blank

ಹೆಮ್ಮಾಡಿ ಉಪ್ಪುನೀರಿನ ಸಮಸ್ಯೆಗೆ ಏನ್ಮಾಡ್ಲಿ?

blank

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೋಷ ನಗರದ ಎರಡನೇ ವಾರ್ಡ್‌ನ ಬುಗುರಿಕಡುವಿನಿಂದ ಕೋಟೆಬೆಟ್ಟು ತನಕ ಬಹುತೇಕ ಭಾಗಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಸ್ಥಳೀಯ ಜನರಿಗೆ ಸೇರಿದ ಬಾವಿ ನೀರಿಗೆ ಕಂಟಕವಾಗಿದೆ.

ಬುಗುರಿಕಡುವಿನಿಂದ ಅಬ್ಬುಹಿತ್ಲು ತನಕ ಪ್ರದೇಶದ ಜಲಸಂಪನ್ಮೂಲವಿಡಿ ಉಪ್ಪು ನೀರಿನ ಮಿಶ್ರಣವಾಗಿದ್ದು, ಡಿಸೆಂಬರ್‌ನಿಂದ ಸಮಸ್ಯೆ ಆರಂಭವಾಗಿದೆ. ಇದರಿಂದ ಬಾವಿ, ಕೆರೆ ನೀರು ದಿನಬಳಕೆಗೆ ಉಪಯೋಗಿಸಲು ಅಸಾಧ್ಯವಾಗಿದ್ದು, ಕೃಷಿಕರ ಬೆಳೆ ಕೂಡ ಹಾಳಾಗುತ್ತಿದೆ.

ಐವತ್ತು ಮನೆಗೆ ಏಕೈಕ ಬಾವಿ

ಬುಗುರಿಕಡು ಭಾಗದಲ್ಲಿ 50ಕ್ಕೂ ಅಧಿಕ ಮನೆಗಳಿದ್ದು, ಉಪ್ಪುನೀರಿನ ಕಾರಣದಿಂದ ಬಾವಿ ನೀರಿನ ಬಣ್ಣ ಸಂಪೂರ್ಣ ಬದಲಾಗಿದೆ. ಬಹತೇಕ ಮನೆಯವರು ಸುಮಾರು 1 ಕಿ.ಮೀ. ದೂರದ ಕಂಠದಮನೆಯ ಬಾವಿಯನ್ನೇ ಆಶ್ರಯಿಸಿದ್ದಾರೆ. ಐವತ್ತು ಎಕರೆಗೂ ಅಧಿಕ ಭೂಪ್ರದೇಶ ಗದ್ದೆಯಾಗಿದ್ದು, ಅನೇಕ ರೈತರು ಉಪ್ಪು ನೀರಿನ ಸಮಸ್ಯೆಯಿಂದ ಹಿಂಗಾರಿನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈಗಾಗಲೇ ಬೆಳೆದ ಬೆಳೆ ಕೊಯ್ಯಲು ಅಸಾಧ್ಯ. ಅಲ್ಲದೇ ಬುಗುರಿಕಾಡು ಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ರೈತ ಬಾಬು ಪೂಜಾರಿ ಅಳಲು ತೋಡಿಕೊಂಡಿದ್ದಾರೆ.

ನಾನು ಸದಸ್ಯನಾದ ನಂತರ ನಾಲ್ಕು ವರ್ಷದಿಂದ ಜನರಿಗೆ ನೆರವಾಗಲಿ ಎಂಬ ಉದ್ದೇಶದಿಂದ ನದಿದಂಡೆಗೆ ಬೇಡಿಕೆ ಇಡುತ್ತಲೇ ಇದ್ದು, ಸಂಸದರಿಗೂ ಮನವಿ ನೀಡಿದ್ದೇನೆ. ಶಾಸಕರ ಗಮನಕ್ಕೂ ತರಲಾಗಿದೆ. ಈ ಬಾರಿಯಾದರೂ ಮಾಡಿಕೊಡುವ ಭರವಸೆಯಿದೆ. ಇಲ್ಲಿ ಸುಮಾರು 2 ಕಿ.ಮೀ. ದೂರದವರೆಗೆ ನದಿದಂಡೆಯಾದರೆ ನೂರಾರು ಮನೆಗಳಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಅಂದಾಜು 4 ಕೋಟಿ ರೂ. ಅನುದಾನ ಅಗತ್ಯವಿದೆ.
-ಆನಂದ ಪೂಜಾರಿ ಪಡುಮನೆ ಸ್ಥಳೀಯ ಗ್ರಾಪಂ ಸದಸ್ಯ

ವಿದ್ಯಾರ್ಥಿವೇತನಕ್ಕೆ ಪ್ರವೇಶ ಪರೀಕ್ಷೆ

ರಸ್ತೆ ಬಿರುಕು ಸಂಚಾರ ತೊಡಕು-ಕಾಂಕ್ರೀಟಿಕರಣಗೊಂಡು ವರ್ಷದೊಳಗೆ ಗುಂಡಿ

 

Share This Article

Summer Foods: ಬೇಸಿಗೆಯಲ್ಲಿ ಬಿಸಿಲನ್ನು ತಡೆದುಕೊಳ್ಳಲು ಯಾವ ಆಹಾರಗಳನ್ನು ಸೇವಿಸಬೇಕು ಗೊತ್ತಾ?

Summer Foods: ದಿನೇ ದಿನೇ ಬಿಸಿಲಿನ ತೀವ್ರತೆ ಹೆಚ್ಚುತ್ತಲೇ ಇದೆ. ಬೆಳಿಗ್ಗೆ 10 ಗಂಟೆಯ ನಂತರ…

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಮನೆಯಲ್ಲಿರುವ ಈ ಒಂದು ವಸ್ತುವಿನಿಂದ ಸಿಗಲಿದ ಪರಿಹಾರ | Health Tips

ಇಂದಿನ ಕಾರ್ಯನಿರತ ಜೀವನ ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಇದು ಇಡೀ…

ಗಾಢನಿದ್ರೆಯಿಂದ ಮುಂಜಾನೆ 2-3 ಗಂಟೆಗೆ ಹಠಾತ್​ ಎಚ್ಚರವಾಗುತ್ತಿದೆಯೇ?; ಅದರ ಹಿಂದಿನ ಕಾರಣ ಹೀಗಿದೆ.. | Health Tips

ರಾತ್ರಿಯಲ್ಲಿ ಆಳವಾದ ಮತ್ತು ಸಾಕಷ್ಟು ನಿದ್ರೆ ಪಡೆಯುವುದು ಮುಖ್ಯ. ಆದರೆ ಅನೇಕ ಜನರಿಗೆ ನಿದ್ರೆಯ ಮಧ್ಯದಲ್ಲಿ…