ನರೇಂದ್ರ ಮೋದಿ ಸಂಪುಟ ಸೇರಿದ ನೂತನ ಸಚಿವರ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ…

ನವದೆಹಲಿ: ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿಗೆ ಕೇಂದ್ರದ ಗದ್ದುಗೆ ಏರಿರುವ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟಕ್ಕೆ 58 ಜನ ಸಂಸದರು ಆಯ್ಕೆಯಾಗಿದ್ದು, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

ಕ್ಯಾಬಿನೆಟ್​ ದರ್ಜೆ ಸಚಿವರು

1. ನರೇಂದ್ರ ಮೋದಿ – ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ಸಚಿವಾಲಯ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆ.

2. ರಾಜನಾಥ್​ ಸಿಂಗ್​ – ರಕ್ಷಣಾ ಇಲಾಖೆ

3. ಅಮಿತ್​ ಷಾ – ಗೃಹ ಇಲಾಖೆ

4. ನಿತಿನ್​ ಜಯರಾಮ್​ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ.

5. ಡಿ.ವಿ. ಸದಾನಂದಗೌಡ – ರಾಸಾಯನಿಕ ಮತ್ತು ರಸಗೊಬ್ಬರ ಖಾತೆ.

6. ನಿರ್ಮಲಾ ಸೀತಾರಾಮನ್​ – ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ.

7. ರಾಮ್​ ವಿಲಾಸ್​ ಪಾಸ್ವನ್​ – ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ.

8. ನರೇನ್​ ಸಿಂಗ್​ ತೋಮರ್ – ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌.

9. ರವಿಶಂಕರ್​ ಪ್ರಸಾದ್​ – ಕಾನೂನು ಮತ್ತು ನ್ಯಾಯ, ಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ.

10. ಹರ್​ಸಿಮ್ರತ್​ ಕೌರ್​ ಬಾದಲ್​ – ಆಹಾರ ಸಂಸ್ಕರಣಾ ಇಂಡಸ್ಟ್ರೀಸ್‌

11. ಥಾವರ್​ ಚಂದ್​ ಗೆಹ್ಲೋಟ್​ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.

12. ಸುಬ್ರಮಣಿಯನ್​ ಜೈ ಶಂಕರ್​ – ವಿದೇಶಾಂಗ ವ್ಯವಹಾರ

13. ರಮೇಶ್​ ಪೋಕ್ರಿಯಾಲ್​​ ನಿಶಾಂತ್​ – ಮಾನವ ಸಂಪನ್ಮೂಲ ಅಭಿವೃದ್ಧಿ.

14. ಅರ್ಜುನ್​ ಮುಂಡಾ – ಬುಡಕಟ್ಟು ವ್ಯವಹಾರ

15. ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ ಖಾತೆ.

16. ಡಾ. ಹರ್ಷವರ್ಧನ್​ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ.

17. ಪ್ರಕಾಶ್​ ಜಾವಡೇಕರ್​ – ಪರಿಸರ, ಅರಣ್ಯ ಮತ್ತು ಹವಾಮಾನ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ.

18. ಪಿಯೂಷ್​ ಗೋಯಲ್​ – ರೈಲ್ವೆ, ವಾಣಿಜ್ಯ ಮತ್ತು ಉದ್ಯಮ.

19. ಧರ್ಮೇಂದ್ರ ಪ್ರಧಾನ್​ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು.

20. ಮುಕ್ತಾರ್​ ಅಬ್ಬಾಸ್​ ನಖ್ವಿ – ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ.

21. ಪ್ರಲ್ಹಾದ್ ಜೋಶಿ – ಸಂಸದೀಯ ವ್ಯವಹಾರಗಳ ಸಚಿವ, ಕಲ್ಲಿದ್ದಲು ಮತ್ತು ಗಣಿಗಾರಿಕೆ.

22. ಡಾ. ಮಹೇಂದ್ರ ನಾಥ್​ ಪಾಂಡೆ – ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ.

23. ಡಾ. ಅರವಿಂದ್​ ಗಣಪತ್​ ಸಾವಂತ್​ – ದೊಡ್ಡ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ.

24. ಗಿರಿರಾಜ್​ ಸಿಂಗ್​ – ಪಶುಸಂಗೋಪನೆ ಮತ್ತು ಮೀನುಗಾರಿಕೆ.

25. ಗಜೇಂದ್ರ ಸಿಂಗ್​ ಶೇಖಾವತ್​ – ಜಲಶಕ್ತಿ.

ರಾಜ್ಯ ದರ್ಜೆ ಸಚಿವರು (ಸ್ವತಂತ್ರ ನಿರ್ವಹಣೆ)

1. ಸಂತೋಷ್​ ಕುಮಾರ್​ ಗಂಗ್ವಾರ್​ – ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ.

2. ರಾವ್​ ಇಂದ್ರಜಿತ್​ ಸಿಂಗ್​ – ಅಂಕಿ ಅಂಶ ಮತ್ತು ಕಾರ್ಯಸೂಚಿ ಸಚಿವಾಲಯ; ಯೋಜನಾ ಸಚಿವಾಲಯದ ರಾಜ್ಯ ಸಚಿವ.

3. ಶ್ರೀಪಾದ್​ ನಾಯಕ್​ – ಆಯುಷ್‌ ಮತ್ತು ರಕ್ಷಣಾ ಸಚಿವಾಲಯದ ರಾಜ್ಯ ಸಚಿವ.

4. ಡಾ. ಜಿತೇಂದ್ರ ಸಿಂಗ್​ – ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ; ಪ್ರಧಾನಿ ಕಚೇರಿಯ ರಾಜ್ಯ ಸಚಿವ.

5. ಕಿರಣ್​ ರಿಜಿಜು – ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ.

6. ಪ್ರಲ್ಹಾದ್​ ಸಿಂಗ್​ ಪಟೇಲ್​ – ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ.

7. ರಾಜ್​ ಕುಮಾರ್​ ಸಿಂಗ್​ – ವಿದ್ಯುತ್‌ ಸಚಿವಾಲಯ; ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ; ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ

8. ಹರ್ದೀಪ್​ ಸಿಂಗ್​ ಪುರಿ – ವಸತಿ ಮತ್ತು ನಗರ ವ್ಯವಹಾರಗಳು; ನಾಗರಿಕ ವಿಮಾನಯಾನ ಸಚಿವಾಲಯ; ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ.

9. ಮನ್​ಸುಖ್​ ಮಾಂಡವಿಯಾ – ಬಂದರು ಸಚಿವಾಲಯ; ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಖಾತೆ ಸಚಿವಾಲಯ.

ರಾಜ್ಯ ದರ್ಜೆ ಸಚಿವರು

1. ಫಗ್ಗನ್​ ಸಿಂಗ್​ ಫುಲಸ್ತೆ – ಉಕ್ಕು ರಾಜ್ಯ ಖಾತೆ.

2. ಅಶ್ವಿನಿ ಕುಮಾರ್​ ಚೌಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ

3. ಅರ್ಜುನ್​ ರಾಮ್​ ಮೇಘವಾಲ್​ – ಸಂಸದೀಯ ವ್ಯವಹಾರ; ದೊಡ್ಡ ಉದ್ಯಮ ಮತ್ತ ಸಾರ್ವಜನಿಕ ಉದ್ಯಮಶೀಲತೆ ರಾಜ್ಯ ಖಾತೆ.

4. ವಿ.ಕೆ. ಸಿಂಗ್​ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಖಾತೆ.

5. ಕ್ರಿಶನ್​ ಪಾಲ್​ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ.

6. ರಾವ್​ಸಾಹೇಬ್​ ದಾದಾರಾವ್​ ಪಾಟೀಲ್​ ದಾನ್ವೆ – ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ರಾಜ್ಯ ಖಾತೆ.

7. ಕಿಶನ್​ ರೆಡ್ಡಿ – ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ.

8. ಪರಶೋತ್ತಮ್​ ರೂಪಾಲ – ಕೃಷಿ ಮತ್ತು ರೈತರ ಕಲ್ಯಾಣ.

9. ರಾಮ್​ದಾಸ್​ ಅಠಾವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ.

10. ಸಾಧ್ವಿ ನಿರಂಜನ್​ ಜ್ಯೋತಿ – ಗ್ರಾಮೀಣಾಭಿವೃದ್ಧಿ ಸಚಿವಾಲಯ.

11. ಬಾಬುಲ್​ ಸುಪ್ರಿಯೋ – ಪರಿಸರ, ಅರಣ್ಯ, ಹವಾಮಾನ.

12. ಡಾ. ಸಂಜೀವ್​ ಕುಮಾರ್​ ಬಾಲಿಯಾನ್​ – ಪಶುಸಂಗೋಪನೆ, ಹಾಲು ಮತ್ತು ಮೀನುಗಾರಿಕೆ.

13. ಸಂಜಯ್​ ಶಾಮರಾವ್​ ಧೋತ್ರೆ – ಮಾನವ ಸಂಪನ್ಮೂಲ ಅಭಿವೃದ್ಧಿ; ಸಂವಹನ ಸಚಿವಾಲಯ; ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ.

14. ಅನುರಾಗ್​ ಸಿಂಗ್​ ಠಾಕೂರ್​ – ಹಣಕಾಸು; ಕಾರ್ಪೊರೇಟ್‌ ಸಚಿವಾಲಯ.

15. ಸುರೇಶ್​ ಅಂಗಡಿ – ರೈಲ್ವೆ ರಾಜ್ಯ ಖಾತೆ.

16. ನಿತ್ಯಾನಂದ ರಾಯ್​ – ಗೃಹ ಸಚಿವಾಲಯದ ರಾಜ್ಯ ಖಾತೆ.

17. ರತನ್​ ಲಾಲ್​ ಕಠಾರಿಯಾ – ಜಲಶಕ್ತಿ; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ.

18. ವಿ. ಮುರಳೀಧರನ್​ – ವಿದೇಶಾಂಗ ವ್ಯವಹಾರ; ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ.

19. ರೇಣುಕಾ ಸಿಂಗ್​ – ಬುಡಕಟ್ಟು ವ್ಯವಹಾರಗಳ ರಾಜ್ಯ ಖಾತೆ

20. ಸೋಮ್​ ಪ್ರಕಾಶ್​ – ವಾಣಿಜ್ಯ ಮತ್ತು ಉದ್ಯಮ ರಾಜ್ಯ ಖಾತೆ.

21. ರಾಮೇಶ್ವರ್​ ತೇಲಿ – ಆಹಾರ ಸಂಸ್ಕರಣಾ ರಾಜ್ಯ ಖಾತೆ.

22. ಪ್ರತಾಪ್​ ಚಂದ್ರ ಸಾರಂಗಿ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಶೀಲತೆ; ಪಶುಸಂಗೋಪನೆ, ಹಾಲು ಮತ್ತು ಮೀನುಗಾರಿಕೆ ರಾಜ್ಯ ಖಾತೆ.

23. ಕೈಲಾಶ್​ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ.

24. ದೇಬಶ್ರಿ ಚೌಧರಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ