More

    Miss Universe 2023: ಈಜುಡುಗೆ ಸುತ್ತಿನಲ್ಲಿ ‘ಬುರ್ಕಿನಿ’ ಧರಿಸಿ ಇತಿಹಾಸ ಸೃಷ್ಟಿಸಿದ ಪಾಕ್ ಮಾಡೆಲ್; ಯಾರು ಈ ಎರಿಕಾ ರಾಬಿನ್?

    ಮುಂಬೈ: ಪ್ರತಿ ವರ್ಷದಂತೆ ಈ ವರ್ಷವೂ ಮಿಸ್ ಯೂನಿವರ್ಸ್ ಸ್ಪರ್ಧೆ ನಡೆಯಿತು. ನಿಕರಾಗುವಾದ ಶೆನ್ನಿಸ್ ಪಲಾಸಿಯೊಸ್ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.

    ಅಂದಹಾಗೆ ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 84 ದೇಶಗಳ ರೂಪದರ್ಶಿಗಳು ಭಾಗವಹಿಸಿದ್ದರು. ಇವರೆಲ್ಲರನ್ನು ಸೋಲಿಸಿ ಶೆನ್ನಿಸ್ ಪ್ರಶಸ್ತಿ ಗೆದ್ದರು. ಮತ್ತೊಂದೆಡೆ, ವೇದಿಕೆಯಲ್ಲಿ ‘ಬುರ್ಕಿನಿ’ ಧರಿಸಿ ಓಡಾಡಿದ ರೂಪದರ್ಶಿ ಎರಿಕಾ ರಾಬಿನ್ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಮಾಡೆಲ್ ಯಾರು ಮತ್ತು ಅವರು ಎಲ್ಲಿ ವಾಸಿಸುತ್ತಾರೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ…

    ಎರಿಕಾ ರಾಬಿನ್ ಯಾರು?
    ಎರಿಕಾ ರಾಬಿನ್ ಸೆಪ್ಟೆಂಬರ್ 14, 1999 ರಂದು ಪಾಕಿಸ್ತಾನದ ಕರಾಚಿಯಲ್ಲಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಇವರು ಪಾಕಿಸ್ತಾನದಲ್ಲಿ ಕೇವಲ 1 ಪ್ರತಿಶತದಷ್ಟಿರುವ ಕ್ರಿಶ್ಚಿಯನ್ ಸಮುದಾಯದ ಭಾಗವಾಗಿದ್ದಾರೆ. ಎರಿಕಾ 2020 ರಿಂದ ಮಾಡೆಲಿಂಗ್ ಜಗತ್ತನ್ನು ಪ್ರವೇಶಿಸಿದರು. ಶಾಲಾ ಶಿಕ್ಷಣವನ್ನು ಸೇಂಟ್ ಪ್ಯಾಟ್ರಿಕ್ಸ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ನಂತರ ಅವರು ತಮ್ಮ ಕಾಲೇಜು ಶಿಕ್ಷಣವನ್ನು ಸರ್ಕಾರಿ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

    ಪಾಕಿಸ್ತಾನದ ಸುಂದರಿ
    24 ವರ್ಷದ ಎರಿಕಾ ರಾಬಿನ್ 72ನೇ ಗ್ಲೋಬಲ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷದಂತೆ, ಈ ವರ್ಷವೂ ಮಿಸ್ ಯೂನಿವರ್ಸ್ 2023 ಗಾಗಿ ಈಜುಡುಗೆ ರೌಂಡ್ ಇತ್ತು, ಇದರಲ್ಲಿ ಎರಿಕಾ ರಾಬಿನ್ ಸಹ ಭಾಗವಹಿಸಿದ್ದರು. ಅದು ಕೂಡ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿದೆ.

    ಈಜುಡುಗೆ ಸುತ್ತಿನಲ್ಲಿ ‘ಬುರ್ಕಿನಿ’ ಧರಿಸಿದ್ದ ಎರಿಕಾ
    ಎರಿಕಾ ರಾಬಿನ್ ರ‍್ಯಾಂಪ್ ವಾಕ್ ಮಾಡುವುದರ ಜೊತೆಗೆ ಟಾಪ್ 20 ಸುಂದರಿಯರಲ್ಲಿ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಈಜುಡುಗೆ ಧರಿಸುವ ಬದಲು ‘ಬುರ್ಕಿನಿ’ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಈ ಮೂಲಕ ಎರಿಕಾ ರಾಬಿನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇವರು ತಿಳಿ ಗುಲಾಬಿ ಬಣ್ಣದ ‘ಬುರ್ಕಿನಿ’ಯನ್ನು ತಲೆಯಿಂದ ಪಾದದವರೆಗೆ ಮುಚ್ಚಿದ್ದರು.

    Miss Universe 2023: ಈಜುಡುಗೆ ಸುತ್ತಿನಲ್ಲಿ 'ಬುರ್ಕಿನಿ' ಧರಿಸಿ ಇತಿಹಾಸ ಸೃಷ್ಟಿಸಿದ ಪಾಕ್ ಮಾಡೆಲ್; ಯಾರು ಈ ಎರಿಕಾ ರಾಬಿನ್?

    ‘ಬುರ್ಕಿನಿ’ ಎಂದರೇನು?
    ಅನೇಕ ಜನರು ಎರಿಕಾ ರಾಬಿನ್ ಧರಿಸಿರುವ ‘ಬುರ್ಕಿನಿ’ ಏನೆಂದು ತಿಳಿಯಲು ಬಯಸುತ್ತಾರೆ ಅಲ್ಲವೇ, ಇದು ಒಂದು ರೀತಿಯ ಸ್ವಿಮ್ ಸೂಟ್ ಆಗಿದ್ದು, ದೇಹವನ್ನು ಸಂಪೂರ್ಣವಾಗಿ ಮುಚ್ಚಿರುತ್ತದೆ. ಬಿಕಿನಿಯಂತಹ ಬಟ್ಟೆಗಳನ್ನು ಧರಿಸದ ಮುಸ್ಲಿಂ ಮಹಿಳೆಯರಿಗಾಗಿ ಇದನ್ನು ವಿಶೇಷವಾಗಿ ತಯಾರಿಸಲಾಗಿದೆ. ಬುರ್ಖಾ ಮತ್ತು ಬಿಕಿನಿಯನ್ನು ಸಂಯೋಜಿಸಿ ಈ ವೇಷಭೂಷಣಕ್ಕೆ ‘ಬುರ್ಕಿನಿ’ ಎಂದು ಹೆಸರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts