22.8 C
Bengaluru
Monday, January 20, 2020

ಕಾಗದ ಬಳಕೆಗೆ ಇರಲಿ ಕಡಿವಾಣ…: ಹಲೋ ಒಂದ್ನಿಮಿಷ ಅಂಕಣದಲ್ಲಿ ವಿವರಿಸಿದ್ದಾರೆ ತೇಜಸ್ವಿನಿ ಅನಂತಕುಮಾರ್

Latest News

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ; ರಾಜ್ಯದಲ್ಲಿ ಉಗ್ರರ ಕರಿ ನೆರಳಿನ ಆತಂಕ

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ...

ಚುನಾವಣಾ ರಾಜಕೀಯದಿಂದ ನಿವೃತ್ತಿ ಬಗ್ಗೆ ಸಿಎಂ ನಮಗೇನೂ ಹೇಳಿಲ್ಲ: ಜೆ.ಸಿ.ಮಾಧುಸ್ವಾಮಿ

ಹಾಸನ: ಮೂರೂವರೆ ವರ್ಷದ ಬಳಿಕ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಬಗ್ಗೆ ನಮ್ಮೊಟ್ಟಿಗೆ ಯಾವುದೇ ವಿಚಾರ ಹೇಳಿಕೊಂಡಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ...

ಬೆಣಕಲ್ ಗ್ರಾಮದಲ್ಲಿ ಹಳೆ ಮೂರ್ತಿ ಸ್ಥಾಪಿಸಿ

ವಿಜಯವಾಣಿ ಸುದ್ದಿಜಾಲ ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಶ್ರೀ ದುರುಗಮ್ಮ ಹಾಗೂ ಶ್ರೀ ಮರಿಗಮ್ಮ ದೇವಿಯವರ ಹಳೆ ಮೂರ್ತಿಗಳನ್ನು...

VIDEO| ನೃತ್ಯಗಾತಿಗೆ ಕೇವಲ 91 ವರ್ಷ, ಈ ವಿಡಿಯೋ ನೋಡಿದರೆ ವಯಸ್ಸು ಎನ್ನುವುದು ಬರಿ ನಂಬರ್​ ಮಾತ್ರ ಅನ್ನಿಸದೇ ಇರದು!

60 ಆಗುತ್ತಿದ್ದಂತೆ ಕೆಲವರು ನಮ್ಮದೇನು ಎಲ್ಲ ಮುಗಿಯಿತು. ಜೀವನ ನಿಂತೇ ಬಿಟ್ಟಿದೆ ಎನ್ನುತ್ತಾರೆ. ಕೆಲವೊಮ್ಮೆ ದೇಹ ಸಹಕರಿಸಲ್ಲ. ಆದರೆ ಕೆಲವೊಮ್ಮೆ ಇವರಿಗೆ ಮನಸ್ಸಿರುವುದಿಲ್ಲ! ಫೇಸ್​ಬುಕ್​ನಲ್ಲಿ ಅಮೆರಿಕದ ಗೋಲ್ಡನ್​...

LIVE| ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರ ಚುನಾವಣೆಯ ವಾತಾವರಣ…

ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ. ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಜೆ.ಪಿ.ನಡ್ಡಾ ಅವರು ರಾಷ್ಟ್ರೀಯ...

ಕಾಗದ ತಯಾರಿಸಲು ಪ್ರತಿ ನಿತ್ಯ ಸರಾಸರಿ ಒಂದು-ಒಂದೂವರೆ ಲಕ್ಷ ಮರಗಳನ್ನು ಕತ್ತರಿಸುತ್ತಿದ್ದೇವೆ. ಒಂದು ಕೆಜಿ ಕಾಗದ ತಯಾರಿಕೆಗೆ 100 ಲೀಟರ್ ನೀರು ಖರ್ಚು ಮಾಡುತ್ತಿದ್ದೇವೆ. ಬ್ಲೀಚ್, ರಾಸಾಯನಿಕ ಬಣ್ಣಗಳ ಬಳಕೆ ಮೂಲಕ ಕಾಗದ ತಯಾರಿಕೆ ಜಲಮಾಲಿನ್ಯಕ್ಕೂ ಕಾರಣವಾಗುತ್ತಿದೆ.

ನಾನು ಮೊದಲ ಬಾರಿಗೆ ಅಮೆರಿಕಕ್ಕೆ ಹೋಗಿದ್ದು 1997 ಜುಲೈ ತಿಂಗಳು. 22 ವರ್ಷಗಳ ಹಿಂದೆ ಮೊದಲ ಬಾರಿ ವಿದೇಶಕ್ಕೆ ಹೋದಾಗ ಬಹಳಷ್ಟು ಅಚ್ಚರಿಯ ಸಂಗತಿಗಳು ನೋಡಲು ಸಿಕ್ಕವು. ಅಚ್ಚುಕಟ್ಟಾದ ರಸ್ತೆ, ವಾಹನ, ದೊಡ್ಡ ಕಟ್ಟಡಗಳು… ಪ್ರತಿಯೊಂದು ಬೆರಗು ಮೂಡಿಸುತ್ತಿದ್ದವು. ಮೊದಲ ಬಾರಿ ವಿದೇಶಕ್ಕೆ ಹೋದ ಬಹುತೇಕರಿಗೆ ಇಂಥ ಅನುಭವಗಳು ಆಗುವುದು ಸ್ವಾಭಾವಿಕವೇನೋ. ಆ ಭೇಟಿ ವೇಳೆ ಕೆಲ ಸಂಗತಿಗಳು ನನಗೆ ಪ್ರೇರಣೆ ನೀಡಿದವು. ಮುಖ್ಯವಾಗಿ, ಕಸ ವಿಂಗಡಣೆ (ಹಸಿ ತ್ಯಾಜ್ಯ, ಒಣ ತ್ಯಾಜ್ಯ), ಹವಾಮಾನ ಬದಲಾವಣೆ, ಗ್ಲೋಬಲ್ ವಾರ್ವಿುಂಗ್ ಬಗೆಗಿನ ಅರಿವು. ಆಗಲೇ ಅಲ್ಲಿನ ಮನೆಗಳಲ್ಲಿ ಎರಡು ಕಸದ ಬುಟ್ಟಿಗಳು ಇರುತ್ತಿದ್ದವು. ಅವೆಲ್ಲ ಆಗ ನಮ್ಮ ಪಾಲಿಗೆ ಹೊಸದಾಗಿದ್ದವು.

ಈ ಮುಂದುವರಿದ ರಾಷ್ಟ್ರಗಳ ಇನ್ನೊಂದು ಮುಖವೂ ಇದೆ ಅಂತ ಬಳಿಕ ಗೊತ್ತಾಯ್ತು. ಅಮೆರಿಕ, ಜಪಾನ್, ಬ್ರಿಟನ್, ಯುರೋಪ್​ಗಳಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ ಸರಾಸರಿ 250 ಕೆಜಿಯಷ್ಟು ಕಾಗದ ಬಳಸುತ್ತಾನಂತೆ! ಹಾಗೆ ನೋಡಿದರೆ, ನಮ್ಮ ದೇಶದಲ್ಲಿ ಈ ಬಳಕೆ ವರ್ಷಕ್ಕೆ ಸರಾಸರಿ 5 ಕೆಜಿ. ನಾವೇನಾದರೂ 200-250 ಕೆಜಿಯಷ್ಟು ಕಾಗದ ಬಳಸುತ್ತಿದ್ದರೆ ಈ ಭೂಮಿ ಮೇಲೆ ಒಂದೂ ಗಿಡ-ಮರ ಉಳಿಯುತ್ತಿರಲಿಲ್ಲವೇನೋ.

ಐದು ಕೆಜಿಯ ಬಳಕೆ ಕಡಿಮೆ ಪ್ರಮಾಣದ್ದು ಎಂದು ನಾವು ಸಮಾಧಾನ ಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ, ಕ್ರಮೇಣ ಈ ಪ್ರಮಾಣ ಹೆಚ್ಚುತ್ತಲೇ ಸಾಗಿದ್ದು, ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಿದೆ. ಹಾಗಾಗಿ, ಕಾಗದದ ಬಳಕೆ ಕಡಿಮೆ ಮಾಡಲು ಎಲ್ಲರೂ ಯತ್ನಿಸಬೇಕಿದೆ. ಎಲ್ಲಿ ಅತ್ಯವಶ್ಯಕವೋ ಅಲ್ಲಿ ಮಾತ್ರ ಕಾಗದ ಬಳಸೋಣ. ಶಾಲಾಮಕ್ಕಳು ಉಪಯೋಗಿಸುತ್ತಿರುವ ಕಾಗದದ ಸಂಖ್ಯೆ ಕಡಿಮೆಯಾಗಬೇಕು. ಅವರ ಶಾಲಾಬ್ಯಾಗ್ ಭಾರವನ್ನು, ಕಾಗದದ ಭಾರವನ್ನು ಕಡಿಮೆ ಮಾಡುವ ಕುರಿತಂತೆ ಚಿಂತನೆ ಈಗಾಗಲೇ ನಡೆಯುತ್ತಿದೆ. ‘ಅದಮ್ಯ ಚೇತನ’ ಶಾಲೆಗಳಿಗೆ ಮುದ್ರಿತ ಗೋಡೆ ಪತ್ರಿಕೆ ಶುರು ಮಾಡಿದಾಗ, ಒಬ್ಬೊಬ್ಬರಿಗೆ ಒಂದು ಪತ್ರಿಕೆ ಏಕೆ ನೀಡಬೇಕು ಎಂದು ಯೋಚಿಸಿ ಶಾಲೆಗೊಂದು ಪತ್ರಿಕೆ ನೀಡಲು ಆರಂಭಿಸಿದೆವು. ಇದರಿಂದ ಎಷ್ಟೊಂದು ಕಾಗದ ಉಳಿಯುತ್ತಿದೆ. ಮಕ್ಕಳಿಗೆ ಸಕಾರಾತ್ಮಕ ಸುದ್ದಿಯನ್ನೂ ತಲುಪಿಸಲಾಗುತ್ತಿದೆ.

ವಾಸ್ತವ ಅರಿಯೋಣ: ನಾವು ಚಿಕ್ಕವರಿದ್ದಾಗ ಕಾಗದ ಆಕಸ್ಮಾತ್ ನೆಲಕ್ಕೆ ಬಿದ್ದರೆ ಅಥವಾ ಕಾಲಿಗೆ ತಾಗಿದರೆ ಅದನ್ನು ತಕ್ಷಣ ಮೇಲಕ್ಕೆ ಎತ್ತಿ ಒರೆಸಿ, ನಮಸ್ಕಾರ ಮಾಡುತ್ತಿದ್ದೆವು. ಸರಸ್ವತಿ ಸ್ವರೂಪಿಯಾದ ಕಾಗದಕ್ಕೆ ಕಾಲು ತಾಗಿಸೆದೆವಲ್ಲ ಎಂದು ಪಶ್ಚಾತಾಪ ಪಡುತ್ತಿದ್ದೆವು. ಈಗ ಆ ಗೌರವಭಾವನೆಯೂ ಕಡಿಮೆಯಾಗುತ್ತಿದೆಯೇನೋ ಅನಿಸುತ್ತಿದೆ. ಉದಾಹರಣೆಗೆ, ಕಾರು ಸರ್ವಿಸಿಂಗ್ ಮಾಡಿಸಿಕೊಂಡು ಬಂದಾಗ ಕಾಲಿಡುವ ಜಾಗದಲ್ಲಿ ಹೊಸ ಪೇಪರ್/ಕಾಗದವನ್ನೇ ಹಾಕಿರುತ್ತಾರೆ; ಕಾರು ಗಲೀಜು ಆಗಬಾರದೆಂದು. ಬಳಕೆಯ ರೀತಿ, ಪ್ರಮಾಣ ಯಾವ ರೀತಿಯಲ್ಲಿ ಬೆಳೆಯುತ್ತಿದೆ ಎಂದರೆ ಕಾಗದ ತಯಾರಿಕೆಗಾಗಿ ಪ್ರತಿನಿತ್ಯ ಒಂದರಿಂದ ಒಂದೂವರೆ ಲಕ್ಷ ಗಿಡ-ಮರಗಳನ್ನು ಕತ್ತರಿಸಲಾಗುತ್ತಿದೆ! ನಾನು ರೀಸರ್ಚ್ ಪೇಪರ್ ಓದುವಾಗ ಈ ಸಂಗತಿ ಕಂಡುಕೊಂಡೆ.

ಕಾಗದದ ಬಗ್ಗೆ ಇನ್ನೊಂದು ಕುತೂಹಲಕಾರಿ ಅಂಶವೆಂದರೆ, ಕಾಗದ ಯಾರು ಕಂಡು ಹಿಡಿದರು? ಯಾವ ದೇಶದಲ್ಲಿ ಮೊದಲು ಕಂಡು ಹಿಡಿದರು? ಭಾರತಕ್ಕೆ ಯಾವಾಗ ಬಳಕೆಗೆ ಬಂತು? ಅಂತ ಯೋಚನೆ ಮಾಡಿ, ಮಾಹಿತಿ ಹುಡುಕುತ್ತಿರಬೇಕಾದರೆ ನಮ್ಮ ಇತಿಹಾಸದಲ್ಲಿ, ಶಾಸ್ತ್ರ-ಪುರಾಣದಲ್ಲಿ ಕಾಗದದ ಉಲ್ಲೇಖ ಎಲ್ಲೂ ಇಲ್ಲ.

ಇತರೆ ಮಾಹಿತಿಗಳನ್ನು ತಡಕಾಡಿದಾಗ ಕಾಗದ ಮೊದಲು ಕಂಡುಹಿಡಿದದ್ದು ಚೀನಾದಲ್ಲಿ ಎಂಬ ಸಂಗತಿ ಅರಿವಿಗೆ ಬಂತು. ಭಾರತದಲ್ಲಿ ಇದರ ಬಳಕೆ 11ನೇ ಶತಮಾನದಲ್ಲಿ ಆರಂಭಗೊಂಡಿತು. ಕಾಗದ ತಯಾರಿಕೆ ನಂತರದ ದಿನಗಳಲ್ಲಿ ಆರಂಭವಾಯಿತು. ಕಾಗದವನ್ನು ಸೌದೆಯಿಂದ ಅಂದರೆ ಕಟ್ಟಿಗೆಯ ಸಣ್ಣ ಸಣ್ಣ ಚೂರುಗಳನ್ನು ಪುಡಿ ಮಾಡಿ, ಅದರಿಂದ ಪೇಸ್ಟ್ ಮಾಡಿ, ತಯಾರಿಸಲಾಗುತ್ತದೆ. ಮರ ಕಡಿದು, ಅದರ ತುಂಡುಗಳಿಂದಲೇ ಕಾಗದ ಸಿದ್ಧಗೊಳ್ಳುತ್ತದೆ ಎಂಬುದು ಸ್ಪಷ್ಟ. ಇತ್ತೀಚೆಗೆ ಚಾಲ್ತಿಗೆ ಬಂದಿರುವ ಮತ್ತೊಂದು ವಿಧಾನದಲ್ಲಿ, ಅನುಪಯುಕ್ತ ಕಾಗದವನ್ನು ರೀಸೈಕಲ್ ಮಾಡಿ ಕಾಗದ ತಯಾರಿಸಲಾಗುತ್ತದೆ. ರೀಸೈಕಲ್​ಗೊಳಿಸಿದ ಕಾಗದವನ್ನು ಬಳಸಿದರೆ ಅಷ್ಟೇ ಪ್ರಮಾಣದಲ್ಲಿ ಮರಗಳ ಹನನವನ್ನು ತಡೆಯಬಹುದು. ಆದರೆ, ಬಹುತೇಕರು ಒಳ್ಳೆ ಕಾಗದದ ಬಳಕೆಗೆ ಆದ್ಯತೆ ನೀಡುತ್ತಾರೆ ಎಂಬುದು ಕಹಿವಾಸ್ತವ.

ಪಶ್ಚಿಮದ ದೇಶಗಳು ವಿಶೇಷವಾಗಿ ಗ್ಲೋಬಲ್ ವಾರ್ವಿುಂಗ್ (ಜಾಗತಿಕ ತಾಪಮಾನ), ಪರಿಸರ ರಕ್ಷಣೆ ಬಗ್ಗೆ ದೊಡ್ಡ ದೊಡ್ಡ ಸೆಮಿನಾರ್​ಗಳನ್ನು ನಡೆಸುವ, ಉಪನ್ಯಾಸಗಳನ್ನು ನೀಡುವ ರಾಷ್ಟ್ರಗಳಲ್ಲಿ ಒಂದೆಡೆ ಪ್ಲಾಸ್ಟಿಕ್ ಬಳಕೆಯೂ ಕಡಿಮೆ ಆಗಿಲ್ಲ. ಮತ್ತೊಂದೆಡೆ, ಕಾಗದದ ಬಳಕೆಯೂ ಹೆಚ್ಚುತ್ತಿದೆ ಎಂಬುದು ಚಿಂತೆಯ ವಿಚಾರ. ‘ಪ್ಲಾಸ್ಟಿಕ್ ಬಳಸಬೇಡಿ’ ಎಂದಾಕ್ಷಣ ಬಹುತೇಕರು ಪೇಪರ್ ಬಳಕೆಯತ್ತ ವಾಲುತ್ತಾರೆ ಮತ್ತು ಇದು ಪರಿಸರಸ್ನೇಹಿ ಎಂದು ಭಾವಿಸಿಬಿಟ್ಟಿದ್ದಾರೆ. ಆದರೆ, ಕಾಗದ ನಿಜಕ್ಕೂ ಪರಿಸರಸ್ನೇಹಿಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಸಮಯ ಈಗ ಬಂದಿದೆ. ಪ್ಲಾಸ್ಟಿಕ್ ಬೇಡ ಅಂದಾಕ್ಷಣ ‘ಇಕೋ ಫ್ರೆಂಡ್ಲಿ’ ಅಂತ ಕಾಗದದ ಲೋಟ, ತಟ್ಟೆ, ಕವರ್ ಯಥೇಚ್ಛವಾಗಿ ಬಳಸುತ್ತೇವೆ. ನಮ್ಮನ್ನೇ ನಾವು ಯೋಚನೆಗೆ ಒಡ್ಡಿದರೆ ಸತ್ಯ ಗೋಚರವಾಗುತ್ತದೆ. ಆರಂಭದಲ್ಲಿ ತಿಳಿಸಿದಂತೆ ಕಾಗದ ತಯಾರಿಕೆಗೆ ದಿನಕ್ಕೆ ಸರಾಸರಿ ಒಂದು-ಒಂದೂವರೆ ಲಕ್ಷ ಮರಗಳು ಆಹುತಿ ಆಗುತ್ತಿವೆ. ಒಂದು ಕೆಜಿ ಕಾಗದ ತಯಾರಿಕೆಗೆ 100 ಲೀಟರ್ ನೀರನ್ನು ಬಳಸಲಾಗುತ್ತದೆ ; ಅಂದರೆ ಕಾಗದ ತಯಾರಿಕೆಗೆ ಎಷ್ಟು ಬೃಹತ್ ಪ್ರಮಾಣದಲ್ಲಿ ನೀರನ್ನು ಪೋಲು ಮಾಡುತ್ತಿದ್ದೇವೆ ಎಂದು ಅಂದಾಜಿಸಬಹುದು. ಈ ತಯಾರಿಕೆ ಪ್ರಕ್ರಿಯೆ ವೇಳೆ ವಾಯು ಮತ್ತು ಜಲಮಾಲಿನ್ಯ ಕೂಡ ಉಂಟಾಗುತ್ತದೆ. ಕಾಗದ ತಯಾರಿಸುವಾಗ ಬ್ಲೀಚ್, ರಾಸಾಯನಿಕ ಬಣ್ಣಗಳನ್ನೂ ವ್ಯಾಪಕ ಪ್ರಮಾಣದಲ್ಲಿ ಬಳಸಲಾಗುತ್ತದೆ.

ಪೇಪರ್ ನ್ಯಾಪಕಿನ್ ನಿಯಂತ್ರಿಸಿ: ಬಳಕೆಯ ಪ್ರಮಾಣ ಮತ್ತು ಎಲ್ಲೆಲ್ಲಿ ಬಳಸುತ್ತಿದ್ದೆವೆ ಎಂಬುದು ಅವಲೋಕಿಸಿಕೊಳ್ಳಬೇಕಾದ ಸಂಗತಿ. ಎಲ್ಲ ಕಡೆಯೂ ಇದು ವ್ಯಾಪಿಸಿ, ಕಾಗದದ ಬಳಕೆ ಎಲ್ಲಿಲ್ಲ ಎಂಬ ಪ್ರಶ್ನೆ ಕೇಳಿಕೊಳ್ಳುವಂತಾಗಿದೆ. ಕಾರ್ಯಕ್ರಮಗಳಲ್ಲಂತೂ, ಅಗತ್ಯ ಇರಲಿ, ಬಿಡಲಿ ಪೇಪರ್ ನ್ಯಾಪ್ಕಿನ್​ಗಳನ್ನು ಬಳಸುತ್ತಾರೆ. ಊಟ ಮಾಡೋದು ಒಂದು ಕೈಯಿಂದ. ಆದರೆ ಪ್ರತಿ ಬೆರಳಿಗೆ ಒಂದೊಂದು ಪೇಪರ್ ನ್ಯಾಪ್ಕಿನ್ ಬಳಸಿ, ಉಂಡೆ ಮಾಡಿ ಬಿಸಾಕುವ ಪ್ರವೃತ್ತಿ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ.

ಒಂದ್ನಿಮಿಷ, ಖಂಡಿತವಾಗಿಯೂ ನಮ್ಮ ಕಾಗದದ ಬಳಕೆ ಬಗ್ಗೆ ಯೋಚಿಸಬೇಕಿದೆ, ಇದರಿಂದ ಪರಿಸರಕ್ಕೆ ಎಷ್ಟು ಹಾನಿ ಮಾಡುತ್ತಿದ್ದೇವೆ ಎಂಬುದನ್ನು ಅವಲೋಕಿಸಿಕೊಂಡರೆ ನಿಜಕ್ಕೂ ಬಳಕೆಯ ಪ್ರಮಾಣ ತಗ್ಗಿಸಬಹುದು. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಕಾಗದ ಮತ್ತು ಪ್ಲಾಸ್ಟಿಕ್ ಬಳಕೆ ತಗ್ಗಿಸಬೇಕು ಎಂಬ ಉದ್ದೇಶದಿಂದಲೇ ‘ಅದಮ್ಯ ಚೇತನ’ ಸಂಸ್ಥೆ ಪ್ಲೇಟ್ ಬ್ಯಾಂಕ್ ಯೋಜನೆಯನ್ನು ಜಾರಿಗೆ ತಂದಿದೆ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿಯಲ್ಲಿ ಇದರ ಸೇವೆ ಲಭ್ಯವಿದೆ. ಕೆಲವರು ಸ್ಟೀಲ್ ಪ್ಲೇಟ್, ಲೋಟ, ಚಮಚ ತೊಳೆಯಲು ನೀರು ಖರ್ಚಾಗುತ್ತದೆಯಲ್ಲ ಎಂದು ಪ್ರಶ್ನಿಸಿದರು. ಕಾಗದ ತಯಾರಿಸಲು ಕಡಿಮೆ ನೀರು ಬಳಕೆ ಆಗುತ್ತದೆಯಾ? ಎಂದು ನಾನು ಮರುಪ್ರಶ್ನೆ ಹಾಕಿದೆ. ಒಂದು ಕೆಜಿ ಕಾಗದ ತಯಾರಿಕೆಗೆ 100 ಲೀಟರ್ ನೀರು ಖರ್ಚು ಮಾಡುತ್ತಿರುವಾಗ ಪಾತ್ರೆಗಳನ್ನು ಇದಕ್ಕಿಂತ ತುಂಬ ಕಡಿಮೆ ನೀರಿನಲ್ಲಿ ಸ್ವಚ್ಛಗೊಳಿಸಬಹುದು ಮತ್ತು ಇಂಥ ಪಾತ್ರೆಗಳ ಮರುಬಳಕೆಯೂ ಸುಲಭಸಾಧ್ಯ. ಹಾಗಾಗಿಯೇ, ಪ್ಲೇಟ್ ಬ್ಯಾಂಕ್ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನರಲ್ಲಿ ನಿಧಾನವಾಗಿಯಾದರೂ ಅರಿವು ಮೂಡುತ್ತಿದೆ.

ಪರಿಹಾರ ಏನು?: ‘ಪರಿಸರಸ್ನೇಹಿ’ ಎಂದು ಭಾವಿಸಿರುವ ಕಾಗದ ತಯಾರಿಸಲು ಮರ ಕತ್ತರಿಸಬೇಕು, ನೀರನ್ನು ವ್ಯಾಪಕವಾಗಿ ಖರ್ಚು ಮಾಡಬೇಕು. ಬ್ಲೀಚಿಂಗ್ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸುವುದರಿಂದ ಜಲಮಾಲಿನ್ಯವೂ ಸಂಭವಿಸುತ್ತದೆ. ಪಳಯುಳಿಕೆ ಇಂಧನಗಳ ಬಳಕೆಯೂ ಆಗುತ್ತಿದೆ.

ನಮ್ಮಲ್ಲಿ ಇತ್ತೀಚಿನ ಪೀಳಿಗೆಯ ಬಹುತೇಕರು ಮೊದಲ ಅಕ್ಷರವನ್ನೂ ಕಾಗದದ ಮೇಲೆಯೇ ಬರೆದಿದ್ದಾರೆ. ಕಾಗದದ ಬಳಕೆಯಲ್ಲಿ ತುಂಬ ಮುಂದೆ ಸಾಗಿ ಬಂದಿದ್ದೇವೆ. ಈಗ ಹಿಂದೆ ಹೋಗಿ ನಮ್ಮ ಹಿರಿಯರಂತೆ ತಾಳೆಗರಿಯಲ್ಲೋ, ಬಟ್ಟೆಯಲ್ಲೋ ಬರೆಯಲು ಆರಂಭಿಸುವುದು ಸಾಧ್ಯವಿಲ್ಲ ಎಂಬುದೇನೋ ನಿಜ. ಹಾಗಾಗಿ, ಕಾಗದವನ್ನು ನಾವು ಏತಕ್ಕಾಗಿ ಬಳಸುತ್ತಿದ್ದೇವೆ, ಅದರ ಪ್ರಮಾಣವೆಷ್ಟು ಎಂದು ಪ್ರಶ್ನಿಸಿಕೊಂಡು ತುಂಬ ಮಿತವಾಗಿ, ಯೋಚನೆ ಮಾಡಿ ಬಳಸೋಣ. ರೀಸೈಕಲ್​ಗೊಳಿಸಿದ ಕಾಗದ ಬಳಕೆಗೆ ಹೆಚ್ಚು ಆದ್ಯತೆ ನೀಡೋಣ. ರೀಸೈಕಲ್​ಗೊಳಿಸಿದ 1 ಟನ್ ಕಾಗದವನ್ನು ಬಳಸಿದರೆ ಕನಿಷ್ಠ 17 ಗಿಡಗಳನ್ನು ಉಳಿಸಬಹುದಂತೆ. ಕಾಗದ ಉಳಿಸಲು ನಮ್ಮ ಮೊಬೈಲ್, ಕಂಪ್ಯೂಟರ್​ಗಳು ಸಾಫ್ಟ್ ಕಾಪಿಗಳ ಮುಖಾಂತರ ಸಹಾಯ ಮಾಡುತ್ತಿವೆ. ಪ್ರಿಂಟ್ ಕೊಡುವ ಮುಂಚೆ ಯೋಚಿಸೋಣ. ಮಾಹಿತಿ ಸಂಗ್ರಹಣೆ, ಜ್ಞಾನಾರ್ಜನೆಯ ಉದ್ದೇಶದ ಹೊರತಾಗಿ ಇತರೆ ಚಟುವಟಿಕೆಗಳಿಗೆ ಕಾಗದ ಬಳಸುವ ಮುಂಚೆ ಯೋಚಿಸೋಣ. ಇದರ ಮಿತ ಮತ್ತು ಹಿತವಾದ ಬಳಕೆಯ ಮೂಲಕ ಮರಗಳ ನಾಶವನ್ನು ಕಡಿಮೆಗೊಳಿಸೋಣ, ಆ ಮೂಲಕ ನಮ್ಮ ಪರಿಸರ ಉಳಿಸೋಣ. ಏನಂತೀರಿ?

(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...