ವಾಟ್ಸ್​ಆ್ಯಪ್​ ನಲ್ಲಿ ಶೀಘ್ರ ಬರಲಿದೆ ಫಿಂಗರ್​ಪ್ರಿಂಟ್​ ಅಥೆಂಟಿಕೇಷನ್​

ವಾಷಿಂಗ್ಟನ್​: ಜನಪ್ರಿಯ ಚಾಟಿಂಗ್​ ಆ್ಯಪ್​ ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​ ಫಿಂಗರ್​ಪ್ರಿಂಟ್​ ಅಥೆಂಟಿಕೇಷನ್​ ಫೀಚರ್​ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ವಾಟ್ಸ್​ಆ್ಯಪ್​ ಚಾಟ್​ನ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈ ಹೊಸ ಫೀಚರ್​ ಅನ್ನು ಕಂಪನಿ ಅಭಿವೃದ್ಧಿ ಪಡಿಸುತ್ತಿದೆ. ವಾಟ್ಸ್​ಆ್ಯಪ್​ನ ಆಂಡ್ರಾಯ್ಡ್​ ಮತ್ತು ಆ್ಯಪಲ್​ ಫೋನ್​ಗಳ ಆವೃತ್ತಿಗೆ ಈ ಫೀಚರ್​ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ವಾಟ್ಸ್​ಆ್ಯಪ್​ನ ಸೆಟ್ಟಿಂಗ್​ನಲ್ಲಿ ಫಿಂಗರ್​ಪ್ರಿಂಟ್​ ಅಥೆಂಟಿಕೇಷನ್​ ಆಪ್ಷನ್​ ಇರಲಿದ್ದು, ಇದನ್ನು ಎನೇಬಲ್​ ಮಾಡಿಕೊಂಡರೆ ನಿಮ್ಮ ಬೆರಳಿಚ್ಚಿನಿಂದ ಮಾತ್ರ ವಾಟ್ಸ್​ಆ್ಯಪ್​ ಓಪನ್​ ಅಗುತ್ತದೆ. ಇದು ಆ್ಯಪಲ್​ ಫೋನ್​ನಲ್ಲಿರುವ ಫಿಂಗರ್​ಪ್ರಿಂಟ್​ ಅಥೆಂಟಿಕೇಷನ್​ ಮಾದರಿಯಲ್ಲೇ ಕಾರ್ಯ ನಿರ್ವಹಿಸುತ್ತದೆ. ಹೊಸ ಫೀಚರ್​ ಇನ್ನೂ ಅಭಿವೃದ್ಧಿ ಹಂತದಲ್ಲೇ ಇದ್ದು, ಶೀಘ್ರದಲ್ಲೇ ಆಂಡ್ರಾಯ್ಡ್​ ಮಾರ್ಷ್​ಮೆಲ್ಲೋ ಮತ್ತು ಅದರ ಮೇಲಿನ ಆವೃತ್ತಿಗಳ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಲಭ್ಯವಾಗಲಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *