More

    ಶೀಘ್ರದಲ್ಲೆ ಮತ್ತೊಂದು ವಿಶೇಷ ಫೀಚರ್​ ನೀಡಲು ಮುಂದಾದ ವಾಟ್ಸ್​ಆ್ಯಪ್

    ದೆಹಲಿ: ಜಗತ್ತಿನಾದ್ಯಂತ ಸಾವಿರಾರು ಮಿಲಿಯನ್​ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ವಾಟ್ಸ್​ಆ್ಯಪ್ ಕಂಪನಿಯು ತನ್ನ ಬಳಕೆದಾರರಿಗೆ ಹಿಂದಿನಿಂದಲೂ ಹೊಸ ಫೀಚರ್​​ಗಳನ್ನು ನೀಡುತ್ತಲೇ ಬಂದಿದೆ.

    ಇದನ್ನೂ ಓದಿ: ಗ್ಯಾರಂಟಿಗಳನ್ನು ಕೊಡದಿದ್ದರೆ ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ: ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರೆಡ್ಡಿ

    ಅಲ್ಲದೇ, ಕೆಲವು ದಿನಗಳ ಹಿಂದೆ ಖಾಸಗಿತನ ಮತ್ತು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ವ್ಯಾಟ್ಸ್​​ಆ್ಯಪ್ ಚಾಟ್​​ಲಾಕ್ ಹಾಗೂ ಸಂದೇಶ ಕಳುಹಿಸಿದ ಬಳಿಕ 15 ನಿಮಿಷದೊಳಗಾಗಿ ತಿದ್ದುಪಡಿ ಮಾಡುವ ಫೀಚರ್​ನ್ನು ತನ್ನ ಬಳಕೆದಾರರಿಗೆ ನೀಡಿತ್ತು.

    ಸದ್ಯ, ಕಂಪನಿಯು ತನ್ನ ಬಳಕೆದಾರರಿಗೆ ಯೂಸರ್​ ನೇಮ್​ ಎಂಬ ವಿಶಿಷ್ಟ ಫೀಚರ್​ನ್ನು ನೀಡುವ ಬಗ್ಗೆ ಯೋಚಿಸುತ್ತಿದೆ. ಇದರ ಪ್ರಕಾರ ಬಳಕೆದಾರು ತಮ್ಮ ಹೆಸರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತಮ್ಮ ಅಕೌಂಟ್​ಗೆ ಮತ್ತೊಂದು ಗೌಪ್ಯ ಹೆಸರನ್ನು ಸೇರಿಸಬಹುದಾಗಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts