ಬೆಂಗಳೂರು: ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ ಪಾಲಕರು ಕೂಡ ಸಾಕಷ್ಟು ಪ್ರಭಾವ ಬೀರುತ್ತಾರೆ, ಆದ್ದರಿಂದ ಪೋಷಕರಾಗುವುದು ಹೆಚ್ಚಿನ ಜವಾಬ್ದಾರಿ ಎಂದು ಹೇಳಲಾಗುತ್ತದೆ. ಮಕ್ಕಳು ಪ್ರತಿಯೊಂದು ಸಣ್ಣ ವಿಷಯವನ್ನು ಗಮನಿಸುತ್ತಾರೆ, ನಿಮ್ಮ ಮಕ್ಕಳು ನಿಮ್ಮ ಕೆಲವು ಗಣ ಹಾಗೂ ವರ್ತನೆಯನ್ನು ತಾವೂ ಅವರ ಜೀವನದಲ್ಲಿ ರೂಢಿಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಮೆನೆಯಲ್ಲಿ ಒಳ್ಳೆಯ ಶಿಕ್ಷಣ ಸಿಗುವುದು ಮುಖ್ಯವಾಗಿರುತ್ತದೆ.ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ…
ಪೋಷಕರು ತಮ್ಮ ಮಕ್ಕಳ ಮುಂದೆ ಆಕಸ್ಮಿಕವಾಗಿ ಜಗಳವಾಡಬಾರದು, ಏಕೆಂದರೆ ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪೋಷಕರ ನಡುವಿನ ಜಗಳ ನೋಡಿ ಮಕ್ಕಳಲ್ಲಿ ಒತ್ತಡ ಹೆಚ್ಚುತ್ತದೆ.
ಮಕ್ಕಳು ತಮ್ಮ ಹೆತ್ತವರಿಂದ ಬಹಳಷ್ಟು ಕಲಿಯುತ್ತಾರೆ, ಅದು ಒಳ್ಳೆಯದು ಅಥವಾ ಕೆಟ್ಟದು. ಆದ್ದರಿಂದ, ಮಕ್ಕಳ ಮುಂದೆ ಅಥವಾ ಅವರಿಗಾಗಿ ನಿಂದನೀಯ ಹಾಗೂ ಅಶ್ಲೀಲ ಪದಗಳನ್ನು ಬಳಸುವುದು ಅವರ ದೃಷ್ಟಿಯಲ್ಲಿ ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ. ಮಕ್ಕಳು ಸಹ ಅದೇ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸುತ್ತಾರೆ, ಆದ್ದರಿಂದ, ಮನೆಯಲ್ಲಿ ಮಾತನಾಡುವಾಗ, ಕೋಪಗೊಂಡಾಗ ಅಥವಾ ಅವರನ್ನು ಗದರಿಸುವಾಗ ನೀವು ಬಳಕೆ ಮಾಡುವ ಪದಗಳ ಬಗ್ಗೆ ಎಚ್ಚರ ಇರಲಿ.
ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಇತರರನ್ನು ಅವಮಾನಿಸಬೇಡಿ. ನಿಮ್ಮ ಮಕ್ಕಳು, ವಯಸ್ಕರು, ಮನೆಕೆಲಸ ಮಾಡುವವರು, ನಿಮ್ಮ ಸುತ್ತಮುತ್ತಲಿನ ಜನರ ಮುಂದೆ ನೀವು ಸರಿಯಾಗಿ ವರ್ತಿಸದಿದ್ದರೆ, ಈ ನಡವಳಿಕೆಯು ಮಕ್ಕಳಲ್ಲಿ ಅಭ್ಯಾಸವಾಗುತ್ತದೆ.
ಮಕ್ಕಳ ಮುಂದೆ ಯಾವುದೇ ಸುಳ್ಳನ್ನು ಹೇಳಿದರೆ, ಮಕ್ಕಳು ಸುಳ್ಳು ಹೇಳುವುದನ್ನು ಕಲಿಯುವುದಿಲ್ಲ, ಆದರೆ ತಮ್ಮ ಹೆತ್ತವರ ಮೇಲಿನ ಗೌರವವನ್ನು ಕಡಿಮೆ ಮಾಡುತ್ತಾರೆ, ಏಕೆಂದರೆ ಪೋಷಕರು ಮಕ್ಕಳಿಗೆ ಮಾದರಿಯಾಗಿದ್ದಾರೆ.