Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ರೂಪಾಯಿ ಏರಿಳಿತದ ಹಾದಿ

Tuesday, 11.09.2018, 3:06 AM       No Comments

ಜಾಗತಿಕ ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯ ದಿನೇದಿನೆ ಇಳಿಕೆಯಾಗುತ್ತಿರುವುದು ಹೆಚ್ಚು ಗಮನಸೆಳೆಯುತ್ತಿದೆ. ಆದರೆ, ಜಗತ್ತಿನ ಇತರೆ ಕೆಲವು ಕರೆನ್ಸಿಗಳೆದರು ರೂಪಾಯಿ ಮೌಲ್ಯ ವರ್ಧನೆ ಆಗುತ್ತಿರುವ ವಿಚಾರವನ್ನು ಕಡೆಗಣಿಸುವಂತಿಲ್ಲ. ಈ ವಿದ್ಯಮಾನದ ಸಂಕ್ಷಿಪ್ತ ನೋಟ ಇಲ್ಲಿದೆ.

ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಲೇ ಇದೆ. ಆದರೆ ವಿಶ್ವದ ಪ್ರಮುಖ ಕರೆನ್ಸಿಗಳೆದುರು ರೂಪಾಯಿ ಮೌಲ್ಯ ಬಲವರ್ಧಿಸಿಕೊಳ್ಳುತ್ತಿರುವುದು ವಿಶೇಷ. ಕಳೆದ 5 ವರ್ಷದಲ್ಲಿ ಸಿಂಗಾಪುರ ಡಾಲರ್, ಸ್ವಿಸ್ ಫ್ರಾಂಕ್ ಹಾಗೂ ಯುಎಸ್ ಡಾಲರ್ ಹೊರತುಪಡಿಸಿ ವಿಶ್ವದ ಬಹುತೇಕ ಎಲ್ಲ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ವರ್ಧನೆಯಾಗಿದೆ. ಆದರೆ ಜಾಗತಿಕ ಹಾಗೂ ಭಾರತ ವ್ಯಾಪಾರವು ಅಮೆರಿಕನ್ ಡಾಲರ್​ನಲ್ಲಿಯೇ ಹೆಚ್ಚು ನಡೆಯುವುದರಿಂದ ರೂಪಾಯಿ ಮೌಲ್ಯ ಕುಸಿತ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಇರಾನ್​ನಿಂದ ಕಚ್ಚಾ ತೈಲ ಖರೀದಿಗೆ ನಿರ್ಬಂಧ, ಅಮೆರಿಕದಿಂದ ಆಮದು ಹೆಚ್ಚು ಮಾಡಿರುವುದು ಭಾರತಕ್ಕೆ ಈ ಅಪಮೌಲ್ಯ ತಲೆಬಿಸಿಯಾಗಿದೆ. ಎನ್​ಡಿಎ ಸರ್ಕಾರದ ಅವಧಿಯಲ್ಲಿ ಇರಾನ್​ಗೆ ಕಚ್ಚಾತೈಲ ಖರೀದಿಗಾಗಿ ಡಾಲರ್ ಬದಲು ರೂಪಾಯಿ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಅಮೆರಿಕಕ್ಕೆ ಮತ್ತೆ ಡಾಲರ್​ನ್ನು ನೀಡುವ ಪರಿಸ್ಥಿತಿ ನಿರ್ವಣವಾಗಿದೆ. ಇದು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಭಾರತದ ಅಭಿವೃದ್ಧಿ ಮುನ್ನೋಟ ನೀಡುವಾಗ ರೂಪಾಯಿ ಮೌಲ್ಯ ಹಾಗೂ ತೈಲಬೆಲೆಯ ಎಚ್ಚರಿಕೆ ನೀಡಲಾಗಿತ್ತು.

ಡಾಲರ್ ಮೌಲ್ಯ ಏರಿಕೆಗೆ ಕಾರಣ: ಜಾಗತಿಕವಾಗಿ ಅಮೆರಿಕನ್ ಡಾಲರ್​ನಲ್ಲೇ ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತದೆ. ಐಎಂಎಫ್ ಪ್ರಕಾರ ಜಾಗತಿಕ ಫೊರೆಕ್ಸ್ ಸಂಗ್ರಹದಲ್ಲಿ ಅಮೆರಿಕನ್ ಡಾಲರ್ ಪಾಲು ಶೇ.62.5 ಇದೆ. ಈಗ ಯುಎಸ್ ಡಾಲರ್​ಗೆ ಮತ್ತಷ್ಟು ಬೇಡಿಕೆ ಬಂದಿದೆ. ಇದರ ಜತೆಗೆ ಅಮೆರಿಕನ್ ಫೆಡರಲ್ ಬ್ಯಾಂಕ್​ನಿಂದ ಡಾಲರ್ ಪೂರೈಕೆ ಕಡಿಮೆ ಮಾಡಲಾಗಿದೆ. ಹಾಗೆಯೇ ಬಡ್ಡಿದರವನ್ನು ಅಮೆರಿಕದಲ್ಲಿ ಏರಿಸಿದ್ದರೆ, ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್​ನಲ್ಲಿ ಇಳಿಸಲಾಗಿದೆ. ಇದರಿಂದ ಡಾಲರ್​ನಲ್ಲಿ ಠೇವಣಿ ಹೆಚ್ಚಾಗುತ್ತಿದೆ. ಇವೆಲ್ಲದರ ಜತೆಗೆ ವಾಣಿಜ್ಯ ಹಾಗೂ ತೈಲ ಸಮರ ಕೂಡ ಪರಿಣಾಮ ಬೀರಿದೆ.

 

Leave a Reply

Your email address will not be published. Required fields are marked *

Back To Top