ಬೆಂಗಳೂರು ಸೆಂಟ್ರಲ್‌ನಿಂದಲೇ ನಟ ಪ್ರಕಾಶ್‌ ರಾಜ್‌ ಸ್ಪರ್ಧೆ ಯಾಕೆ? ಉತ್ತರ ಇಲ್ಲಿದೆ

ಬೆಂಗಳೂರು : ನನ್ನ ಜರ್ನಿಯನ್ನು ನಾನು ನಿರ್ಧಾರ ಮಾಡುವುದಿಲ್ಲ. ನನ್ನ ಬದುಕೇ ನನ್ನನ್ನು ಕರೆದುಕೊಂಡು ಹೋಗಿದೆ ಎಂದು ನಟ ಪ್ರಕಾಶ್‌ ರಾಜ್‌ ಹೇಳಿದ್ದು, ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಅನ್ನೇ ಯಾಕೆ ಆಯ್ಕೆ ಮಾಡಿಕೊಂಡೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ನನ್ನ ಕ್ಷೇತ್ರ, ಹುಟ್ಟು ಸ್ಥಳ, ಬಾಲ್ಯ ಇಲ್ಲೆ. ವಿದ್ಯಾಭ್ಯಾಸವೂ ಇಲ್ಲೇ ಆಗಿದೆ. ರಂಗಭೂಮಿ ಹಾಗೂ ಸಿನಿಮಾ ಪದಾರ್ಪಣೆ ಮಾಡಿದ್ದು ಕೂಡ ಇಲ್ಲೆ. ನನ್ನ ಬೇರು ಇಲ್ಲಿದೆ. ಗೆಳೆಯರು ಆಪ್ತರು ಇಲ್ಲಿದ್ದಾರೆ. ಬೆಂಗಳೂರು ಸೆಂಟ್ರಲ್ ಎನ್ನುವುದು ಮಿನಿ ಇಂಡಿಯಾ. ಬೇರೆ ಭಾಷಿಕರು ಇಲ್ಲಿದ್ದಾರೆ. ಎಲ್ಲ ಧರ್ಮದ ಜನರು ಇದ್ದಾರೆ ಎಂದರು.

ನನಗೆ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ. ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬೇಕೆಂಬ ಆಸೆಯೂ ಇಲ್ಲ. ರಾಜಕೀಯ ಅಧಿಕಾರದ ಆಸೆಗಳಿಲ್ಲ. ಹಿಂದೆ ನಟರು ರಾಜಕೀಯದಲ್ಲಿ ಯಶಸ್ವಿಯಾಗದೆ ಇರಬಹುದು. ಆದರೆ, ನಾನು ಕೇವಲ‌ ನಟನಲ್ಲ. ಹೋರಾಟಗಾರ, ವಿದ್ಯಾವಂತ, ನಾಲ್ಕೈದು ರಾಷ್ಟ್ರ ಸುತ್ತಿದ್ದೇನೆ. ಸಾಹಿತ್ಯದ ಗಂಧಗಾಳಿ ಗೊತ್ತಿದೆ. ನಾಯಕನಾಗುವ ಎಲ್ಲ‌ ಅರ್ಹತೆ ನನಗೆ ಇದೆ ಎಂದು ಸಮರ್ಥಿಸಿಕೊಂಡರು.

One Reply to “ಬೆಂಗಳೂರು ಸೆಂಟ್ರಲ್‌ನಿಂದಲೇ ನಟ ಪ್ರಕಾಶ್‌ ರಾಜ್‌ ಸ್ಪರ್ಧೆ ಯಾಕೆ? ಉತ್ತರ ಇಲ್ಲಿದೆ”

Comments are closed.