ಮಂದಿರಕ್ಕೆ ಮುಹೂರ್ತ?

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ತುರ್ತು ಕ್ರಮ ಕೈಗೊಳ್ಳುವ ಸಂಬಂಧ ಅ.5ರಂದು ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆಗೊಂಡಿದೆ. ವಿಶ್ವ ಹಿಂದು ಪರಿಷದ್ (ವಿಎಚ್​ಪಿ) ಮತ್ತು ಸಂತ ಸಮಿತಿಯ 36 ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ನಡೆಯಲಿರುವ ಸಭೆಯಲ್ಲಿ ಸಮಿತಿ ರಾಮಮಂದಿರ ನಿರ್ವಣದ ರೂಪುರೇಷೆ ಸಿದ್ಧಪಡಿಸಲಿದೆ. ಸದ್ಯ ರಾಮ ಮಂದಿರ ನಿರ್ಮಾಣ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದ್ದು, ತೀರ್ಪು ಬಂದ ನಂತರ ಅನುಸರಿಸಬೇಕಾದ ಮಾಗೋಪಾಯಗಳ ಕುರಿತೂ ಸಭೆಯಲ್ಲಿ ಒಮ್ಮತಕ್ಕೆ ಬರುವ ಸಾಧ್ಯತೆಗಳಿವೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸರಣಿ ಉಪನ್ಯಾಸ ಕಾಯಕ್ರಮದಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಪ್ರಸ್ತಾಪಿಸಿದ್ದರು. ‘ರಾಮಮಂದಿರ ನಿರ್ಮಾಣ ದೇಶದ ಜನರ ಭಾವನೆಯೊಡನೆ ಬೆರೆತುಕೊಂಡಿದೆ. ಬಹುತೇಕರಿಗೆ ಶ್ರೀರಾಮ ಮೂರ್ತಿರೂಪದಲ್ಲಿ ಆಪ್ತನಾಗಿದ್ದಾನೆ’ ಎಂದಿದ್ದರು. ಈ ಹೇಳಿಕೆ ಪರೋಕ್ಷವಾಗಿ ಶೀಘ್ರ ರಾಮಮಂದಿರ ನಿರ್ವಿುಸುವ ಸಂಕಲ್ಪದ ಸುಳಿವಾಗಿತ್ತೆಂದು ವಿಶ್ಲೇಷಿಸಲಾಗುತ್ತಿದೆ.