ರಾಜ್ಯದಲ್ಲಿ ಕರೊನಾ ಸಕ್ರಿಯ ಪ್ರಕರಣಗಳೆಷ್ಟು ಗೊತ್ತೇ? ಈ ಅಂಕಿ-ಅಂಶ ನೋಡಿದರೆ ನೀವಾಗಬಹುದು ನಿರಾಳ..

blank

ಬೆಂಗಳೂರು: ಒಂದು ಸಮಯದಲ್ಲಿ ‘ಕರೊನಾ ಬಂದರೆ ಮುಗಿಯಿತು, ಸತ್ತೇ ಹೋಗುತ್ತಾರೇನೋ..’ ಎಂಬಷ್ಟರಮಟ್ಟಿಗೆ ಜನಾಭಿಪ್ರಾಯವಿತ್ತು. ಆ ಬಳಿಕ ಕರೊನಾ ಎಂದರೆ ಸಾಮಾನ್ಯ ಶೀತ-ಜ್ವರ ಎಂಬಂತೆ ಹಲವರು ನೋಡಲಾರಂಭಿಸಿದರೂ, ಅದಕ್ಕೆ ಅಪವಾದ ಎನ್ನುವಂತೆ ಒಂದಷ್ಟು ಮಂದಿ ಮೃತಪಟ್ಟಿದ್ದು, ಒಂದೇ ಮನೆಯ ಹಲವರು ಕರೊನಾಗೆ ಬಲಿಯಾಗಿದ್ದು ಕೂಡ ನಡೆದಿದೆ. ಆದರೆ ರಾಜ್ಯದ ಇಂದಿನ ಕರೊನಾ ಬುಲೆಟಿನ್ ಒಂದಷ್ಟು ನಿರಾಳತೆ ಮೂಡಿಸುವಂತಿದೆ.

ಏಕೆಂದರೆ ಇದುವರೆಗೆ ಸೋಂಕಿತರಾಗಿರುವ ಒಟ್ಟು ಪ್ರಕರಣಗಳ ಪೈಕಿ ಬಹುತೇಕರು ಸೋಂಕುಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಇವತ್ತಿನ ಬುಲೆಟಿನ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3,604 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ, ಅದೇ ಅವಧಿಯಲ್ಲಿ ಅದಕ್ಕಿಂತಲೂ ದುಪ್ಪಟ್ಟು ಎಂದರೆ 7,699 ಮಂದಿ ಸೋಂಕುಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.

ಇದನ್ನೂ ಓದಿ: ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

ರಾಜ್ಯದಲ್ಲಿ ಮೊದಲ ಪ್ರಕರಣ ಪತ್ತೆಯಾದ ದಿನದಿಂದ ಎಂದರೆ 2020ರ ಮಾರ್ಚ್ 8ರಿಂದ ಲೆಕ್ಕ ಹಾಕಿದರೆ ಇದುವರೆಗೆ ಕರ್ನಾಟಕದಲ್ಲಿ 28,34,630 ಮಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಆ ಪೈಕಿ 26,98,822 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೀ 1,01,042 ಇದೆ. ಬೇಸರದ ಸಂಗತಿ ಎಂದರೆ ಇದುವರೆಗೆ ರಾಜ್ಯದಲ್ಲಿ 34,743 ಮಂದಿ ಕರೊನಾಗೆ ಬಲಿಯಾಗಿದ್ದು, ಕಳೆದ 24 ಗಂಟೆಗಳಲ್ಲೇ 89 ಮಂದಿ ಕೋವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ. 2.18ಕ್ಕೆ ಇಳಿದಿದೆ.

ನೀವು ಈ ಬ್ಯಾಂಕ್​ ಖಾತೆದಾರರಾಗಿದ್ದರೆ ಇತ್ತ ಸ್ವಲ್ಪ ಗಮನಹರಿಸಿ; ಐಎಫ್​ಎಸ್​ಸಿ ಬದಲಾಗಿದೆ ಗಮನಿಸಿ..

ಒಬ್ಬನಿಗೆ ಅಪ್ಪ-ಅಮ್ಮನ ಬಗ್ಗೆ ಪ್ರೀತಿ, ಇನ್ನೊಬ್ಬನಿಗೆ ದ್ವೇಷ; ಇಬ್ಬರೂ ಸೇರಿ ಮಾಡಿದ್ರು ಬ್ಯಾಂಕ್ ಲೂಟಿ!

ಹತ್ತು ಸಾವಿರ ಪಾರಿವಾಳಗಳು ನಾಪತ್ತೆ!; ಕಾರಣವಿನ್ನೂ ನಿಗೂಢ..

ತಮ್ಮನ ಮದ್ವೆಗಾಗಿ 2 ದಿನ ರಜೆ ತೆಗೆದುಕೊಳ್ಳಲಿಕ್ಕೂ ಪತ್ರ ಬರೆದು ಕೋರಿಕೊಂಡ ಗ್ರಾಮ ಪಂಚಾಯತ್ ಸದಸ್ಯ!

ಈ ರೋಗ ಮಕ್ಕಳಲ್ಲಿ ಕಂಡುಬಂದಿರುವುದು ಇದೇ ಮೊದಲು!; ಇದರಲ್ಲಿ ಶೇ. 60ರಷ್ಟಿದೆ ಸಾವಿನ ಸಾಧ್ಯತೆ!

Share This Article

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Liver Health: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು…