More

    PHOTOS| ಯಾರೀ ಹಾರ್ದಿಕ್​ ಪಾಂಡ್ಯ ಹೃದಯ ಕದ್ದ ಚೋರಿ: ನಟಿ ನತಾಶಾರ ನಶೆ ಏರಿಸೋ ಬೋಲ್ಡ್​ ಫೋಟೋಗಳ ಝಲಕ್​!

    ನವದೆಹಲಿ: ಟೀಮ್​ ಇಂಡಿಯಾದ ಆಲ್​ರೌಂಡರ್​ ಆಟಗಾರ ಹಾರ್ದಿಕ್​ ಪಾಂಡ್ಯ ಹೊಸ ವರ್ಷದಂದೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಏನಪ್ಪಾ ಆ ಸುದ್ದಿಯೆಂದರೇ ಹಾರ್ದಿಕ್​ ಅವರ ನಿಶ್ಚಿತಾರ್ಥ. ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್​ರೊಂದಿಗೆ ಎಂಗೇಜ್​ ಆಗುವ ಮೂಲಕ ಜೀವನದ ಮತ್ತೊಂದು ಇನ್ನಿಂಗ್ಸ್​ ಆರಂಭಿಸಲು ಪಾಂಡ್ಯ ಸಜ್ಜಾಗಿದ್ದರೆ. ಅಷ್ಟಕ್ಕೂ ನತಾಶಾ ಸ್ಟಾಂಕೋವಿಕ್​ ಯಾರು ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಈ ಸ್ಟೋರಿ ಓದಿ….

    ಮಾರ್ಚ್​ 4, 1992ರಂದು ಜನಿಸಿದ ನತಾಶಾ, ಸೆರ್ಬಿಯಾ ಮೂಲದ ಓರ್ವ ಮಾಡೆಲ್​. 2012ಕ್ಕೆ ಭಾರತಕ್ಕೆ ಕಾಲಿಟ್ಟ ಈ ಬ್ಯೂಟಿ ಇಂಡಿಯನ್​ ರ್ಯಾಪರ್​ ಬಾದ್​ಷಾ ಅವರ ಮ್ಯೂಸಿಕ್​ ವಿಡಿಯೋ ಆಲ್ಬಂನಲ್ಲಿ ಹೆಜ್ಜೆ ಹಾಕುವ ಮೂಲಕ ಪ್ರಖ್ಯಾತಿ ಗಳಿಸಿದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನತಾಶಾ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

    ನತಾಶಾ ಅವರು ಮೊದಲಿಗೆ ಪ್ರಕಾಶ್​ ಝಾ ಅವರ ಸತ್ಯಾಗ್ರಹ ಸಿನಿಮಾದಲ್ಲಿ ‘ಅಯೋ ಜಿ’ ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡರು. ಇದಾದ ಬೆನ್ನಲ್ಲೇ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡರು.

    ಬಳಿಕ ಫರ್ಕಿ ರಿಟರ್ನ್ಸ್​(ಮೆಹಬೂಬ), ಡ್ಯಾಡಿ(ಜಿಂದಗಿ ಮೆರಿ ಡ್ಯಾನ್ಸ್​ ಡ್ಯಾನ್ಸ್​) ಮತ್ತು ಫ್ರೈ ಡೇ (ಜಿಮೈ ಛೋಯಿ) ಚಿತ್ರಗಳ ಹಾಡಿನಲ್ಲಿ ನತಾಶಾ ಕಾಣಿಸಿಕೊಂಡರು. ಇತ್ತೀಚೆಗೆ ಇಮ್ರಾನ್​ ಹಶ್ಮಿ ಅವರ ದಿ ಬಾಡಿ ಚಿತ್ರದ ಜಲಕ್​ ದಿಕಲಾಜಾ ಹೊಸ ಅವತರಣಿಕೆಯ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.

    ಇದಕ್ಕೂ ಮುನ್ನ 2019ರ ನಾಚ್​ ಬೆಲಿಯೇ-9 ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಇದರಲ್ಲಿ ಮೂರನೇ ರನ್ನರ್​ ಅಪ್​ ಆಗಿದ್ದರು.

    ಕನ್ನಡದಲ್ಲಿಯೂ ನಶೆ ಏರಿಸಿದ ನತಾಶಾ
    ನಟ ದುನಿಯಾ ವಿಜಯ್​ ಅಭಿನಯದ ಯೋಗರಾಜ್​ ಭಟ್​ ನಿರ್ದೇಶನದ ದನ ಕಾಯೋನು ಚಿತ್ರದಲ್ಲಿಯು ನತಾಶಾ ಕಾಣಿಸಿಕೊಂಡಿದ್ದಾರೆ.

    ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ಎಂಗೇಜ್ಡ್’ ಎಂದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸುವ ಮೂಲಕ ಸುದ್ದಿಯಾದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts