25.1 C
Bangalore
Friday, December 6, 2019

ಕಾಸ್ಟಿಂಗ್​ ಕೌಚ್​ ಅನುಭವ ಬಿಚ್ಚಿಟ್ಟ ಜರೀನ್​ ಖಾನ್​: ಕಿಸ್ಸಿಂಗ್​ ದೃಶ್ಯ ರಿಹರ್ಸಲ್​​ಗೆ ಕರೆದಿದ್ದ ನಿರ್ದೇಶಕನಿಗೆ ನಟಿಯ ಮಾತಿನ ಚಾಟಿ ಹೀಗಿತ್ತು…

Latest News

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ಹಂಪಿ ವಿವಿ ಕೇಂದ್ರ ಸ್ಥಳಾಂತರ ಕೈಬಿಡಿ

ಬಾದಾಮಿ: ಬನಶಂಕರಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ...

ಅವೈಜ್ಞಾನಿಕ ಉಳುಮೆಯಿಂದ ಮಣ್ಣಿನ ಸವಕಳಿ, ಹೊಸಪೇಟೆ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪ ಹೇಳಿಕೆ

ಕೂಡ್ಲಿಗಿ: ರೈತರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಹೊಸಪೇಟೆ ವಿಭಾಗದ ಉಪನಿರ್ದೇಶಕ ಸಹದೇವ ಯರಗುಪ್ಪ ಹೇಳಿದರು. ಪಟ್ಟಣದ...

ಮಲಗಿದ ಮೇಲೆ ಸಂಪೂರ್ಣ ಸುಖ ನಿದ್ದೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು

ಸಂಪುರ್ಣ ಎಂಟು ತಾಸು ನಿದ್ದೆ..! - ನಿದ್ದೆ ಮಾಡಿದ ಮೇಲೆ ಮಧ್ಯೆ ಯಾವುದಕ್ಕೂ ಅಂದರೆ ಬಾತ್​ರೂಂಗೆ ಹೋಗಲು, ನೀರು ಕುಡಿಯಲು, ನಿಮ್ಮ ಮೊಬೈಲ್​ ಚೆಕ್​ ಮಾಡಲು...

ಗೊರಗುದ್ದಿ ಶಾಲೆ ಗೋಳು ಕೇಳೋರಿಲ್ಲ

|ಬೆಳ್ಳೆಪ್ಪ ಮ.ದಳವಾಯಿ ಕಡಬಿ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ.ಹಣ ಖರ್ಚು...

ನವದೆಹಲಿ: ಕಾಸ್ಟಿಂಗ್​ ಕೌಚ್​ ವಿವಾದಕ್ಕೂ ಸಿನಿಮಾಗೂ ಬಹಳ ನಂಟಿದೆ. ಮೀಟೂ ಅಭಿಯಾನದ ಬಳಿಕ ಕಾಸ್ಟಿಂಗ್​ ಕೌಚ್​ ವಿಚಾರ ಸಾಕಷ್ಟು ಸದ್ದು ಮಾಡಿತು. ಬಹಳಷ್ಟು ನಟಿಯರು ಹಾಗೂ ಬೇರೆ ಕ್ಷೇತ್ರದ ಮಹಿಳೆಯರು ತಮಗಾದ ನೋವನ್ನು ತೋಡಿಕೊಂಡಿದ್ದರು. ಇದೀಗ ಬಾಲಿವುಡ್​ ನಟಿ ಜರೀನ್​ ಖಾನ್​ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಪಂಜಾಬಿ ಭಾಷೆಯ “ಡಾಕಾ” ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿರುವ 32 ವರ್ಷದ ಜರೀನ್​ ಖಾನ್​ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕರಾಳ ಘಟನೆಯನ್ನು ವಿವರಿಸಿದ್ದಾರೆ. ಒಮ್ಮೆ ನಿರ್ದೇಶಕನೊಬ್ಬ ತನ್ನೊಂದಿಗೆ ಕಿಸ್ಸಿಂಗ್​ ದೃಶ್ಯದ ರಿಹರ್ಸಲ್​ ಮಾಡುವಂತೆ ಕೇಳಿದ. ಆ ವ್ಯಕ್ತಿಯೇ ಹಾಗಿದ್ದ, ಹಿಂಜರಿಕೆಯನ್ನು ಬಿಡಬೇಕೆಂದಿದ್ದ. ಆ ಸಂದರ್ಭದಲ್ಲಿ ನಾನು ಹೊಸಬಳಾಗಿದ್ದೆ ಎಂದು ಜರೀನ್​ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು ನಿರ್ದೇಶಕ ಕೇಳಿದ್ದಕ್ಕೆ, ನಾನು ರಿಹರ್ಸಲ್​ಗಾಗಿ ಯಾವುದೇ ಕಿಸ್ಸಿಂಗ್​ ದೃಶ್ಯ ಮಾಡುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಜರೀನ್​ ಖಾನ್​ ದೇಹದ ತೂಕ ಇಳಿಸಿಕೊಳ್ಳಲು ಅನುಭವಿಸಿದ ಕಷ್ಟಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ಸುದ್ದಿಯಾಗಿದ್ದರು. ತಮ್ಮ ಹೊಟ್ಟೆಯ ಭಾಗದಲ್ಲಿ ಗಾಯದ ಕಲೆಗಳಿದ್ದ ಫೋಟೋವನ್ನು ಅಪ್​ಲೋಡ್​ ಮಾಡಿದ್ದರು. ಇದನ್ನು ಟ್ರೋಲ್​ ಮಾಡಿದ್ದ ನೆಟ್ಟಿಗರು ನಿನ್ನ ಹೊಟ್ಟೆಯ ಮೇಲೆ ಸ್ಟ್ರೆಚ್​ ಮಾರ್ಕ್​ ಇದೆ ಎಂದು ಕಾಲೆಳೆದಿದ್ದರು. ಇದಕ್ಕೆ ಉತ್ತರಿಸಿದ್ದ ಜರೀನ್​, ಯಾವುದೇ ವ್ಯಕ್ತಿ 50 ಕೆ.ಜಿ.ತೂಕ ಕಳೆದುಕೊಂಡಲ್ಲಿ ಇಂತಹ ಸ್ಟ್ರೆಚ್​ ಮಾರ್ಕ್​ ಉಳಿಯುವುದು ಸಹಜ. ಅದನ್ನು ಫೋಟೊಶಾಪ್​ ಅಥವಾ ಎಡಿಟ್​ ಮಾಡಿ ಹಾಕಲು ಸಾಧ್ಯವಿಲ್ಲ. ನಾನು ಸಹಜವಾಗಿಯೇ ಇರಲು ಬಯಸುತ್ತೇನೆ. ಮರೆಮಾಚಲು ಬಯಸುವುದಿಲ್ಲ ಎಂದು ತಿರುಗೇಟು ನೀಡಿದ್ದರು. ಜರೀನ್​ ಹೇಳಿಕೆಗೆ ಹಲವು ನಟಿಯರು ಸಹಮತ ವ್ಯಕ್ತಪಡಿಸಿದ್ದರು.

ಸಲ್ಮಾನ್​ ಖಾನ್​ ಅಭಿನಯದ ವೀರ್​ ಚಿತ್ರದಿಂದ ಬಾಲಿವುಡ್​ಗೆ ಪ್ರವೇಶ ಪಡೆದ ಜರೀನ್​​ ಖಾನ್​ ಬಳಿಕ ಹೌಸ್​ಫುಲ್​, ಹೇಟ್​ ಸ್ಟೋರಿ 3 ಮತ್ತು ಅಕ್ಸರ್​ 2 ಸಿನಿಮಾಗಳಲ್ಲಿ ನಟಿಸಿದ್ದರೆ. 2014ರಲ್ಲಿ ತೆರೆಕಂಡ ಜಟ್​ ಜೇಮ್ಸ್ ಬಾಂಡ್​ ವಿತ್ರದ ಮೂಲಕ ಪಂಜಾಬಿ ಸಿನಿಮಾ ರಂಗಕ್ಕೆ ಪ್ರವೇಶ ನೀಡಿದರು. ಇದೀಗ ಡಾಕಾ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್​)​

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...