Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

300 ಪಂದ್ಯ ಆಡಿದ್ದೇನೆ? ನನಗೇನು ಹುಚ್ಚಾ ಎಂದಿದ್ದರು ಧೋನಿ

Wednesday, 11.07.2018, 7:38 PM       No Comments

ನವದೆಹಲಿ: ಕ್ಯಾಪ್ಟನ್​ ಕೂಲ್​… ಹೀಗೆನ್ನುತ್ತಲೇ ಯಾರಿಗಾದರೂ ಗೊತ್ತಾಗುತ್ತದೆ ಅದ್ಯಾರು ಎಂದು. ಹೌದು ಅದು ಮಹೇಂದ್ರ ಸಿಂಗ್​ ಧೋನಿ. ಈ ಕೂಲ್​ ಧೋನಿಗೂ ಒಮ್ಮೊಮ್ಮೆ ಕೋಪ ಬರುತ್ತದೆ ಎಂದರೆ ನಂಬಲೇ ಬೇಕು.

ಯಾಕೆ ಗೊತ್ತಾ? ಪಂದ್ಯವೊಂದರಲ್ಲಿ ಮಹೇಂದ್ರ ಸಿಂಗ್​ ಧೋನಿ ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಮೇಲೆ ಕೋಪಗೊಂಡಿದ್ದರಂತೆ. “300 ಪಂದ್ಯವಾಡಿರುವ ನನಗೇನು ಹುಚ್ಚಾ?” ಎಂದು ಆನ್​ಫೀಲ್ಡ್​ನಲ್ಲೇ ರೇಗಿದ್ದರಂತೆ.

ಸ್ವತಃ ಕುಲದೀಪ್​ ಯಾದವ್​ ಅವರೇ “ವಾಟ್​ ಎ ಡಕ್​ ” ಎಂಬ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
“ಕಳೆದ ವರ್ಷ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಪಂದ್ಯದಲ್ಲಿ ಈ ಪ್ರಸಂಗ ನಡೆಯಿತು. ನಾನು ಬಾಲ್​ ಅನ್ನು ಎಲ್ಲಿಯೇ ಪಿಚ್​ ಮಾಡಿದರೂ, ಬ್ಯಾಟ್ಸ್​ಮನ್​ ಬಾಲನ್ನು ಸಿಕ್ಸ್​ನತ್ತ ಅಟ್ಟುತ್ತಿದ್ದರು. ಆ ಫೀಲ್ಡ್​ ಕೂಡ ಚಿಕ್ಕದಾಗಿತ್ತು. ಇದಾದ ನಂತರ ಮಾಹಿ ಬಾಯ್​ ಕಡೆ ನಾನೊಮ್ಮ ತಿರುಗಿ ನೋಡಿದೆ. ಮುಂದಿನ ಬಾಲ್​ನತ್ತ ಗಮನ ಹರಿಸು ಎಂದರು. ನಾಲ್ಕನೇ ಓವರ್​ನಲ್ಲಿ ಬೌಲ್​ ಮಾಡುವಾಗ ಬ್ಯಾಟ್ಸ್​ಮನ್​ ಬಾಲ್​ ಅನ್ನು ರಿವರ್ಸ್​ ಸ್ಪೀಪ್​ ಮೂಲಕ ಫೋರ್​ ಬೌಂಡ್ರಿಗೆ ಅಟ್ಟಿದರು. ಆಗ ನನ್ನ ಬಳಿಗೆ ಬಂದ ಮಾಹಿ ಬಾಯ್​, ಕವರ್​ ಫೀಲ್ಡ್​ನಲ್ಲಿರುವವನ್ನು ತೆಗೆದು ಡೀಪ್​ಗೆ ಕಳುಹಿಸು, ಪಾಯಿಂಟ್​ನಲ್ಲಿ ಒಬ್ಬರನ್ನು ನಿಲ್ಲಿಸು ಎಂದು ಸಲಹೆ ನೀಡಿದರು. ಆಗನ ನಾನು, ಇಲ್ಲ… ಈಗಿರುವುದೇ ಸರಿಯಿದೆ ಎಂದೆ. ನನ್ನ ಮಾತು ಕೇಳಿಸಿಕೊಂಡವರೇ ಕೋಪಗೊಂಡ ಮಾಹಿ ಬಾಯ್​, “ನಾನೇನು ಹುಚ್ಚನಾ? ಈ ಮಾತು ಹೇಳಲು? 300 ಏಕದಿನ ಪಂದ್ಯಗಳನ್ನು ಆಡಿದ್ದೇನೆ ನಾನು,” ಎಂದು ಕೋಪದಿಂದ ಹೇಳಿದರು.

“ನಂತರ ಅವರ ಮಾತಿನಂತೆಯೇ ಫೀಲ್ಡ್​ ಸರಿಪಡಿಸಿಕೊಂಡು ಬೌಲ್​ ಮಾಡಿದೆ. ಮರುಕ್ಷಣವೇ ನನಗೆ ವಿಕೆಟ್​ ಸಿಕ್ಕಿತು,” ಎಂದು ಕುಲದೀಪ್​ ಯಾದವ್ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top