20.1 C
Bangalore
Friday, December 6, 2019

ಆಸ್ಪತ್ರೆಯಲ್ಲಿ ಆನಂದ್ ಸಿಂಗ್​: ಗಣೇಶ್​, ಭೀಮಾನಾಯ್ಕ್​, ಸಿಂಗ್​ ನಡುವೆ ವೈಷಮ್ಯವೇಕೆ? ಇಲ್ಲಿದೆ ಮಾಹಿತಿ…

Latest News

ಎಲ್ಲ ಮಠಾಧೀಶರು ಅಭಿಯಾನ ಆರಂಭಿಸಲಿ

ಚಿತ್ರದುರ್ಗ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದಿಂದ ಆಯೋಜಿಸಿರುವ ಭಗವದ್ಗೀತಾ ಅಭಿಯಾನದ ನಿಮಿತ್ತ ಶುಕ್ರವಾರ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಭಾಷಣ, ಭಗವದ್ಗೀತೆ ಕಂಠಪಾಠ...

ಕೋಟೆ ನಾಡಲ್ಲಿಂದು ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ವ್ಯಕ್ತಿತ್ವ ವಿಕಸನ, ಸಾಮಾಜಿಕ ಸಾಮರಸ್ಯ, ದೇಶದ ಏಕತೆ ಸಲುವಾಗಿ ಶಿರಸಿ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವ...

14ರಂದು ಲೋಕ್ ಅದಾಲತ್

ಚಿತ್ರದುರ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ನ.14ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಲೋಕ್ ಆದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು...

ಆಯುಷ್ ಉಚಿತ ಚಿಕಿತ್ಸಾ ಶಿಬಿರ

ಪರಶುರಾಮಪುರ: ಹೋಬಳಿಯ ಪಿ.ಮಹದೇವಪುರ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಇತ್ತೀಚಿಗೆ ಆಯುಷ್ ಉಚಿತ ಚಿಕಿತ್ಸಾ ಶಿಬಿರ ನಡೆಯಿತು. ಗ್ರಾಪಂ ವ್ಯಾಪ್ತಿಯ ಪಿ.ಓಬನಹಳ್ಳಿ, ಕಡೇಹುಡೆ,...

ಡ್ರೋನ್ ಕಣ್ಣಿಗೂ ಬೀಳದ ಒಂಟಿ ಸಲಗ

ಚಿತ್ರದುರ್ಗ: ಕೆನ್ನೆಡಲು ಅರಣ್ಯದಲ್ಲಿ ಸಲಗದ ಹೆಜ್ಜೆ ಗುರುತು ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಶುಕ್ರವಾರ ಡ್ರೋನ್ ಬಳಸಿದರೂ ಆನೆ ಪ್ರಯೋಜನವಾಗಿಲ್ಲ. ಹಿಂಡಿಂದ ಅಗಲಿದೇ ಎಂದು ಹೇಳಲಾಗಿರುವ...

ಬೆಂಗಳೂರು: ಕಾಂಗ್ರೆಸ್​ ಶಾಸಕ ಅನಂದ್ ಸಿಂಗ್​ ಅವರು ಶನಿವಾರ ರಾತ್ರಿ ಈಗಲ್ಟನ್​ ರೆಸಾರ್ಟ್​ನಲ್ಲಿ ಮತ್ತೊಬ್ಬ ಶಾಸಕ ಗಣೇಶ್​ ಅವರಿಂದ ಹಲ್ಲೆಗೊಳಗಾಗಿ, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಭಿನ್ನಮತದ ಬೇಗೆಯಲ್ಲಿ ಕುದಿಯುತ್ತಿರುವ ಕಾಂಗ್ರೆಸ್​ಗೆ, ಬಳ್ಳಾರಿ ಜಿಲ್ಲೆಯ ಶಾಸಕರಾದ ಆನಂದ್ ಸಿಂಗ್​, ಗಣೇಶ್​ ಮತ್ತು ಭೀಮಾನಾಯ್ಕ್​ ನಡುವಿನ ಜಗಳ ಸದ್ಯ ತೀವ್ರ ಮುಜುಗರ ಉಂಟು ಮಾಡಿದೆ.

ಶನಿವಾರ ರಾತ್ರಿ ಹಲ್ಲೆಗೊಳಗಾದ ಆನಂದ್​ ಸಿಂಗ್​ ಅವರನ್ನು ರಾತ್ರಿ 2-30ರ ಸಮಾರಿಗೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಯೇ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ.

ಹೊಡೆದಾಟ, ಹಲ್ಲೆಯ ಮಟ್ಟಕ್ಕೆ ಹೋಗಬಹುದಾದ ಕೋಪ ಬಳ್ಳಾರಿಯ ಈ ಮೂವರು ಶಾಸಕರ ನಡುವೆ ಉದ್ಘವಿಸಿದ್ದಾದರೂ ಏಕೆ? ಆಗಿದ್ದೇನು ಎಂದು ಹುಡುಕಿ ಹೊರಟಾಗ ಹಲವು ಅಂಶಗಳು ಗೊತ್ತಾಗಿವೆ. ಸದ್ಯ ಕಾಂಗ್ರೆಸ್​ನಲ್ಲಿ ಎದುರಾಗಿರುವ ಬಂಡಾಯ, ಭಿನ್ನಮತವನ್ನೂ ಮೀರಿ ವೈಯಕ್ತಿಕ ವೈಷಮ್ಯಗಳು ಈ ಮೂವರ ನಡುವೆ ಹೊಗೆಯಾಡುತ್ತಿದ್ದದ್ದು ಬಯಲಾಗಿದೆ.

ಶನಿವಾರ ರಾತ್ರಿ ಮೊದಲಿಗೆ ಗಲಾಟೆ ಆರಂಭವಾಗಿದ್ದು ಶಾಸಕ ಭೀಮಾನಾಯ್ಕ್​ ಮತ್ತು ಆನಂದ್​ ಸಿಂಗ್​ ಅವರ ನಡುವೆ ಎನ್ನಲಾಗಿದೆ. ಈ ಇಬ್ಬರ ಜಗಳದಲ್ಲಿ ಮಧ್ಯಪ್ರವೇಶ ಮಾಡಿದ ಗಣೇಶ್​, ಆನಂದ್​ ಸಿಂಗ್​ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಮೂಲಗಳ ಮಾಹಿತಿ.

ಶಾಸಕ ಭೀಮಾನಾಯ್ಕ್​ ಪ್ರತಿನಿಧಿಸುವ ಹಗರಿಬೊಮ್ಮನ‌ಹಳ್ಳಿ ಕ್ಷೇತ್ರದಲ್ಲಿ ಆನಂದ ಸಿಂಗ್ ಅಭಿಮಾನಿ ಬಳಗದ ಕಚೇರಿ ತೆರೆಯಲಾಗಿತ್ತು. ಇದು ಭೀಮಾನಾಯ್ಕ್​ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಅದರೆ ಜತೆಗೆ ಕಂಪನಿಯೊಂದರ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಮನೆ ಮಾಡಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಈ ಮೊದಲು ಗಲಾಟೆ ನಡೆದಿತ್ತು ಎನ್ನಲಾಗಿದೆ.

ಇಬ್ಬರ ನಡುವಿನ ಜಗಳದಲ್ಲಿ ಮಧ್ಯಪ್ರವೇಶ ಮಾಡಿದ್ದ ಗಣೇಶ್​, ಆನಂದ್​ ಸಿಂಗ್​ ಅವರ ಮೇಲೆ ಹಲ್ಲೆ ಮಾಡಿದ್ದರು. ಅದಕ್ಕೂ ಕಾರಣಗಳಿವೆ ಎನ್ನುತ್ತಿವೆ ಬಲ್ಲ ಮೂಲಗಳು. ಆಪರೇಷನ್​ ಕಮಲದ ಮಾಹಿತಿಯನ್ನು ಆನಂದ್​ ಸಿಂಗ್​ ಕಾಂಗ್ರೆಸ್​ ನಾಯಕರಿಗೆ ನೀಡಿದ್ದರು. ಇದರಿಂದಾಗಿಯೇ ಬಿಜೆಪಿ ಸೇರುವ ಗಣೇಶ್​ ಅವರ ಯೋಜನೆ ವಿಫಲವಾಗಿತ್ತು. ಈ ವಿಷಯ ಪ್ರಸ್ತಾಪಿಸಿಯೇ ಗಣೇಶ್​, ಆನಂದ್​ ಸಿಂಗ್​ ಮೇಲೆ ಹಲ್ಲೆ ಮಾಡಿದರೆನ್ನಲಾಗಿದೆ. “ಬಿಜೆಪಿ ಸೇರಿದ್ದರೆ ನಾನು ಮಂತ್ರಿ ಆಗಿರುತ್ತಿದ್ದೆ. ನಿನ್ನ ಮಾತು ಕೇಳಿ ಕೆಟ್ಟೆ” ಎಂದು ಅವರು ಹಲ್ಲೆಗೂ ಮೊದಲು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಇನ್ನು ಈ ಘಟನೆಯನ್ನು ಸಚಿವ ಡಿ.ಕೆ ಶಿವಕುಮಾರ್​ ನಿರಾಕರಿಸಿದರಾದರೂ, ಬಳ್ಳಾರಿ ಸಂಸದ ಉಗ್ರಪ್ಪ ಬೇರೆ ರೀತಿಯಲ್ಲೇ ಮಾತನಾಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿರುವ ಅವರು, “ಆನಂದ್ ಸಿಂಗ್​ ಮತ್ತು ಗಣೇಶ್​ ಗಲಾಟೆ ಮಾಡಿಕೊಂಡ ಬಗ್ಗೆ ನನಗೆ ಮಾಹಿತಿಯಿಲ್ಲ. ಜನಪ್ರತಿನಿಧಿಗಳು ಸಂಯಮದಿಂದ ವರ್ತಿಸಬೇಕು. ಗಲಾಟೆಯಾಗಿದ್ದರೆ ಇಬ್ಬರನ್ನೂ ಕರೆಸಿ ರಾಜಿ ಮಾಡುತ್ತೇವೆ. ಬಂಡಾಯದ ಬೆಳವಣಿಗೆಗೂ, ಶಾಸಕರ ಗಲಾಟೆಗೂ ಸಂಬಂಧವಿಲ್ಲ,” ಎಂದು ಹೇಳಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್​ “ಆನಂದ್​ ಸಿಂಗ್​ ಅವರ ಮೇಲೆ ಹಲ್ಲೆ ನಡೆದಿದೆ ಎಂಬುದನ್ನು ನಾನು ಮಾಧ್ಯಮಗಳ ಮೂಲಕವಷ್ಟೇ ತಿಳಿದುಕೊಂಡಿದ್ದೇನೆ. ಅಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಮಾಹಿತಿ ಲಭ್ಯವಾದ ನಂತರ ಮಾತನಾಡುತ್ತೇನೆ,” ಎಂದು ಹೇಳಿದ್ದಾರೆ.

ಈ ನಡುವೆ, ಇಂದು ನಡೆಯಬೇಕಿದ್ದ ಶಾಸಕರೊಂದಿಗಿನ ಕೆ.ಸಿ. ವೇಣುಗೋಪಾಲ್​ ಅವರ ಸಮಾಲೋಚನಾ ಸಭೆಯನ್ನು ಈ ಬೆಳವಣಿಗೆ ಹಿನ್ನೆಲೆಯಲ್ಲೇ ಮುಂದೂಡಲಾಗಿದೆ.

Stay connected

278,738FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...