ಕರೊನಾ ಬಗ್ಗೆ ಎಚ್ಚರಿಸಿ ಸರ್ಕಾರದ ಶಿಕ್ಷೆಗೆ ಗುರಿಯಾಗಿ ಮೃತಪಟ್ಟ ವೈದ್ಯನ ಪತ್ನಿಗೆ ಮಗು ಜನನ: ಭಾವುಕ ಮಾತು​

blank

ವುಹಾನ್​: ಚೀನಾದಲ್ಲಿ ಕರೊನಾ ವೈರಸ್​ ಹರಡುವಿಕೆ ಬಗ್ಗೆ ಮೊದಲು ಎಚ್ಚರಿಕೆ ನೀಡಿ, ವದಂತಿ ಹಬ್ಬಿಸುವ ಆರೋಪದಲ್ಲಿ ಬಂಧಿಯಾಗಿ, ಅಧಿಕಾರಿಗಳ ಶಿಕ್ಷೆಗೆ ಗುರಿಯಾಗಿ ಕರೊನಾ ವೈರಸ್​ ಸೋಂಕಿನಿಂದಲೇ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದ ಚೀನಾ ವೈದ್ಯನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಸ್ಥಳೀಯ ಮಾಧ್ಯಮ ವರದಿ ಮಾಡಿದ್ದು, ಪತಿ ಮರಣ ಹೊಂದಿದ ನಾಲ್ಕು ತಿಂಗಳ ಬಳಿಕ ವೆನ್​ಲಿಯಾಂಗ್​ ಪತ್ನಿ ಫು ಕ್ಸುಯೆಜಿ (32) ಆರೋಗ್ಯಯುತ ಗಂಡು ಮಗುವಿಗೆ ಇಂದು (ಶುಕ್ರವಾರ) ಮುಂಜಾನೆ ವುಹಾನ್​ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ.

ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಫು ಕ್ಸುಯೆಜಿ, ನೀವು ಸ್ವರ್ಗದಲ್ಲಿ ನೋಡುತ್ತಿದ್ದೀರಾ? ನೀವು ನನಗೆ ಕೊನೆಯಬಾರಿಗೆ ನೀಡಿದ ಗಿಫ್ಟ್​ ಇಂದು ಜನಿಸಿದೆ. ನಾನು ಖಂಡಿತವಾಗಿ ಆತನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕರೊನಾ​ಗೆ ಬಲಿಯಾದ ಚೀನಾ ವೈದ್ಯನ ಸಾವಿಗೆ ಕ್ಷಮೆಯಾಚಿಸಿದ ಸರ್ಕಾರ: ತನಿಖಾ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ವೆನ್​ಲಿಯಾಂಗ್​ ಪತ್ನಿ ಫು ಕ್ಸುಯೆಜಿ ಸ್ಥಳೀಯ ಕಣ್ಣಿನ ಆಸ್ಪತ್ರೆಯಲ್ಲಿ ದೃಷ್ಟಿ ಮಾಪನಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಈಗಾಗಲೇ 5 ವರ್ಷದ ಒಂದು ಗಂಡು ಮಗುವಿದೆ.

ವೆನ್​ಲಿಯಾಂಗ್​ ಶ್ರ(34) ಓರ್ವ ನೇತ್ರಶಾಸ್ತ್ರಜ್ಞರಾಗಿದ್ದರು. ವುಹಾನ್​ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್​ 30ರಲ್ಲಿ ತನ್ನ ಸ್ನೇಹಿತನಿಗೆ ಖಾಸಗಿ ಸಂದೇಶದ ಮೂಲಕ ಜಿಲ್ಲೆಯಾದ್ಯಂತ ಸೋಂಕು ಹರಡುತ್ತಿರುವುದಾಗಿ ತಿಳಿಸಿದ್ದರು. ಚೀನಾದ ಕೇಂದ್ರ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್​ನಲ್ಲಿ ಮೊದಲ ಬಾರಿಗೆ ವೈರಸ್​ ಸೋಂಕು ಕಾಣಿಸಿಕೊಂಡಾಗ ವೆನ್​ಲಿಯಾಂಗ್ ಮೊದಲು ವರದಿ ನೀಡಿದ್ದರು. ಕಳೆದ ವರ್ಷ ಡಿಸೆಂಬರ್​​ನಲ್ಲೇ ವರದಿ ನೀಡಿದ್ದರು. ಚೀನಾದ ಮೆಸೆಜಿಂಗ್​ ಆ್ಯಪ್​ ವೀಚ್ಯಾಟ್​ ಮೂಲಕವು ಇತರೆ ವೈದ್ಯರಿಗೂ ಮಾಹಿತಿಯನ್ನು ತಿಳಿಸಿದ್ದರು.

ತನ್ನ ಆಸ್ಪತ್ರೆಯಲ್ಲಿ 7 ರೋಗಿಗಳು ದಾಖಲಾಗಿದ್ದಾರೆ. ಅವರಿಗೆ ಸಾರ್ಸ್​​ ರೀತಿ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ದಾಖಲಾಗಿರುವ ಏಳು ರೋಗಿಯೂ ಹುಬೈನಲ್ಲಿನ ಒಂದೇ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಪ್ರಾಣಿ ಮಾಂಸವನ್ನು ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕೊರೊನಾ ವೈರಸ್​ ಮೊದಲು ಪತ್ತೆಹಚ್ಚಿ ವೈರಸ್​ನಿಂದಲೇ ವೈದ್ಯನ ಸಾವು ಪ್ರಕರಣ: ತೀವ್ರ ಟೀಕೆಯ ಬಳಿಕ ತನಿಖೆಗೆ ಆದೇಶ

ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಕೊರೊನಾ ವೈರಸ್​ ಎಂಬುದು ತಿಳಿದಿದ್ದಾಗಿ ವೆನ್​ಲಿಯಾಂಗ್​ ವಿವರಿಸಿದ್ದರು. 2003ರಲ್ಲಿ ಚೀನಾ ಹಾಗೂ ವಿಶ್ವದ್ಯಾಂತ 800 ಜನರ ಸಾವಿಗೆ ಕಾರಣವಾಗಿದ್ದ ತೀವ್ರ ಉಸಿರಾಟದ ರೋಗದ ವೈರಸ್​​ ​(SARS-ಸಿವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್) ಒಳಗೊಂಡಂತೆ ಬಹುದೊಡ್ಡ ವೈರಸ್​ ಕುಟುಂಬವನ್ನು ಪರೀಕ್ಷೆಯಲ್ಲಿ ವೆನ್​ಲಿಯಾಂಗ್​ ಪತ್ತೆ ಹಚ್ಚಿ ಮಾಹಿತಿ ನೀಡಿದ್ದರು.

ವೆನ್​ಲಿಯಾಂಗ್​ ಅವರು ಮುಂಜಾಗ್ರತ ಕ್ರಮವಾಗಿ ತನ್ನ ಸ್ನೇಹಿತನಿಗೆ ಆತನ ಪ್ರೀತಿ ಪಾತ್ರರಾದವರನ್ನು ಕಾಪಾಡಿಕೊಳ್ಳಲು ಸಂದೇಶವನ್ನು ಕಳುಹಿಸಿದ್ದರು. ಆದರೆ, ರೋಗದ ಬಗ್ಗೆ ವೆನ್​ಲಿಯಾಂಗ್​ ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಅದು ಕಾಡ್ಗಿಚ್ಚಿನಂತೆ ಚೀನಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಾದ ಬಳಿಕ ವೆನ್​ಲಿಯಾಂಗ್​ ವಾದವನ್ನು ಚೀನಾ ಸರ್ಕಾರ ತಳ್ಳಿ ಹಾಕಿ, ಅವರನ್ನು ಬಂಧಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಅದೇ ವೈರಸ್​ನಿಂದಲೇ ವೆನ್​ಲಿಯಾಂಗ್​ ಸಾವಿಗೀಡಾದರು. ಇದು ಚೀನಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. (ಏಜೆನ್ಸೀಸ್​)

ಕೊರೊನಾ ವೈರಸ್​ ಮೊದಲು ಪತ್ತೆ ಹಚ್ಚಿ ಬಂಧನವಾಗಿದ್ದ ಚೀನಾ ವೈದ್ಯ ವೈರಸ್​ನಿಂದಲೇ ಮೃತ

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…