ಈ ದೇಶದಲ್ಲಿ ವಾಸಿಸಲು ಅತ್ಯಾಧುನಿಕ ಸೌಲಭ್ಯಗಳ ಮನೆಗಳಿದ್ದರೂ ವಿರಳ ಜನಸಂಖ್ಯೆಯಿಂದ ದೆವ್ವದ ನಗರಗಳಾಗಿವೆ !

ಬಿಜೀಂಗ್​​: ಅಧಿಕ ಮನೆಗಳಿದ್ದರೂ ವಾಸ ಮಾಡಲು ಜನರೇ ಇಲ್ಲದ ಪರಿಸ್ಥಿತಿ ಈ ದೇಶದ ಅನೇಕ ನಗರಗಳಲ್ಲಿ ಉಂಟಾಗಿದೆ. ಜನವಸತಿಗೆ ಅಗತ್ಯವಾದ ಮೂಲ ಸೌಕರ್ಯಗಳಿದ್ದರೂ ಇಂತಹ ನಗರಗಳನ್ನು ದೆವ್ವದ ನಗರಗಳೆಂದು ಕರೆಯಲಾಗುತ್ತಿದೆ.

ಬೃಹತ್​ ಕಟ್ಟಡಗಳು, ಸುಸಜ್ಜಿತ ರಸ್ತೆಗಳು, ಶಾಪಿಂಗ್​​ ಮಾಲ್​​ಗಳನ್ನು ಹೊಂದಿರುವ 50 ನಗರಗಳಲ್ಲಿ ಮಿಲಿಯನ್​​​​ ಜನರು ವಾಸ ಮಾಡುವಷ್ಟು ಜಾಗವಿದೆ. ಆದರೆ, ಚೀನಾದ ಈ ನಗರಗಳಲ್ಲಿ ಕೆಲವೇ ಸಾವಿರ ಜನರು ವಾಸ ಮಾಡುತ್ತಿದ್ದು, ಉಳಿದ ಮನೆಗಳು ಖಾಲಿ-ಖಾಲಿಯಾಗಿವೆ.

ಚೀನಾ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಅನೇಕ ಮನೆಗಳನ್ನು ಕಟ್ಟಿಸಿದೆ. ಆದರೆ, ಅಲ್ಲಿನ ಜನರು ಉದ್ಯೋಗ ಹರಿಸಿ ಸಮುದ್ರ ತೀರದ ನಗರಗಳಲ್ಲಿ ಹೊರಟು ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ಪಸ್ತುತ ದಿನಗಳಲ್ಲಿ ಚೀನಾದ ಅನೇಕ ನಗರಗಳಲ್ಲಿ ಮಿಲಿಯನ್​ ಜನರು ವಾಸ ಮಾಡಬಹುದು. ಆದರೆ, ಕೇವಲ ಒಂದು ಲಕ್ಷ ಮಂದಿ ಮಾತ್ರವಿದ್ದಾರೆ.

ಚೀನಾ ಸರ್ಕಾರ ಇದರ ಬಗ್ಗೆ ತಲೆಕೆಡಿಕೊಳ್ಳುತ್ತಿಲ್ಲ. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿಯಾಗುವುದರ ಕಡೆ ಚಿಂತೆ ನಡೆಸುತ್ತಿದೆ. ಸದ್ಯ ಚೀನಾದಲ್ಲಿ 64 ಮಿಲಿಯನ್​ ಮನೆಗಳು ಖಾಲಿ ಇದ್ದು, ವಾಸಿಸಲು ಜನರೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. (ಏಜನ್ಸೀಸ್​)