ಭಾರತದ ಲೈಂಗಿಕ ಕಾರ್ಯಕರ್ತೆ ಕತೆ ಕೇಳಿ ಕಣ್ಣೀರಿಟ್ಟಿದ್ದ ವಿಶ್ವದ ಸಿರಿವಂತ!

ನವದೆಹಲಿ: ಭಾರತದ ಲೈಂಗಿಕ ಕಾರ್ಯಕರ್ತೆಯೊಬ್ಬರ ಕತೆ ಕೇಳಿ ಮೈಕ್ರೋಸಾಫ್ಟ್​ ಸ್ಥಾಪಕ ಬಿಲ್​ಗೇಟ್ಸ್​ ಕಣ್ಣೀರಿಟ್ಟಿದ್ದರು ಎಂದು ಪುಸ್ತಕವೊಂದರಲ್ಲಿ ದಾಖಲಾಗಿದೆ.

ಏಡ್ಸ್ ತಡೆಗಟ್ಟುವಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಲೈಂಗಿಕ ಕಾರ್ಯಕರ್ತೆಯ ಮಗಳು ಶಾಲೆಯಲ್ಲಿ ಸಹಪಾಠಿಗಳು ಮಾಡುತ್ತಿದ್ದ ಅವಮಾನ ಮತ್ತು ಕಿರುಕುಳ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದ ಕತೆ ಕೇಳಿ ಬಿಲ್​ ಗೇಟ್ಸ್​ ಕಣ್ಣೀರಿಟ್ಟಿದ್ದರು ಎಂದು ನೂತನ ಪುಸ್ತಕದಲ್ಲಿ ತಿಳಿಸಲಾಗಿದೆ.

ಅಲೆಕ್ಸಾಂಡರ್​ ಎಂಬ ಲೇಖಕ ತಮ್ಮ ಪುಸ್ತಕದಲ್ಲಿ ಈ ಕುರಿತು ವಿವರಿಸಿದ್ದು, ಆ ಪುಟ್ಟ ಬಾಲಕಿ ನೇಣಿಗೆ ಶರಣಾಗುವ ಮುಂಚೆ ಬರೆದ ಡೆತ್​ನೋಟ್​ನಲ್ಲಿ ಇನ್ನು ಎಲ್ಲವನ್ನೂ ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದು ಬರೆದಿದ್ದಳು ಎಂಬುದನ್ನು ನನ್ನ ಪಕ್ಕದಲ್ಲೇ ಕುಳಿತು ಕೇಳುತ್ತಿದ್ದ ಬಿಲ್​ ಗೇಟ್ಸ್​ ತಲೆ ತಗ್ಗಿಸಿ ಕಣ್ಣೀರು ಹಾಕಿದರು ಎಂದಿದ್ದಾರೆ. (ಏಜೆನ್ಸೀಸ್)