More

    ಮಂಗಳೂರಿನ ಬಾಂಬ್ ಪ್ರಹಸನದಿಂದ ದಾವೋಸ್ ಹೂಡಿಕೆದಾರರಿಗೆ ಹೋದ ಸಂದೇಶವೇನು?: ಎಚ್​ಡಿಕೆ ಪ್ರಶ್ನೆ

    ಬೆಂಗಳೂರು: ಮಂಗಳೂರಿನ ಬಾಂಬ್ ಪ್ರಹಸನದಿಂದ ದಾವೋಸ್​ನಲ್ಲಿ ಹೂಡಿಕೆದಾರರಿಗೆ ಮುಖ್ಯಮಂತ್ರಿ ಯಾವ ಸಂದೇಶ ನೀಡಲು ಸಾಧ್ಯ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿ ದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ದೇಶದ ಇತರೆಡೆ ಗಲಭೆ ಆದರೂ ರಾಜ್ಯದಲ್ಲಿ ಅದಕ್ಕೆ ಅವಕಾಶ ನೀಡದ ಹಾಗೆ ಆಡಳಿತ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಬಿಜೆಪಿ ಆಡಳಿತ ಇದ್ದಾಗ ಗಲಭೆಗಳು ನಡೆಯುತ್ತಿವೆ. ಅದರಲ್ಲೂ ಬಿಜೆಪಿ ಶಕ್ತಿಯುತವಾದ ನಂತರ ಹೆಚ್ಚಾಗುವುದು ನೋಡಿದರೆ ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ದೂರಿದರು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಚರ್ಚ್​ಗಳ ಮೇಲೆ ದಾಳಿಯಾದವು. ಈಗ ಇಂತಹ ಘಟನೆ ನಡೆಯುತ್ತಿವೆ. ಜಾತಿ, ಧರ್ಮ ಬಳಸಿಕೊಂಡು ರಾಜಕೀಯ ಮಾಡುತ್ತಿರುವವರು ಬಿಜೆಪಿಯವರು ಎಂದರು.

    ನಾಟಕವೇ?: ಆದಿತ್ಯ ರಾವ್ ಶರಣಾಗತಿ ಸಹ ನಾಟಕದ ರೀತಿಯೇ ಕಾಣುತ್ತಿದೆ. ಡಿಜಿ ಕಚೇರಿಗೆ ಬಂದಿದ್ದು ಏಕೆ? ಅವನು ಶರಣಾಗಲು ಬರುತ್ತಾನೆ ಅಂತ ಡಿಜಿಗೆ ಮಾಹಿತಿ ನೀಡಿದವರು ಯಾರು? ನಾನಿದನ್ನು ಪ್ರಧಾನಿ, ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಈಗಲೂ ಬಾಂಬ್ ಪ್ರಕರಣವನ್ನು ಅಣಕು ಪ್ರದರ್ಶನ ಅಂತಲೇ ಕರೆಯುತ್ತೇನೆ. ಮಾದ್ಯಮಗಳ ವರದಿ ಆಧರಿಸಿ ಪಟಾಕಿಯ ಪ್ರಕರಣ ಅಂತಲೇ ಹೇಳುತ್ತೇನೆ. ವಿಎಚ್​ಪಿಯವರು ಮಾಡಿಸಿದ್ದಾರೆ ಅಂತ ನಾನು ಅವರಂತೆ ಹೇಳುವುದಿಲ್ಲ ಎಂದರು.

    ಸಿನಿಮಾಗೆ ಹೋಲಿಕೆ

    ಮಂಗಳೂರಿನ ಘಟನೆಯನ್ನು ಸಿನಿಮಾವೊಂದರ ಸನ್ನಿವೇಶಕ್ಕೆ ಹೋಲಿಕೆ ಮಾಡಿ ಎಚ್​ಡಿಕೆ ಲೇವಡಿ ಮಾಡಿದರು. ಪಾತ್ರಧಾರಿಯೊಬ್ಬರು (ದಿನೇಶ್) ಕುಂಬಳಕಾಯಿ ಕೊಳ್ಳಲು ಹೋದಾಗ, ಅವನಿಗೆ ಕುಂಬಳಕಾಯಿ ಸಿಗೊದಿಲ್ಲ, ಆಗ ಆತ ಕುಂಬಳಕಾಯಿಯಲ್ಲಿ ಬಾಂಬ್​ಉಂಟು ಎನ್ನುತ್ತಾನೆ. ಆಗ ಜನರೆಲ್ಲ ಹೆದರಿ ಓಡಿ ಹೋಗುತ್ತಾರೆ. ಆತ ಕುಂಬಳಕಾಯಿ ತೆಗೆದುಕೊಂಡು ಹೋಗ್ತಾನೆ. ಮಂಗಳೂರು ಘಟನೆಯೂ ಇಂತಹದ್ದೇ ಆಗಿದೆ ಎಂದರು.

    ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಹೇಳಿಕೆಗಳು ಕುಮಾರಸ್ವಾಮಿ ಅವರಿಗೆ ಶೋಭೆ ತರುವಂಥದ್ದಲ್ಲ. ಈಗ ಇರುವ ಪೊಲೀಸರು ಅವರು ಸಿಎಂ ಆಗಿದ್ದ ಕಾಲದಲ್ಲೂ ಇದ್ದರು. ಬಾಂಬ್ ಇಟ್ಟವರು ಯಾವುದೇ ಧರ್ಮದವರಾಗಿದ್ದರೂ ಅವರು ಭಯೋತ್ಪಾದಕರೇ. ಅದಕ್ಕೆ ಪೊಲೀಸರ ಮೇಲೆ ಗೂಬೆ ಕೂರಿಸುವುದು ಅಕ್ಷ್ಯಮ್ಯ ಅಪರಾಧ.

    | ಆರ್.ಅಶೋಕ್ ಸಚಿವ

    ಕುಮಾರಸ್ವಾಮಿ ಒಂದು ಸಮುದಾಯ ಮೆಚ್ಚಿಸಲು ಪೊಲೀಸರ ಕಾರ್ಯವೈಖರಿ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಬಗ್ಗೆ ಅನುಮಾನ ವ್ಯಕ್ತಪಡಿಸುವುದಾದರೆ ನಾವು ಎಲ್ಲಿಗೆ ಬಂದು ನಿಂತಿದ್ದೇವೆ ಎಂಬುದನ್ನು ಯೋಚಿಸಬೇಕಾಗುತ್ತದೆ.

    | ಕೆ.ಎಸ್.ಈಶ್ವರಪ್ಪ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts