25.7 C
Bangalore
Sunday, December 15, 2019

ಊಟ ಮಾಡುವಾಗ ನೀರು ಕುಡೀತೀರಾ..?: ಹಾಗಾದ್ರೆ ಪೌಷ್ಟಿಕತಜ್ಞರ ಸಲಹೆ ಕಡೆಗೊಮ್ಮೆ ಗಮನಹರಿಸುವುದೊಳಿತು..

Latest News

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಕ್ರಿಕೆಟ್ ಪಂದ್ಯಾವಳಿ, ಡಿಎಆರ್ ಮೈದಾನದಲ್ಲಿ ಲಾಠಿಗೆ ಮಣಿದ ಲೇಖನಿ

ಬಳ್ಳಾರಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಭಾನುವಾರ ಪೊಲೀಸರು ಮತ್ತು ಪತ್ರಕರ್ತರ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ...

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಉಹಾಪೋಹ – ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಯಚೂರು: ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಜಿಸಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಮುಂದಿನ ಸಚಿವ ಸಂಪುಟದ ವಿಸ್ತರಣೆ, ಬದಲಾವಣೆಯನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು...

ಮೊಬೈಲ್ ಹಾಳು ಮಾಡಿದ್ದಕ್ಕೆ ಸೋದರ ಮಾವನೇ ಬಾಲಕಿಗೆ ಚಾಕು ಇರಿದು ಹತ್ಯೆ

ಶಿವಮೊಗ್ಗ: ಮೊಬೈಲ್ ವಿಚಾರದಲ್ಲಿ ಭಾನುವಾರ ಸೋದರ ಮಾವನೇ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾಡಿಕೊಪ್ಪದಲ್ಲಿ ನಡೆದಿದೆ.5 ವರ್ಷದ ರಂಜನಿ ಹತ್ಯೆಯಾದ...

ಮಸ್ಕಿ ಕ್ಷೇತ್ರಕ್ಕೆ ಇನ್ನೆರಡು ತಿಂಗಳಲ್ಲಿ ಉಪಚುನಾವಣೆ ಸಾಧ್ಯತೆ – ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್

ಮಸ್ಕಿ: ಬಿಜೆಪಿ ಸೇರಿದ ಮೇಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಕೊಡಲು ಒಪ್ಪಿದ್ದಾರೆ. ಈಗಾಗಲೇ 50 ಕೋಟಿ ರೂ....

ನವದೆಹಲಿ: ಊಟಕ್ಕೂ ಮೊದಲು ಹಾಗೂ ಊಟದ ಬಳಿಕ ಯಾವ ಸಮಯದಲ್ಲಿ? ಎಷ್ಟು ಪ್ರಮಾಣದಲ್ಲಿ? ನೀರು ಕುಡಿಯಬೇಕೆಂಬ ಸಾಕಷ್ಟು ಚರ್ಚೆಗಳು ನಡೆದಿರುವುದನ್ನು ನಾವು ಕೇಳಿದ್ದೇವೆ. ಅದರಲ್ಲೂ ಅನೇಕರು ಊಟದ ಸಮಯದಲ್ಲಿ ನೀರಿನ ಲೋಟವನ್ನು ಕೆಳಗೆ ಹಾಗೂ ಮೇಲಕ್ಕೆ ಆಡಿಸುವುದನ್ನು ನೋಡಿದ್ದೇವೆ. ಇದರಿಂದ ಆಹಾರ ಜೀರ್ಣಕ್ಕೆ ಸಹಕಾರಿಯಾಗಲಿದೆ ಎಂದು ಅನೇಕರು ತಿಳಿದಿದ್ದಾರೆ. ಆದರೆ, ಪೌಷ್ಟಿಕತಜ್ಞರ ಇದು ತಪ್ಪು ಎಂಬುದು ನಿಮಗೆ ಅಚ್ಚರಿಯಾದರೂ ಸತ್ಯವಾಗಿದೆ.

ಹೌದು, ಊಟಕ್ಕೂ ಮೊದಲು, ನಂತರ ಹಾಗೂ ಊಟದ ನಡುವೆ ನೀರು ಕುಡಿಯುವುದನ್ನು ಅಭ್ಯಾಸ ಮಾಡುವುದರಿಂದ ಜೀರ್ಣ ಕ್ರಿಯೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತದೆ. ದೇಹಕ್ಕೆ ಬಹು ಮುಖ್ಯವಾದ ಗ್ಯಾಸ್ಟ್ರಿಕ್​ ಜ್ಯೂಸ್ ಅನ್ನು ದುರ್ಬಲಗೊಳಿಸುತ್ತದೆ. ಇದಲ್ಲದೆ, ಇನ್ಸುಲಿನ್​ ಮಟ್ಟವು ಉಲ್ಬಣಗೊಳ್ಳಲು ಕಾರಣವಾಗುತ್ತದೆ ಎಂದು ವಿವಿಧ ಅಧ್ಯಯನಗಳು ಪ್ರತಿಪಾದಿಸಿವೆ. ​

ಪೌಷ್ಟಿಕತಜ್ಞರು ಹೇಳುವ ಪ್ರಕಾರ, ನಾವು ಸೇವಿಸಿದ ಆಹಾರ ಜೀರ್ಣವಾಗಲು ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಸೇವಿಸುವ ಆಹಾರ ಅನ್ನನಾಳದಿಂದ ಹೊಟ್ಟೆಗೆ ಸೇರಿದ ಬಳಿಕ ದೇಹದಿಂದ ಹೊರ ಹೋಗುವ ಮುನ್ನ ದೊಡ್ಡ ಕರುಳಿಗೆ ಸೇರುತ್ತದೆ. ನಮ್ಮ ಗ್ಯಾಸ್ಟ್ರಿಕ್​ ಸಿಸ್ಟಮ್​ನಲ್ಲಿ ದ್ರವ(ಪ್ಲೂಯಿಡ್​) ಮತ್ತು ಘನ(ಸಾಲಿಡ್​) ಅಂಶಗಳು ಸಮ ಪ್ರಮಾಣದಲ್ಲಿವೆ. ಒಂದು ವೇಳೆ ಊಟಕ್ಕೂ ಮುನ್ನ ನೀರು ಕುಡಿದರೆ ಪ್ಲೂಯಿಡ್​ ಘಟಕಕ್ಕೆ ತೊಂದರೆಯಾಗುವುದಲ್ಲೇ ಸೇವಿಸಿದ ಆಹಾರವನ್ನು ದುರ್ಬಲಗೊಳಿಸುತ್ತದೆ. ಜೀರ್ಣ ಕ್ರಿಯೆಯು ವೇಗ ಪಡೆದುಕೊಂಡು ಆಹಾರ ಬೇಗನೇ ದೊಡ್ಡ ಕರುಳಿಗೆ ಸೇರಿಬಿಡುತ್ತದೆ. ಹೀಗಾಗಿ ಊಟಕ್ಕೂ ಮುನ್ನ ಆಹಾರ ಸೇವನೆ ತರವಲ್ಲ.

ಊಟದ ನಂತರ ನೀರು ಕುಡಿದರೂ ತೊಂದರೆಯಾಗುವ ಸಾಧ್ಯತೆ ಇದೆ. ಆಹಾರ ಜೀರ್ಣವಾಗಲು ತೆಗೆದುಕೊಳ್ಳುವ ಸ್ವಾಭಾವಿಕ ಸಮಯದ ಮೇಲೆ ಊಟದ ಬಳಿಕ ನೀರು ಕುಡಿಯುವುದರಿಂದಲೂ ತೊಂದರೆ ಇದೆ. ಬಹುಬೇಗ ಜೀರ್ಣಗೊಂಡು ಮತ್ತೆ ಹೊಟ್ಟೆ ಹಸಿಯುವ ಸಾಧ್ಯತೆ ಇರುತ್ತದೆ. ಇದರಿಂದ ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಸೇವಿಸಿ ಮತ್ತೆ ತೊಂದರೆಗೆ ಸಿಲುಕಬೇಕಾಗುತ್ತದೆ. ಹೀಗಾಗಿ ಊಟಕ್ಕೂ ಮೊದಲ ಹಾಗೂ ನಂತರ 30 ನಿಮಿಷ ಅಂತರದಲ್ಲಿ ನೀರು ಕುಡಿಯುವುದು ಒಳ್ಳೆಯದು ಎಂದು ಡಾ. ಸೂದ್​ ಸಲಹೆ ನೀಡಿದ್ದಾರೆ. ಈ 30 ನಿಮಿಷಗಳಲ್ಲಿ ಮುಂದಿನ ಹಂತದ ಜೀರ್ಣ ಕ್ರಿಯೆಗೆ ನಿಮ್ಮ ದೇಹದ ವ್ಯವಸ್ಥೆ ಹೊಂದಿಕೊಳ್ಳಲಿದೆ ಎಂಬುದು ಪೌಷ್ಟಿಕ ತಜ್ಞರ ಸ್ಪಷ್ಟನೆ.

ಊಟದ ಸಮಯದಲ್ಲಿ ನೀರು ಕುಡಿಯಲು ಕೆಲ ಸಮಯದ ಅಂತರ ನೀಡುವುದರಿಂದ ಬಹು ಮುಖ್ಯವಾದ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ. ಆದರೆ, ಈ ನಿಯಮ ಪಾಲಿಸದಿದ್ದಾಗ ವೇಗವಾಗಿ ಜೀರ್ಣಗೊಳ್ಳುವುದರಿಂದ ಕೆಲ ಆಹಾರ ಜೀರ್ಣವಾಗದೇ ಹಾಗೇ ಉಳಿದುಬಿಡುತ್ತದೆ. ಇದರಲ್ಲಿರುವ ಗ್ಲೂಕೋಸ್​ ಅಂಶ ಫ್ಯಾಟ್​​ ಆಗಿ ಪರಿವರ್ತನೆಗೊಂಡು ದೇಹದಲ್ಲೇ ಉಳಿಯುತ್ತದೆ. ಇದೇ ಪ್ರಕ್ರಿಯೆ ಮುಂದುವರಿದರೆ ದೇಹದಲ್ಲಿ ಇನ್ಸುಲಿನ್​ ಪ್ರಮಾಣ ಉಲ್ಬಣಗೊಳ್ಳುತ್ತದೆ. ಇದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಹಾಗೂ ಬೊಜ್ಜು ರೋಗಕ್ಕೆ ಕಾರಣವಾಗುತ್ತದೆ. ಹೀಗಾಗಿ ಊಟದ ಮುನ್ನ ಹಾಗೂ ಬಳಿಕ 30 ನಿಮಿಷ ಕಾಲಾವಾಕಾಶ ನೀಡುವುದು ಒಳಿತು ಎಂಬುದು ಪೌಷ್ಟಿಕತಜ್ಞರ ಅಭಿಪ್ರಾಯ.

ಕೊನೆಯಲ್ಲಿ ಬಹುಮುಖ್ಯವಾಗಿ ಗಮನಿಸದಬೇಕಾದ ಅಂಶವೆಂದರೆ ಪ್ರತಿ ದಿನವೊಂದಕ್ಕೆ ಕನಿಷ್ಟ 2 ಲೀಟರ್​ ನೀರನ್ನಾದರೂ ಪ್ರತಿಯೊಬ್ಬ ವ್ಯಕ್ತಿ ಸೇವಿಸಲೇ ಬೇಕು. ಇದರಿಂದ ಆರೋಗ್ಯ ವೃದ್ಧಿಯಾಗಲಿದೆ. ಅಲ್ಲದೆ, ನೀರು ಕುಡಿಯುವ ಸಮಯದ ಬಗ್ಗೆಯು ಎಚ್ಚರವಿರಲೆಂಬುದು ತಜ್ಞರ ಸಲಹೆ. (ಏಜೆನ್ಸೀಸ್​)

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...