ಬೆಂಗಳೂರು: ಕರೊನಾ ಒಂದು ಎರಡನೆಯ ಅಲೆ ಮುಗಿದು ಇದೀಗ ಮೂರನೇ ಅಲೆ ರಾಜ್ಯದಲ್ಲಿ ವ್ಯಾಪಿಸಿಕೊಂಡಿದೆ. ಮೊದಲ ಅಲೆಯ ಬಳಿಕದ ಅಲೆಗಳಲ್ಲಿ ರೂಪಾಂತರಿ ವೈರಸ್ಗಳು ಕಾಣಿಸಿಕೊಂಡಿರುವುದು ಕೂಡ ಹೊಸದೇನಲ್ಲ. ಆದರೆ ಅವುಗಳಲ್ಲಿ ಯಾವ ರೂಪಾಂತರಿ ಎಷ್ಟು ಕಾಡುತ್ತಿದೆ ಎಂಬ ಸ್ಪಷ್ಟ ಚಿತ್ರಣ ಸಾರ್ವಜನಿಕರಿಗೆ ಸರಿಯಾಗಿ ಸಿಕ್ಕಿರಲಿಲ್ಲ.
ಇದೀಗ ಆ ಮಾಹಿತಿ ಕೂಡ ಅಂಕಿ-ಅಂಶ ಸಹಿತಿ ಹೊರಬಿದ್ದಿದೆ. ಅದರಿಂದಾಗಿ ಯಾವ ಅಲೆಯಲ್ಲಿ ಯಾವ ರೂಪಾಂತರಿಯ ಪ್ರಭಾವ ಹೆಚ್ಚು ಎಂಬುದು ಕೂಡ ಅಂಕಿ-ಅಂಶ ಸಹಿತ ತಿಳಿದುಬಂದಿದೆ. ಅಂಥದ್ದೊಂದು ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಯಾವ ಅಲೆಯಲ್ಲಿ ಯಾವ ರೂಪಾಂತರಿ ಅಧಿಕವಾಗಿತ್ತು ಎಂಬುದು ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ದೃಢಪಟ್ಟಿದೆ. ಅಂದರೆ ಕರೊನಾ ಎರಡನೇ ಅಲೆಯಲ್ಲಿ ಶೇ.90.7 ಡೆಲ್ಟಾ ರೂಪಾಂತರಿ ಇದ್ದಿದ್ದು, ಮೂರನೇ ಅಲೆಯಲ್ಲಿ ಶೇ. 67.5 ಒಮಿಕ್ರಾನ್ ಮತ್ತು ಶೇ. 26 ಡೆಲ್ಟಾ ಇರುವುದು ಜೀನೋಮ್ ಸೀಕ್ವೆನ್ಸ್ನಿಂದ ತಿಳಿದುಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಠಾಣೆಗೇ ಬಂದಿತ್ತು ಎಸ್ಪಿ ಕಾರು: ಸರ್ಕಲ್ ಇನ್ಸ್ಪೆಕ್ಟರ್ಗೂ ಮುಳುವಾಯ್ತು ಎಸ್ಐ ದರ್ಬಾರು…