ಸಿನಿಮಾ

ಯುಪಿಎಸ್​ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿರುವ ಇಶಿತಾ ಕಿಶೋರ್​ ಯಾರು..?

ದೆಹಲಿ: ಸತತ ಪರಿಶ್ರಮ ನಿಮ್ಮನ್ನು ಸಾಧನೆಯತ್ತ ಕೊಂಡೊಯ್ಯತ್ತದೆ ಎಂಬುದಕ್ಕೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿರುವ ಇಶಿತಾ ಕಿಶೋರ್ ಎಂಬುವರೇ ಸಾಕ್ಷಿ. 2022ರ ಯುಪಿಎಸ್‌ಸಿ ಅಂತಿಮ ಫಲಿತಾಂಶದಲ್ಲಿ ಟಾಪರ್ ಆಗಿ ಹೊರಹೊಮ್ಮಿರುವ ಇಶಿತಾ ಸಾಧನೆ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಂಡ್​ ಆಗಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಬಿಡಲ್ಲ: ಡಿಕೆಶಿ

ಗ್ರೇಟರ್ ನೋಯ್ಡಾದ ನಿವಾಸಿಯಾಗಿರುವ ಇಶಿತಾ ದೆಹಲಿಯ ಶಾಲೆಯಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿ, ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪಡೆದರು. ಈ ಪದವಿಯು ಅವಳಿಗೆ ನಾಗರಿಕ ಸೇವಾ ಪರೀಕ್ಷೆಗೆ ಬೇಕಾದ ಭದ್ರ ಬುನಾದಿಯನ್ನು ಹಾಕಿತು.

ಈ ಹಿಂದೆ ಎರಡು ಬಾರಿ ಯುಪಿಎಸ್​ಸಿ ಪರೀಕ್ಷೆಯನ್ನು ತೆಗೆದುಕೊಂಡಿದ್ದ ಇಶಿತಾ, ತಮ್ಮ ಹಿಂದಿನ ಪ್ರಯತ್ನಗಳಲ್ಲಿ ವಿಫಲರಾಗಿದ್ದರು. ಆದರೆ ಎದೆಗುಂದದ ಇಶಿತಾ ಸೋಲನ್ನು ಒಪ್ಪಿಕೊಳ್ಳದೇ, ಸಂಕಲ್ಪ ಮಾಡಿ ಮೂರನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಆಕೆಯ ಈ ಸಾಧನೆಗೆ ಹಲವಾರು ಗಣ್ಯರು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್)

Latest Posts

ಲೈಫ್‌ಸ್ಟೈಲ್