ನರಗುಂದ: ರಾಜ್ಯ ಸರ್ಕಾರ ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಸಾರ್ವಜನಿಕರು ನಗರದ ಮಾರುಕಟ್ಟೆ ಪ್ರದೇಶದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ರಾಜ್ಕುಮಾರ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಗುಜಮಾಗಡಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನೆಪದಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ವಂಚನೆ ಮಾಡಲು ಮುಂದಾಗಿದೆ. ಉಚಿತ ಬಸ್ ಪ್ರಯಾಣದಿಂದ 60 ವರ್ಷದ ಮೇಲ್ಪಟ್ಟ ವಯೋವೃದ್ಧರು, ಶಾಲಾ, ಕಾಲೇಜ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆಗಳಾಗುತ್ತಿವೆ. ಈ ಬಗ್ಗೆ ಸರ್ಕಾರ ಕೂಡಲೇ ವಿಶೇಷ ಅಧ್ಯಯನ ಕೈಗೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಅಲ್ಲದೆ, ಅಗತ್ಯ ವಸ್ತುಗಳು, ಪೆಟ್ರೋಲ್,ಡೀಸೆಲ್, ಬಸ್ ಪ್ರಯಾಣ ದರ ಏರಿಕೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಂಜುನಾಥ ಜಿಂಗಾಡೆ, ಪ್ರಶಾಂತ ಮಹೇಂದ್ರಕರ್, ದಾವಲಸಾಬ್ ಶಿಂದಗಿ, ನಾಗರಾಜ ಪಾರ್ವತಿಯವರ, ಬಸವರಾಜ ಸತ್ತಿಗೇರಿ, ವಾಸುರಡ್ಡಿ ಹೆಬ್ಬಾಳ, ಪೀರು ಜಿಂಗಾಡೆ, ಆನಂದ ಜಿಂಗಾಡೆ, ಕೃಷ್ಣಾ ದಲಬಂಜನ, ಇತರರಿದ್ದರು.