ತಾಯಿಯಾಗುವ ಬಗ್ಗೆ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದು ಹೀಗೆ…

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ನ್ಯೂಯಾರ್ಕ್​ನ ಮೆಟ್​ ಗಲಾ-2019ರಲ್ಲಿ ತಮ್ಮ ವಿಭಿನ್ನ ವೇಷ, ಕೇಶಶೈಲಿಯಿಂದ ಹಲವು ತರಹದ ಟ್ರೋಲ್​ಗೆ ಒಳಗಾಗಿದ್ದರು. ಪತಿ ನಿಕ್​ ಜೋನಾಸ್​ರೊಂದಿಗೆ ಸಮಾರಂಭಲ್ಲಿ ಭಾಗವಹಿಸಿದ್ದ ಅವರು, ಹಲವು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು.

ಪ್ರಿಯಾಂಕಾ ಚೋಪ್ರಾ 2018ರ ಡಿಸೆಂಬರ್​ನಲ್ಲಿ ಅಮೆರಿಕ ಮೂಲದ ನಿಕ್​ ಜೋನಾಸ್​ ಅವರ ಕೈ ಹಿಡಿದಿದ್ದಾರೆ. ಈಗಾಗಲೇ ಈ ದಂಪತಿಯನ್ನು ಹಲವು ಬಾರಿ ಮಗುವನ್ನು ಪಡೆಯಲು ಪ್ಲ್ಯಾನ್​ ಮಾಡಿಲ್ಲವಾ? ನಿಮ್ಮ ಮೊದಲ ಮಗು ಯಾವಾಗ ಎಂಬಂಥ ಪ್ರಶ್ನೆಗಳನ್ನು ಮಾಧ್ಯಮದವರೂ ಕೇಳಿದ್ದರು. ಹಾಗೆ ಕೇಳಿದಾಗಲೆಲ್ಲ, ನಾವು ಈಗಷ್ಟೇ ಸಂಸಾರ ಶುರು ಮಾಡಿದ್ದೇವೆ, ವೃತ್ತಿಗೆ ಸಂಬಂಧಪಟ್ಟಂತೆ ಕೆಲವು ಕಮಿಟ್​ಮೆಂಟ್​ಗಳಿವೆ ಎಂದು ಹೇಳಿದ್ದರು.

ಈಗ ಮತ್ತೆ ಟಿವಿ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಅವರನ್ನು ಇದೇ ಪ್ರಶ್ನೆ ಕೇಳಲಾಗಿತ್ತು. ಮೊದಲ ಮಗು ಪಡೆಯುವ ಬಗ್ಗೆ ಯೋಚನೆ ಏನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ನನಗೂ ಕೂಡ ಮಗುವನ್ನು ಪಡೆಯಲು ಇಷ್ಟ. ಆದರೆ ಅದೆಲ್ಲ ದೇವರ ಇಚ್ಛೆ. ಕಾಲ ಕೂಡಿ ಬಂದಾಗ ಆಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಕಳೆದ ವರ್ಷ ಮದುವೆಯಾಗಿದ್ದ ಪ್ರಿಯಾಂಕಾ, ಈಗಾಗಲೇ ನನ್ನ ಕೆಲವು ಸ್ನೇಹಿತರು ಮದುವೆಯಾಗಿ ಮಗುವನ್ನೂ ಹೊಂದಿದ್ದಾರೆ. ಈಗಾಗಲೇ ತುಂಬ ಮುಂದಿರುವ ಅವರನ್ನು ತಲುಪಲು ನಾನೂ ಏನಾದರೂ ಪ್ರಯತ್ನ ಮಾಡಬೇಕು ಎಂದು ಅಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು.