ನಾಗ್ಪುರ: ಭಾರತ ತಂಡ 2023ರ ಏಕದಿನ ವಿಶ್ವಕಪ್ ೈನಲ್ ಬಳಿಕ ಮೊದಲ ಬಾರಿಗೆ ತವರಿನಲ್ಲಿ ಏಕದಿನ ಸರಣಿ ಆಡಲು ಸಜ್ಜಾಗಿದೆ. ವಿಸಿಎ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಗುರುವಾರ ನಡೆಯಲಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡದ ಸಂಯೋಜನೆ ಮತ್ತು ಪೂರ್ವಸಿದ್ಧತೆ ದೃಷ್ಟಿಯಿಂದ ರೋಹಿತ್ ಶರ್ಮ ಪಡೆಗೆ ಈ ಸರಣಿ ಮಹತ್ವದ್ದಾಗಿದೆ.
ರಾಹುಲ್ ಸ್ಥಾನ ಖಚಿತವಿಲ್ಲ?
ಮಧ್ಯಮ ಕ್ರಮಾಂಕದ ಸಂಯೋಜನೆ ಜತೆಗೆ ವಿಕೆಟ್ ಕೀಪರ್ ಆಯ್ಕೆ ಭಾರತಕ್ಕೆ ಸವಾಲಿನಿಂದ ಕೂಡಿದೆ. ರಿಷಭ್ ಪಂತ್ ಗೈರಿನಲ್ಲಿ 2023ರ ಏಕದಿನ ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದರು ಮತ್ತು ಮಧ್ಯಮ ಕ್ರಮಾಂಕದಲ್ಲಿ ರನ್‌ಗಳಿಸುವ ಮೂಲಕ ಸ್ಥಿರತೆ ಕಾಯ್ದುಕೊಂಡಿದ್ದರು. ಪಂತ್ ಪುನರಾಗಮನದ ಬಳಿಕ ಏಕದಿನದಲ್ಲಿ ಒಮ್ಮೆ ಮಾತ್ರ ಕೀಪಿಂಗ್ ನಿರ್ವಹಿಸಿದ್ದಾರೆ. ಇದರ ನಡುವೆ 11ರ ಬಳಗದಲ್ಲಿ ರಾಹುಲ್ ಸ್ಥಾನ ಪಡೆಯುವರೇ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದು, ಎಡಗೈ ಬ್ಯಾಟರ್ ಆಗಿರುವುದರಿಂದ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ವೈವಿಧ್ಯತೆಯನ್ನೂ ತುಂಬಲಿದ್ದಾರೆ. ಸದ್ಯದ ಾರ್ಮ್‌ನಲ್ಲಿ ರಾಹುಲ್ ೇವರಿಟ್ ಎನಿಸಿದ್ದು, ಆಸೀಸ್ ಪ್ರವಾಸದಲ್ಲಿ 276 ರನ್ ಕಲೆಹಾಕಿದ್ದಾರೆ. ರಣಜಿಯಲ್ಲಿ ಕರ್ನಾಟಕ ಪರ 26, 43 ರನ್‌ಗಳಿಸಿದ್ದರು. ಪಂತ್ ಕ್ರಮವಾಗಿ 255, 1 ಮತ್ತು 17 ರನ್‌ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಅಥವಾ ಪಂತ್ ಸರಣಿಯಲ್ಲಿ ವೈಲ್ಯ ಕಂಡರೆ ಮಾತ್ರ ರಾಹುಲ್‌ಗೆ ಸ್ಥಾನ ಒಲಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಒಂದು ವೇಳೆ ಪಂತ್ ಬದಲಿಗೆ ರಾಹುಲ್ ಸ್ಥಾನ ಪಡೆದರೆ, ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್‌ಗಳ ಕೊರತೆ ಕಾಡಲಿದೆ.
ಆಂಗ್ಲರಿಗೆ ಜೋ ರೂಟ್ ಬಲ
ಟಿ20 ಸರಣಿಯಲ್ಲಿ ಅನುಭವಿಸಿದ ಸೋಲಿನಿಂದ ಕಂಗೆಟ್ಟಿರುವ ಜೋಸ್ ಬಟ್ಲರ್ ಪಡೆ ಪುಟಿದೇಳುವ ವಿಶ್ವಾಸದಲ್ಲಿದೆ. ತಂಡದ ಯುವ ಬ್ಯಾಟರ್‌ಗಳು ಭಾರತೀಯ ಸ್ಪಿನ್ನರ್‌ಗಳ ಎದುರು ರನ್‌ಗಳಿಸಲು ಪರದಾಡುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಅನುಭವಿ ಜೋ ರೂಟ್ ಸೇರ್ಪಡೆ ಬಲ ತುಂಬಲಿದೆ. ಜತೆಗೆ ಸ್ಪಿನ್ನರ್‌ಗಳ ಎದುರು ಸರಾಗವಾಗಿ ರನ್‌ಗಳಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಹಿಂದಿನ ಎರಡು ಐಸಿಸಿ ಟೂರ್ನಿಗಳಲ್ಲಿ ನೀರಸ ನಿರ್ವಹಣೆ ತೋರಿರುವ ಆಂಗ್ಲರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಿಂದಿನ ಲಯಕ್ಕೆ ಮರಳುವ ಸವಾಲು ಎದುರಾಗಿದೆ. ಟಿ20ಯಲ್ಲಿ ಬೌಲರ್‌ಗಳು ದುಬಾರಿಯಾಗಿ ಕೈಕೊಡುತ್ತಿರುವುದು ಹಿನ್ನಡೆಯಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಎದುರು ಇಂಗ್ಲೆಂಡ್ ಸತತ 2 ಏಕದಿನ ಸರಣಿ ಸೋತ ಹಿನ್ನಡೆಯೂ ತಂಡಕ್ಕಿದೆ.
ಮುಖಾಮುಖಿ: 107
ಭಾರತ: 58
ಇಂಗ್ಲೆಂಡ್: 44
ಟೈ: 2, ರದ್ದು: 3
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್ ಸ್ಟಾರ್