ಏನು ಮಾಡುತ್ತಾರಂತೆ ಜೆಡಿಎಸ್​ ಕಾರ್ಯಕರ್ತರು? ಇದು ರೌಡಿ ರಾಜ್ಯವಲ್ಲ… ಎಂದು ಸಿಎಂಗೆ ಟಾಂಗ್​ ಕೊಟ್ಟ ಯಶ್​

ಮಂಡ್ಯ: ನಾನು ಜೆಡಿಎಸ್​ ಪಕ್ಷವನ್ನು ಕಳ್ಳರ ಪಕ್ಷ ಎಂದು ಯಾವತ್ತೂ ಹೇಳಿಲ್ಲ. ನಾನು ಹಾಗೆ ಹೇಳಿದ್ದೇನೆಂದು ಯಾರಾದರೂ ತೋರಿಸಿಬಿಡಲಿ, ಅವರು ಹೇಳಿದಂತೆ ಕೇಳುತ್ತೇನೆ ಎಂದು ನಟ ಯಶ್​ ಹೇಳಿದ್ದಾರೆ.

ಜೆಡಿಎಸ್​ ಅನ್ನು ಕಳ್ಳರ ಪಕ್ಷ ಎಂದು ಯಶ್​ ಹೇಳಿದ್ದಾಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದಲ್ಲಿಯೂ ನನಗೆ ತುಂಬ ಜನರು ಸ್ನೇಹಿತರಿದ್ದಾರೆ. ಕಳೆದ ಬಾರಿ ಅವರ ಪರವಾಗಿಯೂ ಹೋಗಿ ಪ್ರಚಾರ ನಡೆಸಿದ್ದೆ. ಅದು ಕಳ್ಳರ ಪಕ್ಷವೆಂದಾದರೆ ನಾನ್ಯಾಕೆ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದರು.

ಅವರು ರಾಜ್ಯದ ಸಿಎಂ. ತುಂಬ ಬಿಜಿಯಾಗಿರುತ್ತಾರೆ. ಈ ವಿಚಾರದಲ್ಲಿ ಯಾರೋ ಚಾಡಿ ಹೇಳಿರಬೇಕು. ಮಿಸ್​ ಗೈಡ್​ ಮಾಡಿರಬೇಕು. ನಾನ್ಯಾವತ್ತೂ ಹಾಗೆ ಹೇಳಿಲ್ಲ. ಸುಮ್ಮನೆ ಆಡದ ಮಾತಿಗೆಲ್ಲ ನಾನು ಆರೋಪ ಹೊತ್ತುಕೊಳ್ಳುವುದಿಲ್ಲ. ಅವರ ಪಕ್ಷದಲ್ಲೇ ಹಲವು ಜನರು ಏನೇನೋ ಕೆಟ್ಟದಾಗಿ ಮಾತುಗಳನ್ನಾಡುತ್ತಿದ್ದಾರೆ. ಮಾಯಾಂಗನೆ ಎನ್ನುತ್ತಿದ್ದಾರೆ. ನಮಗೂ ಸಿನಿಮಾದವರು ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತೀರ ಪರ್ಸನಲ್​ ಆಗಿ ವಾಗ್ದಾಳಿ ನಡೆಸಿದಾಗ ತಿರುಗಿ ಮಾತಾಡಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿಯವರು ಸಿನಿಮಾದವರ ಮಾತು ನಂಬಬೇಡಿ ಎಂದು ಪದೇಪದೆ ಹೇಳಿದ್ದರು. ಈಗ ತಾವೂ ನಿರ್ಮಾಪಕ ಎನ್ನುವ ಮೂಲಕ ಅವರೂ ಸಿನಿಮಾದವರು ಎಂಬುದನ್ನು ಒಪ್ಪಿಕೊಂಡಿದ್ದಾರಲ್ಲ. ಹಾಗಾಗಿ ಜನ ಯಾರ ಮಾತನ್ನೂ ನಂಬಬಾರದು ಎಂದಾಯಿತಲ್ಲ ಎಂದು ಟಾಂಗ್​ ನೀಡಿದರು.

ಅವರ ಕಾರ್ಯಕರ್ತರು ಏನು ಮಾಡುತ್ತಾರಂತೆ. ನಾವು ಸುಮಲತಾ ಪರ ಪ್ರಚಾರ ನಡೆಸಬಾರದಂತಾ? ಜಾಸ್ತಿ ಮಾತನಾಡುತ್ತಿದ್ದೀನಿ ಎಂದರೆ ಏನರ್ಥ? ಇದು ರೌಡಿ ರಾಜ್ಯವಲ್ಲ. ಪ್ರಜಾಪ್ರಭುತ್ವ. ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಮಾತನಾಡಬೇಕಾಗುತ್ತದೆ. ಆರೂವರೆ ಕೋಟಿ ಜನ ಒಪ್ಪಿಕೊಂಡ ಮುಖ್ಯಮಂತ್ರಿ ಹೀಗೆ ಹೇಳಬಹುದಾ? ಅಂಬರೀಷಣ್ಣ ಇದ್ದಾಗಲೂ, ಈಗಲೂ ಅವರ ಮನೆಯ ಮಕ್ಕಳಂತೆ ಇದ್ದೇವೆ. ನಮ್ಮ ಅಭ್ಯರ್ಥಿ ಪರ ನಾವು ಮಾತನಾಡುತ್ತ, ಪ್ರಚಾರ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

One Reply to “ಏನು ಮಾಡುತ್ತಾರಂತೆ ಜೆಡಿಎಸ್​ ಕಾರ್ಯಕರ್ತರು? ಇದು ರೌಡಿ ರಾಜ್ಯವಲ್ಲ… ಎಂದು ಸಿಎಂಗೆ ಟಾಂಗ್​ ಕೊಟ್ಟ ಯಶ್​”

  1. ದಯವಿಟ್ಟು ಶಾಂತಿಯನ್ನು ಕಾಪಾಡಿಕೊಳ್ಳಿ ಎಲ್ಲರೂ, ಇನ್ನೆರಡು ದಿನಗಳಷ್ಟೇ, ಮತ್ತೆ ಎಲ್ಲರೂ ಅವರವರ ಕೆಲಸ ಕಾರ್ಯಗಳಿಗೆ ಹಿಂತಿರುಗಬೇಕಿದೆ. ಮಂಡ್ಯದ ಚುನಾವಣೆ ಒಂದು ದೊಡ್ಡ ಜಟಿಲವಾದ ಸಮಸ್ಯೆಯೇ ಹೌದು. ಇದು ವಿಧಿ ತಂದ ಪರೀಕ್ಷೆ ಮಂಡ್ಯದ ಜನತೆಗೆ. ಸದ್ಯಕ್ಕೆ ಮಂಡ್ಯದಲ್ಲಿರುವ MLA ಗಳೆಲ್ಲರೂ ಸನ್ಮಾನ್ಯ ದೇವೇಗೌಡರ ಮತ್ತು CM ಕುಮಾರಣ್ಣನ ಪಕ್ಷ JDS ನವರಾಗಿದ್ದಾರೆ. ಮಂಡ್ಯದ ಈ ದಿಗ್ವಿಜಯ ಸನ್ಮಾನ್ಯ CM HD ಕುಮಾರಸ್ವಾಮಿಯವರ ಒಂದು ವರ್ಷದ ಹಿಂದಿನ ಬೆವರಿನ ಫಲವಾಗಿದೆ. ಆದರೆ ಈಗ ವಿಧಿಯ ಆಟದಿಂದಾಗಿ ಮಂಡ್ಯದ ಗಂಡು ಅಂಬರೀಷ್ ಅವರು ಇಲ್ಲ. ಇದು ಒಂದು ಧರ್ಮ ಸಂಕಟವೇ ಸರಿ ಮಂಡ್ಯದ ಮತದಾರರಿಗೆ. ಗೌಡರ ಮೇಲಿಟ್ಟ ನಿಷ್ಠೆಯನ್ನು ತೊರೆದು ಕುಮಾರಣ್ಣನ ಕೈ ಬಿಟ್ಟು ಸುಮಲತಾ ಅಂಬರೀಷ್ ಅವರ ಕೈ ಬಲಪಡಿಸುವುದೋ ? ಇಲ್ಲ ತಮ್ಮ ನಿಷ್ಠೆಯನ್ನು ಮುಂದುವರೆಸಿ ನಿಖಿಲ್ ಕುಮಾರಸ್ವಾಮಿಯವರನ್ನು ತಮ್ಮ ಪ್ರತಿನಿಧಿಯಾಗಿ ದೆಹಲಿಗೆ ತಾತನ ಜೊತೆ ಕಳಿಸಿಕೊಡುವುದೋ ? ಪತ್ತೆ ಮಾಡಲು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಕಾಯಲೇ ಬೇಕು. – ಗುಂಜ್ಮ೦ಜ (GUNJMANJA)

Comments are closed.