VIDEO | ರಕ್ಷಿತ್​​ ಶೆಟ್ಟಿಯ ಜತೆ ಮತ್ತೆ ಸಿನಿಮಾ ಮಾಡ್ತಿರಾ ಎಂದಿದ್ದಕ್ಕೆ ಕಿರಿಕ್​ ಹುಡುಗಿ ಪ್ರತಿಕ್ರಿಯಿಸಿದ್ದು ಹೀಗೆ!

ಬೆಂಗಳೂರು: ಕಿರಿಕ್​​ ಪಾರ್ಟಿ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಪ್ರಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಅವರು ಸದ್ಯ ತೆಲುಗಿನ ಡಿಯರ್​ ಕಾಮ್ರೆಡ್​​ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕನ್ನಡದಲ್ಲಿಯೂ ಡಬ್ಬಿಂಗ್​​​ ಆಗುತ್ತಿದೆ. ರಶ್ಮಿಕಾ ಸಿನಿಮಾ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ದಿಗ್ವಿಜಯ ಜತೆ ಹಂಚಿಕೊಂಡಿದ್ದಾರೆ.

ಈ ಸಿನಿಮಾ ಪಕ್ಕ ಕನ್ನಡ ಚಿತ್ರ, ಹಾಡನ್ನು ಸ್ವತಃ ನಾನೇ ಹಾಡಿದ್ದೇನೆ. ಚಿತ್ರದ ಶೂಟಿಂಗ್​ ವೇಳೆ ಬಹಳ ಕಷ್ಟಪಟ್ಟು ಪಾತ್ರ ಮಾಡಿದ್ದೇನೆ. ಈ ಸಿನಿಮಾದಲ್ಲಿ ಯಾವುದೇ ಮೇಕಪ್​​​ ಮ್ಯಾನ್​​ ಇಲ್ಲ. ನಾನೇ ಕೊಂಚ ಮೇಕಪ್​​ ಮಾಡಿಕೊಂಡು ನಟನೆ ಮಾಡಿದ್ದೇನೆ ಎಂದರು.

ನನ್ನ ವೈಯಕ್ತಿಕ ಜೀವನವನ್ನು ವೃತ್ತಿಪರ ಜೀವನಕ್ಕೆ ತರಲು ನನಗೆ ಇಷ್ಟವಿಲ್ಲ. ಅದೇ ಬೇರೆ, ಇದೇ ಬೇರೆಯಾಗಿದೆ. ನನ್ನ ಇತಿಮಿತಿಗಳಲ್ಲೇ ನಟನೆ ಮಾಡುತ್ತಿದ್ದೇನೆ. ಜನರು ನೂರಾರು ಮಾತನಾಡಿಕೊಳ್ಳುತ್ತಾರೆ. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಒಳ್ಳೆ ಪಾತ್ರ ಕೊಟ್ಟರೆ, ಎಷ್ಟೇ ಕಷ್ಟವಾಗಲಿ ಅದನ್ನು ಮಾಡುತ್ತೇನೆ. ರಕ್ಷಿತ್​​ ಶೆಟ್ಟಿ ಜತೆ ಅವಕಾಶ ಸಿಕ್ಕರೆ ಸಿನಿಮಾ ಮಾಡಲು ಸಿದ್ಧಳಾಗಿದ್ದೇನೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *