ತೆಲಂಗಾಣ: ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವ ಬಂಧವು ತುಂಬಾ ದುರ್ಬಲವಾಗಿದೆ ಎಂದು ಹೇಳಬಹುದು. ಅನೇಕರು ಇಂದು ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಪಡೆದುಕೊಂಡು ದೂರವಾಗುತ್ತಿದ್ದಾರೆ. ಪತಿ-ಪತ್ನಿಯರ ಬಾಂಧವ್ಯ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತೋರಿಸುವ ಅನೇಕ ಘಟನೆಗಳು ನಡೆಯುತ್ತವೆ. ಮದುವೆಯಾದ ದಂಪತಿಯನ್ನು ಸಾವಿನಿಂದ ಕೂಡ ಬೇರ್ಪಡಿಸಲು ಸಾಧ್ಯವಿಲ್ಲ ಎಂಬುದನ್ನು ಇತ್ತೀಚಿನ ಘಟನೆಯೊಂದು ಸಾಬೀತುಪಡಿಸುತ್ತದೆ.
ಇತ್ತೀಚೆಗಷ್ಟೇ ಮಹಿಳೆಯೊಬ್ಬಳು ತನ್ನ ಮೃತ ಪತಿಯನ್ನು ನೆನೆದು ಆತನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಳು. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದ ಸುದ್ದಿ ಒಂದು ರೇಂಜ್ ನಲ್ಲಿ ಸದ್ದು ಮಾಡುತ್ತಿದೆ.
ವಿಕಾರಾಬಾದ್ ಜಿಲ್ಲೆ ತಾಂಡೂರು ಪುರಸಭೆಯ ಮಾಜಿ ಅಧ್ಯಕ್ಷೆ ಕೊಟ್ರಿಕಾ ವಿಜಯಲಕ್ಷ್ಮಿ ಅವರ ಪತಿ ವೆಂಕಟಯ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ತಮ್ಮ ಮನೆ ಮುಂದೆ ಸಸಿ ನೆಟ್ಟರು. ಆದಾಗಿ ಕೆಲವು ದಿನಗಳ ನಂತರ ವೆಂಕಟಯ್ಯ ಮೃತಪಟ್ಟಿದ್ದರು. ಅಂದಿನಿಂದ ವಿಜಯಲಕ್ಷ್ಮಿ ತನ್ನ ಪತಿಯ ನೆನಪಾಗಿ ಗಿಡವನ್ನು ಎಚ್ಚರಿಕೆಯಿಂದ ಬೆಳೆಸುತ್ತಿದ್ದಾಳೆ.
ಈಗ ಆ ಗಿಡ ಮರವಾಗಿ ಬೆಳೆದಿದೆ. ಇದಲ್ಲದೆ, ಪ್ರತಿ ವರ್ಷ ಅವಳು ತನ್ನ ಗಂಡನ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಮರವನ್ನು ಅಲಂಕರಿಸಿ ಹುಟ್ಟುಹಬ್ಬವನ್ನು ಆಚರಿಸುತ್ತಾಳೆ. ಬಲೂನ್ ಗಳನ್ನು ಕಟ್ಟಿ ಗಂಡನ ಬಟ್ಟೆಯನ್ನು ಮರದ ಮೇಲೆ ಇಟ್ಟು ಆಚರಣೆ ಮಾಡುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ವಿಜಯಲಕ್ಷ್ಮಿ ಅವರ ಮನೆ ಎದುರಿನ ಮರವನ್ನು ತೆಗೆಯಬೇಕಾಯಿತು. ನಂತರ ವಿಜಯಲಕ್ಷ್ಮಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕೃಷಿ ವಿಜ್ಞಾನಿಗಳ ಅನುಮತಿ ಪಡೆದು ಪತಿ ನೆಟ್ಟಿದ್ದ ಮರವನ್ನು ಜೆಸಿಬಿ ಸಹಾಯದಿಂದ ತಾಂಡೂರಿನ ಕೃಷಿ ಸಂಶೋಧನಾ ಕೇಂದ್ರಕ್ಕೆ ಕೊಂಡೊಯ್ದು ಬೇರೆ ಕಡೆ ನೆಟ್ಟು ಬೆಳಸಲಾಗುತ್ತಿದೆ.
ಈ ವರ್ಷವೂ ತಾಂಡೂರು ಕೃಷಿ ಸಂಶೋಧನಾ ಕೇಂದ್ರದಲ್ಲಿ ಪತ್ನಿ, ವೆಂಕಟಯ್ಯ ಬಟ್ಟೆ ಯನ್ನು ಮರಕ್ಕೆ ತೊಡಿಸಿ ಪತಿಯ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸುತ್ತಿದ್ದಾರೆ.
ಬೆಳಗ್ಗೆ 8 ಗಂಟೆಗೂ ಮೊದಲು ತಿಂಡಿ ತಿನ್ನದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ! ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ…