More

    ವಾಟ್ಸ್​​ಆ್ಯಪ್​ ಸರ್ವರ್​​ ಡೌನ್​; ವಿಡಿಯೋ ಡೌನ್​ಲೋಡ್​ ಮಾಡಲಾಗದೆ ಪರದಾಡಿದ ನೆಟ್ಟಿಗರು

    ನವದೆಹಲಿ: ಸಾಮಾಜಿಕ ಜಾಲತಾಣ ವಾಟ್ಸ್​ಆ್ಯಪ್ ಸರ್ವರ್​ ಡೌನ್​ ಆಗಿದ್ದು ಯಾವುದೇ ತರಹದ ವಿಡಿಯೋಗಳನ್ನು ಡೌಲೋಡ್​ ಮಾಡಲು ಆಗುತ್ತಿಲ್ಲ ಎಂದು ನೆಟ್ಟಿಗರು ದೂಷಿಸಿದ್ಧಾರೆ.

    ಭಾನುವಾರ ರಾತ್ರಿಯಿಂದ ಈ ಸಮಸ್ಯೆ ಎದುರಾಗಿದ್ದು ಸೋಮವಾರವೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಬಹುತೇಕರಿಗೆ ಕಾಡಿದ ಸಮಸ್ಯೆ

    ಭಾರತದಲ್ಲಿ ಶೇ.43ರಷ್ಟು ಮಂದಿ ಈ ಸಮಸ್ಯೆ ಎದುರಿಸಿದ್ದು ಶೇ.41ರಷ್ಟು ಮಂದಿ ಸರ್ವರ್​​ ಸಮಸ್ಯೆಯಿಂದಾಗಿ ಹೀಗಾಗಿರಬಹುದು ಎಂದು ಊಹಿಸಿದ್ದಾರೆ. ಇನ್ನು ಕೆಲವರು ಮೆಸೇಜ್​ ಕಳಿಸುವಾಗ ಈಗಾಗುತ್ತದೆ ಎಂದು ಅಂದಾಜಿಸಿದ್ದಾರೆ.

    ಇದನ್ನೂ ಓದಿ: ‘ಪುಟಾಣಿ ಪ್ರಪಂಚ’ದಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳ ಕಲರವ; ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗ

    ಈ ಕುರಿತು ಟ್ವಟಿರ್​ನಲ್ಲಿ ಅಳಲು ತೋಡಿಕೊಂಡಿರುವ ನೆಟ್ಟಿಗರು ಕಳೆದ ರಾತ್ರಿಯಿಂದ ಈ ಸಮಸ್ಯೆ ಉದ್ಭವಿಸಿದ್ದು ಆ್ಯಂಡ್ರಾಯ್ಡ್​​ ಪೋನುಗಳಲ್ಲಿ ಹೆಚ್ಚು ಎಂದು ಕಿಡಿಕಾರಿದ್ಧಾರೆ.

    ಸ್ಪಷ್ಟನೆ ನೀಡದ ಕಂಪನಿ

    ಭಾರತದಲ್ಲಿ ಸರ್ವರ್​ ಡೌನ್​ ಆಗಿರುವ ಕುರಿತು ವಾಟ್ಸ್​ಆ್ಯಪ್​ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಪ್ರಸ್ತುತ ಕಂಪನಿಯೂ ಹೊಸ ವಿಡಿಯೋ ಸಂದೇಶ ಕಾರ್ಯದ ಪ್ರಗತಿಯನ್ನು ಪರಿಶೀಲಿಸುತ್ತಿದ್ದು ಇದು ಬೀಟಾ ಬಳಕೆದಾರರು ಸಮಸ್ಯೆಯನ್ನು ಎದರುಸಿರಬಹುದು ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts