ಆಲ್ದೂರು: ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ
ಒಂದು ವಾರದಿಂದಲೂ ಮಳೆಯಾಗುತ್ತಿದ್ದು ಸೋಮವಾರ ಮಧ್ಯಾಹ್ನ 2 ಗಂಟೆಗೆ
ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದ್ದರಿಂದ ನೀರು ರಸ್ತೆಗಳ ಮೇಲೆ
ಹಳ್ಳದಂತೆ ಹರಿಯಿತು. ದರಿಂದ ವಾಹನ ಸವಾರರು ಪರದಾಡುವಂತಾಯಿತು.
ಚಿಕ್ಕಮಗಳೂರು ರಾಜ್ಯ ಹೆದ್ದಾರಿ-27ರ ರಸ್ತೆ ಹಾಗೂ ಆಲ್ದೂರು-ಮೂಡಿಗೆರೆ ರಸ್ತೆಗಳಲ್ಲಿ
ನೀರು ಹರಿದು ಒಂದು ಗಂಟೆ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಮಳೆ ಆರ್ಭಟಕ್ಕೆ ಚಿಕ್ಕಮಾಗರವಳ್ಳಿ ಗ್ರಾಮದ ರಾಜ್ಯ ದೇವತೆ ದೇವಸ್ಥಾನದ
ಅರ್ಧದಷ್ಟು ಕಾಂಪೌಂಡ್ ಉರುಳಿ ಬಿದ್ದಿದೆ. ತೋರಣ ಮಾವು ಗ್ರಾಮದ ತಿರುವಿನಲ್ಲಿ
ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ
ಗಾಯಗಳಾಗಿದ್ದು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲ್ದೂರಲ್ಲಿ ರಸ್ತೆ ಮೇಲೆ ಹರಿದ ಚರಂಡಿ ನೀರು

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…