕೊಲೆ ಮಾಡಿದ್ದಾನೆ. ಆದರೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದ. ನಂತರ ಅವನೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಪ್ರಕರಣ ಭೇದಿಸಿದ ಪೊಲೀಸರು ಆರೋಪಿ ರಮೇಶ್​ನನ್ನು ಬಂಧಿಸಿದ್ದಾರೆ.

ಪೊಲೀಸರು ನೆರೆಹೊರೆಯವರು ಮತ್ತು ಸಂಬಂಧಿಕರಿಂದ ಮಾಹಿತಿ ಕಲೆ ಹಾಕಿದಾಗ ದಂಪತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿದ್ದುದು ತಿಳಿದುಬಂತು. ಈ ಬಗ್ಗೆ ರಮೇಶ್​ನನ್ನು ವಿಚಾರಣೆ ನಡೆಸಿದಾಗ ಆತ ನಡೆದ ಸಂಗತಿ ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *