18 C
Bengaluru
Saturday, January 18, 2020

ಬೇಕಿರುವುದು ಯೋಗ್ಯತಾ ಪತ್ರವಷ್ಟೇ ಅಲ್ಲ; ಯೋಗ್ಯತೆ

Latest News

ಗೂಗಲ್ ಪೇಗೆ 1 ರೂಪಾಯಿ ಹಾಕಿ 94 ಸಾವಿರ ರೂಪಾಯಿ ಧೋಖಾ!

ಬೆಂಗಳೂರು: ಪೀಠೋಪಕರಣ ಖರೀದಿಸುವ ನೆಪದಲ್ಲಿ ಮಹಿಳೆಯ ಗೂಗಲ್ ಪೇಗೆ 1 ರೂ. ವರ್ಗಾಯಿಸಿದ ಆರೋಪಿ ಆಕೆಯ ಬ್ಯಾಂಕ್ ಖಾತೆಯಿಂದ 94 ಸಾವಿರ ರೂ. ಲಪಟಾಯಿಸಿದ್ದಾನೆ. ಬೈಯಪ್ಪನಹಳ್ಳಿ ಜಿ.ಎಂ....

ಶಂಕಿತ ಉಗ್ರರು ಹತ್ತು ದಿನ ಸಿಸಿಬಿ ಕಸ್ಟಡಿಗೆ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಬಲಪಡಿಸುವುದು ಮತ್ತು ಹಿಂದು ಮುಖಂಡರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಶಂಕಿತ ಉಗ್ರರನ್ನು ನ್ಯಾಯಾಲಯ ಸಿಸಿಬಿ...

ಸ್ಥಾಯಿ ಸಮಿತಿ ಚುನಾವಣೆ ಇಂದು; 4ನೇ ಬಾರಿಯಾದರೂ ನಡೆಯುವ ವಿಶ್ವಾಸ, ಬಿಬಿಎಂಪಿ ಸುತ್ತ ನಿಷೇಧಾಜ್ಞೆ

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ಶನಿವಾರ (ಜ. 18) ನಿಗದಿಯಾಗಿದೆ. ಮೂರು ಬಾರಿ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ ನಾಲ್ಕನೇ ಬಾರಿ ನಡೆಯುವ ಲಕ್ಷಣ ಗೋಚರಿಸಿದೆ. 4...

ನಕ್ಷೆ ಉಲ್ಲಂಘಿಸಿದ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ; ಬಿಬಿಎಂಪಿ ವ್ಯಾಪ್ತಿಯ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಸಂಪುಟ ಸಭೆ ತೀರ್ಮಾನ

ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳಿಗೆ ಎರಡು ಪಟ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಕಾಯ್ದೆ ಈಗಾಗಲೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿದ್ದು,...

ನಿಲ್ಲುತ್ತಿಲ್ಲ ಫಾಸ್ಟಾ್ಯಗ್ ಕಿತ್ತಾಟ; ದುಪ್ಪಟ್ಟು ಶುಲ್ಕ ಪಾವತಿಗೆ ಮಾಲೀಕರ ನಕಾರ, ಟೋಲ್ ಸಿಬ್ಬಂದಿ ಜತೆ ವಾಗ್ವಾದ

ಬೆಂಗಳೂರು:  ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳ ಸಂಚರಿಸುವ ವಾಹನಗಳಿಗೆ ಫಾಸ್ಟಾ್ಯಗ್ ಅಳವಡಿಕೆ ವ್ಯವಸ್ಥೆ ಜಾರಿಯಾಗಿ ಎರಡು ದಿನ ಕಳೆದರೂ ದುಪ್ಪಟ್ಟು ಶುಲ್ಕ ಪಡೆಯುವ ವಿಚಾರವಾಗಿ ಟೋಲ್ ಸಿಬ್ಬಂದಿ...

ಪಾಶ್ಚಾತ್ಯ ಶಿಕ್ಷಣವು ಭಾರತೀಯರ ಗುರುಕುಲ ಶಿಕ್ಷಣ ವ್ಯವಸ್ಥೆ, ಸಂಸ್ಕೃತಾಧ್ಯಯನ ಹಾಗೂ ವೇದಾಧ್ಯಯನ ಮತ್ತು ಆಯುರ್ವೆದ ಶಾಸ್ತ್ರಗಳ ಶಿಕ್ಷಣಕ್ಕೆ ಮರ್ಮಾಘಾತ ನೀಡಿತಲ್ಲದೆ ಭಾರತೀಯರು ಗುಲಾಮಗಿರಿಯನ್ನು ಸೌಭಾಗ್ಯವೋ ಎಂಬಂತೆ ಅಪ್ಪಿಕೊಳ್ಳುವ ಮನೋಸ್ಥಿತಿಗೆ ತಳ್ಳಿತು.

ಸ್ವಾಮಿ ವಿವೇಕಾನಂದರ ಮಾನುಷಪ್ರೇಮ ಅಗಾಧ. ಅವರೇ ಹೇಳಿದ್ದುಂಟು-‘I have fallen in love with MAN’. ಮಾನವನನ್ನು ಕೇಂದ್ರವಾಗಿಸಿಕೊಂಡು ಧರ್ಮ, ದೈವವೇ ಮೊದಲಾದ ಅದ್ಭುತ ವಿಚಾರಗಳನ್ನು ಯಾವುದೇ ಪೂರ್ವಗ್ರಹಗಳಿಗೆ, ಸಂಶಯಗಳಿಗೆ ಆಸ್ಪದವೀಯದೆ ಮನವರಿಕೆ ಮಾಡಿಕೊಡುವುದರಲ್ಲಿ ಸ್ವಾಮೀಜಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ನಿಜಕ್ಕೂ ಸ್ವಾಮೀಜಿ ಒಬ್ಬ ಮಾನವಪ್ರೇಮಿ, ಮಾನವ ವಿಜ್ಞಾನಿ ಹಾಗೂ ಮಾನವ ಆರಾಧಕ. ಬದುಕಿನ ಕಡೆಯ ಹತ್ತು ವರ್ಷಗಳಲ್ಲಿ ಅವರು ತಮ್ಮ ಜೀವನ ಹಾಗೂ ಲೋಕೋದ್ಧಾರಕ್ಕೆ ಪೂರಕವಾದ ಚಿಂತನೆಗಳಿಂದ ಅರ್ಧ ಜಗತ್ತನ್ನು ಗೆದ್ದಿದ್ದು ಇತಿಹಾಸ. ಬುದ್ಧ ಪೂರ್ವ ಜಗತ್ತಿಗೆ ಸಂದೇಶವಿತ್ತರೆ ವಿವೇಕಾನಂದರು ಪಾಶ್ಚಿಮಾತ್ಯ ಜಗತ್ತನ್ನು ತಮ್ಮ ಚಿಂತನೆಗಳಿಂದ ತೋಯಿಸಿ ಪವಿತ್ರಗೊಳಿಸಿದರು. ವಿವೇಕಾನಂದರಲ್ಲಿ ಬುದ್ಧನ ಹೃದಯ ಹಾಗೂ ಶಂಕರಾಚಾರ್ಯರ ಮಿದುಳು ಮೇಳೈಸಿದ್ದವು ಎಂದಿದ್ದಾರೆ ಜಗದ್ವಿಖ್ಯಾತರು.

ವಿವೇಕಾನಂದರು ಮನುಷ್ಯನನ್ನು ಅಧ್ಯಯನಗೈದು ಅವನ ಅಭ್ಯುದಯಕ್ಕೆ ಶಿಕ್ಷಣ ಅತ್ಯಂತ ಅಗತ್ಯವಾದುದೆಂದಿದ್ದಾರೆ. ಲೋಕಶಿಕ್ಷಕರಾದ ಅವರು, ಒಂದೆಡೆ, ಭಾರತೀಯರನ್ನು ಸಂಸ್ಕೃತ ಹಾಗೂ ವಿಜ್ಞಾನದ ನಿಖರ ಅಧ್ಯಯನಕ್ಕೆ ಪ್ರೇರೇಪಿಸಿದರೆ, ಮತ್ತೊಂದೆಡೆ, ಪಾಶ್ಚಾತ್ಯರನ್ನು ಲೌಕಿಕ ವೈಭೋಗಗಳ ಬೆಡಗಿನಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಅಳವಡಿಸಿಕೊಳ್ಳದೆ ನಿರ್ಲಕ್ಷಿಸಿದ್ದೆ ಆದಲ್ಲಿ ಸ್ಪೋಟಗೊಳ್ಳುವಿರೆಂದು ಎಚ್ಚರಿಸುತ್ತಾರೆ. ಮಾತೃಭೂಮಿಯಲ್ಲಿ, ‘ಹಸಿದ ಹೊಟ್ಟೆಗೆ ಅನ್ನ ನೀಡದ ಹಾಗೂ ವಿಧವೆಯ ಕಣ್ಣೀರನ್ನು ಒರೆಸದ ದೇವರಲ್ಲಾಗಲೀ, ಧರ್ಮದಲ್ಲಾಗಲೀ ನನಗೆ ನಂಬಿಕೆ ಇಲ್ಲ’ ಎಂದು ಸಾರಿದರೆ ಅಮೆರಿಕದ ಮಿಸ್ ಮೇರಿ ಹೇಲ್​ರವರಿಗೆ ಬರೆದ ಪತ್ರದಲ್ಲಿ:’I had to work till I am at death’s door and had to spend nearly the whole of that energy in America, so that Americans may learn to be more broader and more spiritual’ ಎಂದಿದ್ದಾರೆ.

ಸ್ವಾಮೀಜಿಯವರ ಜನಪರ ಕಾಳಜಿ ವಿಶ್ವವ್ಯಾಪಕ. ಅದು ತಮ್ಮ ಸಮಾಜದಿಂದ ಪ್ರಾರಂಭಗೊಂಡು ದೇಶದಾದ್ಯಂತ ವ್ಯಾಪಿಸಿ ವಿಶ್ವಮಟ್ಟದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ವೀಕೃತವಾಯಿತು. ಯುನೆಸ್ಕೋ ಕೂಡ ತನ್ನ ಧ್ಯೇಯೋದ್ದೇಶಗಳಲ್ಲಿ ವಿವೇಕಾನಂದರ ಉನ್ನತ ಬೋಧನೆಗಳು ಪ್ರತಿಫಲನಗೊಂಡಿವೆ ಎಂದು ಶ್ಲಾಘಿಸಿದೆ. ಚಕ್ರವರ್ತಿ ರಾಜಗೋಪಾಲಾಚಾರಿ, ‘ಭಾರತದಲ್ಲಿ ಧರ್ಮ ಉಳಿಯಲು ಮತ್ತು ಸ್ವಾತಂತ್ರ್ಯ ಸ್ಥಾಪಿತವಾಗಲು ಸ್ವಾಮಿ ವಿವೇಕಾನಂದರೇ ಕಾರಣರು’ ಎಂದಿದ್ದಾರೆ. ವಿವೇಕಾನಂದರ ವಿರಾಟ್ ವ್ಯಕ್ತಿತ್ವದ ದರ್ಪಣದಲ್ಲಿ ಜಗತ್ತು ತನ್ನ ನಾಗರಿಕತೆಯಲ್ಲಿ ಆಗಿಂದಾಗ್ಗೆ ಮೂಡುತ್ತಿರುವ ಅಂಕುಡೊಂಕುಗಳನ್ನು, ಓರೆ-ಕೋರೆಗಳನ್ನು ಸರಿಪಡಿಸಿಕೊಳ್ಳುತ್ತ ಸಾಗುತ್ತಿದೆ.

ಸ್ವಾತಂತ್ರ್ಯಾನಂತರ ನಮ್ಮ ದೇಶ ರೂಪಿಸಿದ ಶಿಕ್ಷಣ ವ್ಯವಸ್ಥೆ ನಿಜಕ್ಕೂ ಅತ್ಯಂತ ನಿರಾಶಾದಾಯಕವಾಗಿದ್ದು ಮಕ್ಕಳಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ, ಆತ್ಮಗೌರವ, ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರಭಕ್ತಿಯನ್ನು ಪರಿಣಾಮಕಾರಿಯಾಗಿ ಮೂಡಿಸದೆ ಹೋದದ್ದು ರಾಷ್ಟ್ರೀಯ ದುರಂತವೇ ಸರಿ. ಶಿಕ್ಷಣವನ್ನು ಕುರಿತು ಜಗತ್ತಿನ ಶ್ರೇಷ್ಠ ಮಿದುಳುಗಳು ಅಭಿಪ್ರಾಯಪಟ್ಟಿದ್ದನ್ನು ಗಮನಿಸಿ ಅವುಗಳನ್ನು ಯೋಗ್ಯ ರೀತಿಯಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಇಂದಿನ ತುರ್ತು ಅಗತ್ಯ.

ಚಿಂತಕ ಆರ್ಥೆಗ್ ವೈ ಗೆಸೆಟ್ ‘ಮಿಷನ್ ಆಫ್ ದಿ ಯೂನಿವರ್ಸಿಟಿ’ ಗ್ರಂಥದಲ್ಲಿ ವಿಶ್ವವಿದ್ಯಾಲಯದ ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಪದವೀಧರರಿಗೆ ಈ ಕೆಳಕಂಡ ಅಂಶಗಳ ಬಗ್ಗೆ ಕನಿಷ್ಠಪ್ರಜ್ಞೆಯಾದರೂ ಇರಬೇಕೆಂದಿದ್ದಾರೆ.

  1. ಬ್ರಹ್ಮಾಂಡದ ಭೌತಿಕ ಯೋಜನೆ (ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ)
  2. ಜೀವಿವರ್ಗಗಳ ಮೂಲ ಅಂಶಗಳು (ಜೀವಶಾಸ್ತ್ರ)
  3. ಮಾನವ ಜನಾಂಗದ ಐತಿಹಾಸಿಕ ಕಾರ್ಯಗತಿ (ಇತಿಹಾಸ)
  4. ಸಾಮಾಜಿಕ ಜೀವನದ ಹಂದರ ಮತ್ತು ನಡೆ (ಸಮಾಜವಿಜ್ಞಾನ)
  5. ಜಗತ್ತಿನ ಸೃಷ್ಟಿಯ ಯೋಜನೆ ಹಾಗೂ ಉದ್ದೇಶ (ತತ್ತ್ವಶಾಸ್ತ್ರ, ಸಂಸ್ಕೃತಿ ಮತ್ತು ಧರ್ಮ)

ಮೈಸೂರು ಅರಸರಾಗಿದ್ದ ಜಯಚಾಮರಾಜ ಒಡೆಯರ್, ‘ವ್ಯಕ್ತಿತ್ವದ ಬೆಳವಣಿಗೆ ಮತ್ತು ರಾಷ್ಟ್ರದ ಅಭ್ಯುದಯದಲ್ಲಿ ಶಿಕ್ಷಣಕ್ಕೆ ಗುರುತರ ಸ್ಥಾನವಿದೆ. ವ್ಯಕ್ತಿಯ ಇಂದ್ರಿಯಗಳಿಗೆ ತರಬೇತಿ ನೀಡುವುದು, ಬುದ್ಧಿಮತ್ತೆಯ ಬೆಳವಣಿಗೆಗೆ ಒತ್ತು ನೀಡುವುದು, ಭಾವನೆಗಳನ್ನು ಮಾನವೀಯತೆಯಿಂದ ಶ್ರೀಮಂತಗೊಳಿಸುವುದು ಹಾಗೂ ಸಮಾಜದಲ್ಲಿ ಪರಿಣಾಮಕಾರಿ ಉದಾತ್ತ ಜೀವನವನ್ನು ನಡೆಸುವುದರೊಂದಿಗೆ ವ್ಯಕ್ತಿಯನ್ನು ಸಮಗ್ರತೆ ಹಾಗೂ ಸಮನ್ವಯತೆಯ ಕಡೆಗೆ ಕೊಂಡೊಯ್ಯುವುದೇ ನಿಜವಾದ ಶಿಕ್ಷಣ’ ಎಂದಿದ್ದಾರೆ. ದೇಶದ ಉದ್ದಗಲಕ್ಕೂ ಸಂಚರಿಸಿದ ವಿವೇಕಾನಂದರು,‘ಬಡವರಿಗೆ ಬೆಳಕು ನೀಡಿ; ಆದರೆ ಹೆಚ್ಚು ಬೆಳಕು ಸಿರಿವಂತರಿಗೆ ನೀಡಿ. ಅನಕ್ಷರಸ್ಥರಿಗೆ ಬೆಳಕನ್ನು ನೀಡಿ, ಸಾಕ್ಷರರಿಗೆ ಹೆಚ್ಚು ಬೆಳಕು ನೀಡಿ’ ಎಂದು ಎಚ್ಚರಿಸಿದ್ದಾರೆ. ಪಾಶ್ಚಾತ್ಯ ಶಿಕ್ಷಣವು ಭಾರತೀಯರ ಗುರುಕುಲ ಶಿಕ್ಷಣ ವ್ಯವಸ್ಥೆ, ಸಂಸ್ಕೃತಾಧ್ಯಯನ ಹಾಗೂ ವೇದಾಧ್ಯಯನ ಮತ್ತು ಆಯುರ್ವೆದ ಶಾಸ್ತ್ರಗಳ ಶಿಕ್ಷಣಕ್ಕೆ ಮರ್ವಘಾತ ನೀಡಿತಲ್ಲದೆ ಭಾರತೀಯರು ಗುಲಾಮಗಿರಿಯನ್ನು ಸೌಭಾಗ್ಯವೋ ಎಂಬಂತೆ ಅಪ್ಪಿಕೊಳ್ಳುವ ಮನೋಸ್ಥಿತಿಗೆ ತಳ್ಳಿತು.

ಸ್ವಾತಂತ್ರಾ್ಯನಂತರದಲ್ಲಿ ನಮ್ಮನ್ನಾಳಿದ ನಾಯಕರು ದೇಶದ ಶಿಕ್ಷಣ ವ್ಯವಸ್ಥೆಯ ಪುನಶ್ಚೇತನಕ್ಕೆ ಕನಿಷ್ಠ ಮಟ್ಟದಲ್ಲೂ ಪ್ರಯತ್ನಿಸದೇ ಹೋದದ್ದು ದುರ್ದೈವ. ಅಂದಿನ ಪ್ರಧಾನಿ ನೆಹರೂ ‘ಡಿಸ್ಕವರಿ ಆಫ್ ಇಂಡಿಯಾ’ ಗ್ರಂಥದಲ್ಲಿ ವಿವೇಕಾನಂದರನ್ನು ಕುರಿತು, ‘ನಮ್ಮ ರಾಷ್ಟ್ರದ ಯುವಜನತೆಯ ಬದುಕಿಗೆ ಇರುವ ಏಕೈಕ ಆದರ್ಶದ ವ್ಯಕ್ತಿತ್ವವೆಂದರೆ ಸ್ವಾಮಿ ವಿವೇಕಾನಂದರದ್ದು. ಸ್ವಾಮೀಜಿ ಭಾರತದ ಪ್ರಾಚೀನ ಹಾಗೂ ಆಧುನಿಕ ಪರಂಪರೆಗಳ ನಡುವೆ ಅತ್ಯುತ್ತಮ ಸೇತುವೆಯಾಗಿದ್ದಾರೆ’ ಎಂದಿದ್ದಾರೆ. ನಂತರದಲ್ಲಿ ಪ್ರಧಾನಿ ಇಂದಿರಾ ಗಾಂಧಿ ವಿವೇಕಾನಂದರ ಜಯಂತಿಯನ್ನು ‘ರಾಷ್ಟ್ರೀಯ ಯುವದಿನ’ವಾಗಿ ಆಚರಿಸಬೇಕೆಂದು ನಿರ್ದೇಶನವಿತ್ತರು.

ನಮ್ಮ ವಿದ್ಯಾರ್ಥಿಗಳಿಗೆ ನಿಜಕ್ಕೂ ವಿವೇಕಾನಂದರು ಅರ್ಥವಾಗಿದ್ದಾರೆಯೇ? ಸನಾತನವಾದಿಗಳಿಗೆ, ರಾಷ್ಟ್ರೀಯವಾದಿಗಳಿಗೆ ಹೇಗೋ ಹಾಗೆಯೇ ಎಲ್ಲ ಮಾನವತಾವಾದಿಗಳಿಗೆ ಹಾಗೂ ಸಮಾಜವಾದಿಗಳಿಗೂ ಏಕೈಕ ಆದರ್ಶ ವಿವೇಕಾನಂದರೆನ್ನುವುದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದಾರೆಯೇ? ನಮ್ಮ ಶಿಕ್ಷಕ, ಉಪನ್ಯಾಸಕ ಹಾಗೂ ಪ್ರಾಧ್ಯಾಪಕರು ‘ಕಲಿಯಲು ಆಸಕ್ತಿ ಉಳ್ಳವರೇ ಕಲಿಸಲು ಯೋಗ್ಯರು’ ಎಂಬ ತತ್ತ್ವಆದರ್ಶಕ್ಕೆ ಕನಿಷ್ಠ ಮಟ್ಟದಲ್ಲಾದರೂ ಬದ್ಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ? ‘ಇಂದಿನ ವಿಶ್ವವಿದ್ಯಾಲಯಗಳು ಯೋಗ್ಯತಾಪತ್ರಗಳನ್ನು ವಿತರಿಸುತ್ತಿವೆಯೇ ಹೊರತು ಯೋಗ್ಯತೆಯನ್ನಲ್ಲ’ ಎಂದು ರಾಮಕೃಷ್ಣ ಮಹಾಸಂಘದ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು ಅಭಿಪ್ರಾಯಪಟ್ಟಿದ್ದರು.

ಪುಲ್ವಾಮಾ ಘಟನೆಯಲ್ಲಿ ಮಡಿದ ಸೈನಿಕರ ಜಾತಿವಾರು ಪಟ್ಟಿಯನ್ನು ಪ್ರಕಟಿಸಬೇಕೆಂಬುದು ಒಬ್ಬ ಪ್ರಾಧ್ಯಾಪಕರ ಆಗ್ರಹವಾದರೆ, ‘ಸೈನಿಕರಾಗುವುದು ಹೊಟ್ಟೆಪಾಡಿಗಾಗಿ…, ದುರ್ಗೆ ಕ್ಷುದ್ರದೇವತೆಯಾದ್ದರಿಂದ ಪೂಜಿಸಬೇಡಿ’ ಎಂಬುದು ಮತ್ತೊಬ್ಬರದ್ದು. ವಿಶ್ವವಿದ್ಯಾಲಯಗಳಲ್ಲಿ ಜಾತಿವಾರು ವಿಂಗಡಣೆಗಳ ದುರಂತವಂತೂ ಹೇಳತೀರದು. ‘ಜನರಿಗೆ ಹಿರಿಯರಿಂದ ಬರುವ ಆಸ್ತಿಯಲ್ಲಿ ಭಾಷೆಯೂ ಒಂದು, ಅದು ಚೆನ್ನಾಗಿದ್ದಷ್ಟೂ ಭೂಷಣ’ ಎಂಬ ಕವಿ ಬಿ.ಎಂ.ಶ್ರೀ. ಅವರ ಸಾರ್ವಕಾಲಿಕ ಮಹತ್ವವುಳ್ಳ ಮಾತು ಇಂದಿನ ಬಹುಪಾಲು ಬೋಧಕರಿಗೆ ಅಪಥ್ಯ. ‘ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದೆ ತಮ್ಮ ರಕ್ಷಣೆಗಾಗಿ ಹಕ್ಕು ಬಾಧ್ಯತೆಗಳ ಹೋರಾಟವನ್ನು ಅವಲಂಬಿಸಿದರೆ ದೇಶ-ಸಮಾಜಗಳಲ್ಲಿ ಮಾನಸಿಕ ದಾರಿದ್ರ್ಯ ಭೂತಾಕಾರವಾಗಿ ವ್ಯಾಪಿಸುತ್ತದೆ’ ಎಂಬ ವಿವೇಕಾನಂದರ ಮಾತನ್ನು ಮನಗಾಣಬೇಕಿದೆ.

ಇವೆಲ್ಲ ವಿಚಾರಗಳನ್ನು ಪೂರ್ವಗ್ರಹವಿಲ್ಲದೆ ವಿಶ್ಲೇಷಿಸಿದಾಗ ಕುವೆಂಪು ಹೇಳಿದಂತೆ, ‘ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತ್ತಿತ್ತು ರಣವೀರರ ದಂಡು; ಇಂದು ಮುಂದೆ ಗುರಿಯಿಲ್ಲ, ಹಿಂದೆ ಗುರುವಿಲ್ಲ, ಸಾಗುತಿದೆ ರಣಹೇಡಿಗಳ ಹಿಂಡು’ ಎಂಬ ಮಾತು ಸ್ಪಷ್ಟವಾಗುತ್ತಿದೆ. ಮಾತೃಭೂಮಿಗಾಗಿ ಮತ್ತು ಮನುಷ್ಯ ಸಂಕುಲದ ಅಭ್ಯುದಯಕ್ಕಾಗಿ ಆತ್ಮಾರ್ಪಣೆ ಮಾಡಿಕೊಂಡ ವಿವೇಕಾನಂದರು ಇಂದಿನ ಯುವಜನತೆಯ ಬದುಕಿಗೆ ನಿಜಕ್ಕೂ ಪರಿಚಯವಾಗಿದ್ದಾರೆಯೇ? ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿರುವ ವಿವೇಕಾನಂದರ ಪುತ್ಥಳಿಯನ್ನು ವಿಕೃತಗೊಳಿಸುವ ಪ್ರಯತ್ನ, ಅವರ ವಸ್ತ್ರವನ್ನು ಹರಿದಂತಹ ಧೂರ್ತತನ ಮತ್ತು ರಾಜಕೀಯ ದ್ವೇಷಕ್ಕಾಗಿ ವಿಗ್ರಹದ ಪೀಠದ ಮೇಲೆ ಅವಾಚ್ಯ ಶಬ್ದಗಳ ಅನಾವರಣ ನಿಜಕ್ಕೂ ಅಸಹ್ಯ ತರುವುದಿಲ್ಲವೇ? ಇದು ಅತೃಪ್ತ ಆತ್ಮಗಳ ಕುಕೃತ್ಯವಲ್ಲದೆ ಮತ್ತೇನು? ಇಂದಿನ ರೋಗಗ್ರಸ್ತ ಶಿಕ್ಷಣ ಪದ್ಧತಿ ನಮಗೆ ವಿಶ್ವವಿದ್ಯಾಲಯಗಳ ಮೂಲಕ ಉತ್ಪಾದಿಸಿ ಕೊಡುತ್ತಿರುವ ಪ್ರಜೆಗಳು ಈವರೆಗೂ ಕೇವಲ ರೇಷನ್ ಕಾರ್ಡ್ ಮತ್ತು ವೋಟರ್ಸ್ ಲಿಸ್ಟ್​ನಲ್ಲಿ ಮಾತ್ರ ಬದುಕಿದ್ದರು. ಈಗ ಇಡೀ ಮಾನವಕುಲವೇ ಗೌರವಿಸುವ ವ್ಯಕ್ತಿತ್ವವನ್ನು ಅಗೌರವಿಸುವ ಮೂಲಕ ಮತ್ತೂ ಅಧೋಗತಿಗೆ ತಲುಪಿದ್ದು ಪ್ರಜ್ಞಾವಂತರು ತಲೆತಗ್ಗಿಸುವಂತೆ ಮಾಡಿದ್ದಾರೆ.

ಶಾಲಾಕಾಲೇಜುಗಳಲ್ಲಿ ಮಕ್ಕಳಿಗೆ ‘ಅನುತ್ತೀರ್ಣತೆ’ಯ ಭಯವಿಲ್ಲ. ಪ್ರಶ್ನೆಪತ್ರಿಕೆಗಳ ಸೋರುವಿಕೆಯ ಪ್ರಕ್ರಿಯೆಯಂತೂ ರಾಜಾರೋಷವಾಗಿ ಮುಂದುವರಿದಿದೆ. ಇನ್ನು ನಕಲಿ ಅಂಕಪಟ್ಟಿಗಳ ಸಂಪಾದನೆ, ತನ್ಮೂಲಕ ಉದ್ಯೋಗವನ್ನೂ ಗಿಟ್ಟಿಸಿಕೊಳ್ಳುವ ಹೇಡಿ ಚಮತ್ಕಾರ ಪ್ರವೃತ್ತಿಗಂತೂ ಕೊನೆ-ಮೊದಲಿಲ್ಲ. ಕಾನೂನು ತಜ್ಞ ನಾನಿ ಪಾಲ್ಕೀವಾಲಾ ಒಮ್ಮೆ ಹೇಳಿದ್ದುಂಟು, ‘ನಾವು ವಿದ್ಯಾರ್ಥಿಗಳಾಗಿದ್ದಾಗ ಶಾಲಾಕಟ್ಟಡಗಳು ಸೋರುತ್ತಿದ್ದವು. ಈಗ ಪ್ರಶ್ನೆಪತ್ರಿಕೆಗಳೂ ಸೋರಿಕೆಯಾಗುತ್ತಿವೆ!’ ಎಂದು. ರಾಷ್ಟ್ರದ ಜವಾಬ್ದಾರಿ ಹೊರಬೇಕಾದ ಯುವಜನತೆಗೆ ಬದುಕಿನ ಆದರ್ಶಗಳನ್ನು ಪರಿಚಯಿಸದಿದ್ದರೆ ಪಾಲಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರು ತಮ್ಮ ಅಸ್ತಿತ್ವವನ್ನು‘More dead than alive’ ಎಂದೇ ಸಮರ್ಥಿಸಿಕೊಂಡಂತೆ ಆಗುವುದಿಲ್ಲವೇ? ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ಬಹುಸಂಖ್ಯೆಯ ಸಾಕ್ಷರರು ರಾಷ್ಟ್ರದ ಅಭ್ಯುದಯಕ್ಕೆ ಟೊಂಕಕಟ್ಟಿ ನಿಲ್ಲುವ ಮಾತಂತೂ ಮರೀಚಿಕೆ. ಆದ್ದರಿಂದ ಶಿಕ್ಷಣದಲ್ಲಿ ಐಚ್ಛಿಕ ವಿಷಯಗಳಿಗೆ ಶೇಕಡ 50 ಅಂಕಗಳಾದರೆ ವ್ಯಕ್ತಿತ್ವ ನಿರ್ವಣಕ್ಕೆ ಪೂರಕವಾದ ಸತ್ಯಸಂಧತೆ, ಪ್ರಾಮಾಣಿಕತೆ, ದಯಾಪರತೆ, ಕಾರ್ಯದಕ್ಷತೆ ಮತ್ತು ಕ್ರಿಯಾಶೀಲತೆಗಳಿಗೆ ಇನ್ನುಳಿದ 50 ಅಂಕಗಳಿದ್ದರೆ ಒಳಿತು. ಬದುಕಿನಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಯೌವನದ ಅವಧಿ ವಸಂತಕಾಲವೇ ಸರಿ. ರಾಷ್ಟ್ರೋನ್ನತಿಗಾಗಿ ವಿವೇಕಾನಂದರು ಭರವಸೆ ತಾಳಿದ್ದು ನಾಡಿನ ಯುವಶಕ್ತಿಯಲ್ಲಿ.

ಯುವಜನರೇ, ಮಹಾತ್ಮರ ಪುತ್ಥಳಿಗಳಿಗೆ ಮಸಿ ಬಳಿಯಲು ಹೊರಟರೆ ನಿಮ್ಮ ಚರಿತ್ರೆಯೇ ‘ಹುಸಿ’ಯಾಗುತ್ತದೆ. ಕೇವಲ ಲೌಕಿಕ ಹಾಗೂ ವಿಕಾರ ಪ್ರಧಾನವಾದ ಮನರಂಜನೆ ಹೆಸರಿನಲ್ಲಿ ಬದುಕನ್ನು ರೂಪಿಸಿಕೊಳ್ಳಲು ಹೊರಟಾಗ ನೈತಿಕತೆ ಹಿಂದಿನ ಸಾಲಿಗೆ ತೆರಳುತ್ತದೆ. ರಾಷ್ಟ್ರದ ಉನ್ನತಿಗಾಗಿ ನಮ್ಮ ಹಿರಿಯರು ಅದ್ಭುತ ಸಂವಿಧಾನವನ್ನು ಅನುಗ್ರಹಿಸಿದ್ದಾರೆ. ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಶ್ರದ್ಧೆಯಿಂದ ಗೌರವಿಸಿ, ಉಳಿಸಿ ಅದರಿಂದ ಸ್ಪೂರ್ತಿಗೊಂಡು ಯೋಗ್ಯರೀತಿಯಲ್ಲಿ ಸಾಗಬೇಕು. ಜೋಸೆಫ್ ಸ್ಟೋರಿ ಹೇಳುತ್ತಾನೆ- ‘ಮಾನವರಚಿತ ಸಂವಿಧಾನವನ್ನು ಪೋಷಿಸಿ ಬೆಳೆಸುವುದರ ಧ್ಯೇಯೋದ್ದೇಶ ಅದನ್ನು ಅಮರವಾಗಿಸಲು. ಆದರೆ ತಪ್ಪುಗಳಿಂದ ಅಥವಾ ಭ್ರಷ್ಟಾಚಾರದಿಂದ ಅದನ್ನು ಜತನವಾಗಿ ಕಾಪಾಡದೇ ಹೋದಲ್ಲಿ ಅದು ಕ್ಷಣಮಾತ್ರದಲ್ಲಿ ನಿಷ್ಪಲವಾಗಬಹುದು’. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಯುವಜನತೆಯಂತೂ ಗಮನಿಸಲೇಬೇಕಾದ ವಿವೇಕವಾಣಿಯೆಂದರೆ, ‘ಸ್ವಾತಂತ್ರ್ಯವೆಂದರೆ ಹೊಣೆಗಾರಿಕೆ, ಆದರೆ ಹೊಣೆಗಾರಿಕೆಯನ್ನು ನಿರ್ಲಕ್ಷಿಸಿ ಕೇವಲ ಸ್ವಾತಂತ್ರ್ಯಕ್ಕಾಗಿ ಹಪಹಪಿಸುವವರು ಅನ್ಯವಂಚಕರಷ್ಟೇ ಅಲ್ಲ, ಆತ್ಮವಂಚಕರೂ ಹೌದು’.

ಇತಿಹಾಸಜ್ಞ ವಿಲ್ ಡ್ಯೂರೆಂಟ್ ಹೇಳುತ್ತಾನೆ: ‘ಇಟಲಿಯ ಪ್ರಗತಿಗೆ ಒಂದು ಪುನರುಜ್ಜೀವನ ಚಳುವಳಿ, ಜರ್ಮನಿಯ ಪ್ರಗತಿಗೆ ಒಂದು ಸುಧಾರಣಾ ಚಳುವಳಿ, ಫ್ರಾನ್ಸ್​ನ ಪ್ರಗತಿಗೆ ಒಬ್ಬ ಮಹಾವಾಗ್ಮಿ ವಾಲ್ಟೈರ್; ಭಾರತದ ಪ್ರಗತಿಗೆ ಒಬ್ಬ ಸ್ವಾಮಿ ವಿವೇಕಾನಂದ’. ನಮ್ಮ ರಾಷ್ಟ್ರದ ಬೋಧಕವರ್ಗದವರು ಹಾಗೂ ಸಮಾಜದ ಹಿರಿಯರು ಈ ಮಾತನ್ನು ವಿದ್ಯಾರ್ಥಿ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇ ಆದರೆ ನಮ್ಮ ಸಂಸ್ಕೃತಿಯನ್ನು ರಕ್ಷಿಸಿ, ಪೋಷಿಸಿ ನಮಗೆ ಉಡುಗೊರೆಯಾಗಿ ನೀಡಿದ ವಿವೇಕಾನಂದರಾದಿಯಾಗಿ ನಮ್ಮ ದೇಶದ ಎಲ್ಲ ಮಹಾನ್ ಚೇತನಗಳು ಜಾತ್ಯತೀತವಾಗಿ ಹಾಗೂ ಧರ್ವತೀತವಾಗಿ ಪೂಜ್ಯರೆನಿಸಿ

ಪ್ರಾತಃಸ್ಮರಣೀಯರಾಗುವುದರಲ್ಲಿ ಸಂದೇಹವಿಲ್ಲ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...