ನವದೆಹಲಿ: ಇಂದಿನ ದಿನದಲ್ಲಿ ವಿಮಾನ ಪ್ರಯಾಣಿಕರು ಹಲವಾರು ನಿಯಮಗಳನ್ನು ಪಾಲಿಸಬೇಕಾಗಿರುವುದು ಅನಿವಾರ್ಯವಾಗಿದೆ. ಅದರಲ್ಲಿ ಸೀಟ್ ಬೆಲ್ಟ್ ಧರಿಸುವುದು ಒಂದು ಉದಾಹರಣೆಯಾಗಿದೆ. ನಿಯಮವನ್ನು ಪಾಲಿಸುವ ಅನೇಕರು ಅದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಉದಾಹರಣೆಗೆ ವಿಮಾನದ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಕ್ಯಾಬಿನ್ ಲೈಟ್ ಅನ್ನು ಏಕೆ ಮಂಕಾಗಿಸುತ್ತಾರೆ ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ. ಆದರೆ ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಛೇದರ್ ಎಂಬ ನ್ಯೂಸ್ ವೆಬ್ಸೈಟ್ ತಿಳಿಸಿದೆ.
ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಲೈಟ್ಸ್ ಅನ್ನು ಮಂಕಾಗಿಸುವುದು ಇಂದಿನ ದಿನಗಳಲ್ಲಿ ತುಂಬಾ ಮುಖ್ಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಪ್ರಯಾಣಿಕರ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳಲು ಹೀಗೆ ಮಾಡಲಾಗುತ್ತದೆ
ನಮ್ಮ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳಲು ಸುಮಾರು 10 ರಿಂದ 30 ನಿಮಿಷ ತೆಗೆದುಕೊಳ್ಳುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಾಗ ಈ ಕೆಲವು ನಿಮಿಷಗಳಲ್ಲಿ ಎಲ್ಲ ರೀತಿಯ ವ್ಯತ್ಯಾಸಗಳನ್ನು ಮಾಡಬಹುದಾಗಿದೆ. ಲೈಟ್ಸ್ಗಳನ್ನು ಮಂಕಾಗಿಸುವುದರಿಂದ ನಮ್ಮ ಕಣ್ಣುಗಳು ಮುಂಚೆಯೇ ಕತ್ತಲೆಗೆ ಹೊಂದಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ತಕ್ಷಣ ಏನಾದರೂ ಸಂಭವಿಸಿದರೆ ಮತ್ತು ವಿದ್ಯುತ್ ಹೋದರೆ ನಮ್ಮ ಕಣ್ಣುಗಳಿಗೆ ಏನಾಗುವುದಿಲ್ಲ ಎಂದು ಏರ್ಲೈನ್ ಪೈಲಟ್ ಪ್ಯಾಟ್ರಿಕ್ ಸ್ಮಿತ್ ತಿಳಿಸಿದ್ದಾರೆ.
ವಿಮಾನದ ಲೈಟ್ಸ್ಗಳನ್ನು ಡಿಮ್ಮಿಂಗ್ ಅಥವಾ ಆಫ್ ಮಾಡುವುದರಿಂದ ಎಮರ್ಜೆನ್ಸಿ ಪಾಥ್-ಲೈಟಿಂಗ್ ಮತ್ತ ಸಂಕೇತಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇನ್ನು ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲೇಕೆ ಲೈಟ್ಸ್ಗಳನ್ನು ಆಫ್ ಮಾಡುತ್ತಾರೆಂದರೆ, ಸಾಕಷ್ಟು ವಿಮಾನ ಅಪಘಾತಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲೇ ಸಂಭವಿಸುವುದರಿಂದ ಸುರಕ್ಷಿತ ದೃಷ್ಟಿಯಿಂದ ಹೀಗೆ ಮಾಡಲಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್)