ಲಾಕ್‌ಡೌನ್ 4.0: ಕೇಂದ್ರದ ಮಾರ್ಗಸೂಚಿ ಶನಿವಾರ ಪ್ರಕಟ ನಿರೀಕ್ಷೆ- ಏನಿರುತ್ತೆ ಹೊಸ ನಿಯಮದಲ್ಲಿ?

blank
blank

ನವದೆಹಲಿ: ದೇಶದಲ್ಲಿ ನಾಲ್ಕನೇ ಹಂತದ ಕರೊನಾ ಲಾಕ್‌ಡೌನ್‌ನ ನಿಯಮಾವಳಿಗಳನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸುವ ಸಾಧ್ಯತೆ ಇದೆ.

ಉಳಿದ ಮೂರು ಹಂತಗಳ ಲಾಕ್‌ಡೌನ್ ಮಾರ್ಗಸೂಚಿಗಿಂತ ನಾಲ್ಕನೇ ಹಂತದ್ದು ಸಂಪೂರ್ಣ ವಿಭಿನ್ನವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ ದಾಖಲೆಯ 90ರಿಂದ ಶೂನ್ಯಕ್ಕೆ ಇಳಿದ ಮೈಸೂರು!

ಹೊಸ ಮಾರ್ಗಸೂಚಿಯನ್ನು ಘೋಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಿಲ್ಲ. ಬದಲಿಗೆ, ಈ ಮಾರ್ಗಸೂಚಿಗಳನ್ನು ಗೃಹ ಸಚಿವಾಲಯವೇ ಅಧಿಸೂಚನೆಯ ರೂಪದಲ್ಲಿ ಪ್ರಕಟಿಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಮೊದಲ ಬಾರಿಗೆ ಮಾರ್ಚ್ 25ರಂದು ಘೋಷಿಸಿದ ಲಾಕ್‌ಡೌನ್ ಏಪ್ರಿಲ್ 14ರಂದು ಅಂತ್ಯಗೊಳ್ಳಬೇಕಿತ್ತು. ಆದರೆ ಅದನ್ನು ಮೇ 3ರವರೆಗೆ ವಿಸ್ತರಿಸಲಾಯಿತು. ನಂತರ ಮೇ 17ರವರೆಗೆ ವಿಸ್ತರಿಸಲಾಯಿತು. ನಾಲ್ಕನೇ ಹಂತದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಲಕ್ಷಿಸುವುದರ ಜತೆಗೇ ಕೆಲಸ ಕಾರ್ಯಗಳನ್ನೂ ಆರಂಭಿಸಬೇಕಿರುವುದರಿಂದ ಹೊಸ ನಿಯಮಾವಳಿಗಳು ಹೇಗಿರುತ್ತವೆ ಎಂಬ ಕುತೂಹಲ ಎಲ್ಲರಲ್ಲಿದೆ.

ಇದನ್ನೂ ಓದಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಎರಡು ಬಾಲ್ಯವಿವಾಹ ತಡೆದ ಅಧಿಕಾರಿಗಳು

ಬಸ್, ಟ್ಯಾಕ್ಸಿ, ಆಟೋರಿಕ್ಷಾ, ಮೆಟ್ರೋ ರೈಲು ಮತ್ತಿತರ ಭೂಸಾರಿಗೆ ಆರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರುವ ಸಾಧ್ಯತೆ ಇದೆ. ಎಲ್ಲ ಬಗೆಯ ಅಂಗಡಿ ಮುಂಗಟ್ಟು ಮತ್ತು ಕೈಗಾರಿಕೆಗಳನ್ನು ಆರಂಭಿಸಿ ಆರ್ಥಿಕತೆಗೆ ಹೊಸ ಚೈತನ್ಯ ನೀಡುವುದಕ್ಕೂ ಕೇಂದ್ರ ಮುಂದಾಗಲಿದೆ. ಆದರೆ ಇದೆಲ್ಲವೂ ಗ್ರೀನ್ ಜೋನ್‌ನಲ್ಲಿರುವ ಪ್ರದೇಶಗಳಿಗೆ ಮಾತ್ರ ಅನ್ವಯವಾಗಲಿದೆ. ಕೆಂಪು ವಲಯದಲ್ಲಿರುವವರು ಈ ಎಲ್ಲ ಸೌಲಭ್ಯಕ್ಕೆ ಇನ್ನಷ್ಟು ದಿನ ಕಾಯಬೇಕಾಗಬಹುದು.

ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೈಗಾರಿಕೆಗಳಿಗೆ ಕೇಂದ್ರ ಸೂಚಿಸಲಿದೆ.

ಇದನ್ನೂ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಸೋಮವಾರ ಪ್ರಕಟ

ಆದರೆ ಸದ್ಯಕ್ಕೆ ಪ್ರಯಾಣಿಕ ರೈಲು ಸೇವೆಯನ್ನು ಸಂಪೂರ್ಣವಾಗಿ ಆರಂಭಿಸುವ ಯೋಚನೆ ಕೇಂದ್ರಕ್ಕೆ ಇಲ್ಲ. ಕೆಲವು ದಿನಗಳ ಹಿಂದೆ ಆರಂಭವಾಗಿರುವ ಶ್ರಮಿಕ ಮತ್ತು ವಿಶೇಷ ರೈಲುಗಳ ಸಂಚಾರ ಮುಂದುವರಿಯಲಿದೆ.

ಮೇ 18ರಿಂದ ದೇಶೀಯ ವಿಮಾನ ಯಾನವನ್ನು ಆಯ್ದ ಕೆಲವು ಮಾರ್ಗಗಳಲ್ಲಿ ಆರಂಭಿಸಬೇಕೆನ್ನುವುದು ಕೇಂದ್ರದ ಚಿಂತನೆಯಲ್ಲಿರುವ ಇನ್ನೊಂದು ಪ್ರಮುಖ ಅಂಶ. ವಿಮಾನಗಳ ಫ್ರೀಕ್ವೆನ್ಸಿಯನ್ನು ಮೊದಲ ಹಂತದಲ್ಲಿ ಕಡಿಮೆ ಇಟ್ಟು, ನಂತರ ಹಂತ ಹಂತವಾಗಿ ಏರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅನ್ಯ ರಾಜ್ಯಗಳಲ್ಲಿರುವ ಕನ್ನಡಿಗರು ಬದುಕಿದರೆ ಅಲ್ಲೇ ಬದುಕಲಿ, ಸತ್ತರೆ ಅಲ್ಲೇ ಸಾಯಲಿ!

ಮುತ್ತಪ್ಪ ರೈ ಸಾವಿಗೆ ಒಂದು ದಿನ ಮೊದಲು ಕುತೂಹಲ ಕೆರಳಿಸಿದ ಡಾನ್​ ಜಯರಾಜ್​ ಪುತ್ರನ ಟ್ವೀಟ್​

Share This Article

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…

ಈ ಅಭ್ಯಾಸಗಳು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ, ಅವುಗಳನ್ನು ತಕ್ಷಣ ಬಿಟ್ಟುಬಿಡಿ | Chanakya Niti

Chanakya Niti: ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದೂ ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ತಮ್ಮ…