ವಾಟ್ಸ್​ಆ್ಯಪ್​ನಲ್ಲಿ ಆಂಜನೇಯನ ಅವಹೇಳನಕಾರಿ ಫೋಟೋ ಹಾಕಿದ ದಲಿತ ಯುವಕನ ಬಂಧನ

ಭೂಪಾಲ್​: ಹಿಂದು ದೇವರಾದ ಆಂಜನೇಯನ ಕುರಿತು ಅವಹೇಳನಕಾರಿ ಫೋಟೋವನ್ನು ವಾಟ್ಸ್​ಆ್ಯಪ್​ನಲ್ಲಿ ಪೋಸ್ಟ್​ ಮಾಡಿದ ಆರೋಪದಡಿ ಮಧ್ಯಪ್ರದೇಶದ ಬುಂದೇಲ್​ಖಂಡದ ದಲಿತ ಯುವಕನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಜನೇಯನ್ನು ಬಿ.ಆರ್​.ಅಂಬೇಡ್ಕರ್​ ಅವರ ಜತೆ ಕುಳಿತಿರುವಂತೆ ಫೋಟೋ ಎಡಿಟ್​ ಮಾಡಿದ್ದಲ್ಲದೆ, ಹನುಮಂತ ಅಂಬೇಡ್ಕರ್​ ಅವರ ಕ್ಷಮೆ ಕೇಳುತ್ತಿರುವಂತೆ ವಾಕ್ಯಗಳನ್ನು ಬರೆಯಲಾಗಿದೆ. ಈ ಚಿತ್ರವೀಗ ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿದೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಭಜರಂಗದಳದ ಸದಸ್ಯ ಹೇಮರಾಜ್​ ಠಾಕೂರ್​ ಅವರು ದೂರು ನೀಡಿದ್ದರು. ಅದರ ಹಿನ್ನೆಲೆಯಲ್ಲಿ ತನಿಖೆ ನಡೆಸಿ 17 ವರ್ಷದ ದಲಿತ ಯುವಕನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಂಜನೇಯ ಬುಡಕಟ್ಟು ಜನಾಂಗಕ್ಕೆ ಸೇರಿದವ ಎಂದು ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದಾರ ಬಳಿಕ ಆಂಜನೇಯನ ಅವಹೇಳನಕಾರಿ ಪೋಸ್ಟ್​ ಹಾಕಲಾಗಿದೆ ಎನ್ನಲಾಗಿದೆ. (ಏಜೇನ್ಸೀಸ್​)