ಮುಳುಗುತ್ತಿದ್ದ ಪತ್ನಿಯನ್ನು ರಕ್ಷಿಸಲು ಧಾವಿಸಿದ ಪತಿ; ಇಬ್ಬರೂ ನೀರುಪಾಲು..

ರಾಮನಗರ: ಒಬ್ಬರ ಜೀವ ಉಳಿಸಲು ಇನ್ನೊಬ್ಬರು ಧಾವಿಸಿ, ಕೊನೆಗೆ ಪತಿ-ಪತ್ನಿ ಇಬ್ಬರೂ ಪ್ರಾಣ ಕಳೆದುಕೊಂಡ ದುರಂತವೊಂದು ಸಂಭವಿಸಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಕೂಡ್ಲೂರು ಗ್ರಾಮದ ವೆಂಕಟೇಶ್ (48) ಮತ್ತು ಪಾರ್ವತಮ್ಮ (42) ಸಾವಿಗೀಡಾದ ದಂಪತಿ. ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ಇವರಿಬ್ಬರೂ ಮುಳುಗಿ ನೀರುಪಾಲಾಗಿ ಮೃತಪಟ್ಟಿದ್ದಾರೆ. ಈ ದಂಪತಿ ಕುರಿಗಳ ಮೈ ತೊಳೆಯಲು ಕೆರೆ ಬಳಿಗೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಪತ್ನಿ ಜಾರಿ ನೀರಲ್ಲಿ ಮುಳುಗಲಾರಂಭಿಸಿದ್ದರು. ಆಕೆಯನ್ನು … Continue reading ಮುಳುಗುತ್ತಿದ್ದ ಪತ್ನಿಯನ್ನು ರಕ್ಷಿಸಲು ಧಾವಿಸಿದ ಪತಿ; ಇಬ್ಬರೂ ನೀರುಪಾಲು..