ಪೊಲೀಸಪ್ಪ ಸಂಜೀವ್​ ಭಟ್ ಉದ್ಧಟ ಪ್ರಶ್ನೆಗೆ ಭಜ್ಜಿ ದೂಸ್ರಾ ತಿರುಗೇಟು!

ನವದೆಹಲಿ: ಟರ್ಬನೇಟರ್​ ಎಂದೇ ಖ್ಯಾತಿ ಹೊಂದಿರುವ ಭಾರತದ ಆಫ್​ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಮೈದಾನದಲ್ಲಿ ಎಷ್ಟು ಚುರುಕಾಗಿರುತ್ತಾರೋ ಸಾಮಾಜಿಕ ಜಾಲತಾಣದಲ್ಲಿಯೂ ಅಷ್ಟೇ ಚುರುಕಾಗಿರುತ್ತಾರೆ. ತಮ್ಮ ಸಾಮಾಜಿಕ ಕಾಳಜಿಯನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಖಡಕ್ಕಾಗಿ ವ್ಯಕ್ತಪಡಿಸುವ ಭಜ್ಜಿ ಯಾರಾದರೂ ಉದ್ಧಟತನ ಮಾಡಲು ಮುಂದಾದರೆ ಅಷ್ಟೇ ಚೆನ್ನಾಗಿ ದೂಸ್ರಾ ಎಸೆಯುತ್ತಾರೆ. ಇವತ್ತು ಕೂಡ ಅಂತಹ ಒಂದು ದೂಸ್ರಾ ಹಾಕಿ ವಿಕೆಟ್​ ಪಡೆದಿದ್ದಾರೆ.

ಗುಜರಾತಿನ ಅತ್ಯಂತ ವಿವಾದಾತ್ಮಕ ಮಾಜಿ ಐಪಿಎಸ್​ ಅಧಿಕಾರಿ ಸಂಜೀವ್​ ಭಟ್ ಭಾರತ ತಂಡದಲ್ಲಿ ಪ್ರಸ್ತುತ ಯಾರಾದರೂ ಮುಸ್ಲಿಂ ಆಟಗಾರರಿದ್ದಾರೆಯೇ ಎಂದು ಟ್ವೀಟ್​ ಮಾಡಿದ್ದರು.

ಅದಕ್ಕೆ ಟ್ವೀಟ್​ ಮೂಲಕವೇ ಉತ್ತರಿಸಿರುವ ಟರ್ಬನೇಟರ್​ ಭಾರತಕ್ಕಾಗಿ ಆಡುವ ಪ್ರತಿಯೊಬ್ಬ ಆಟಗಾರ ಹಿಂದೂಸ್ತಾನಿ. ಅವರ ಜಾತಿ, ಮತ ಚರ್ಚೆಯಾಗಬೇಕಾಗಿಲ್ಲ ಎಂದು ಸ್ಪಿನ್ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *