More

    ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಏನಿದು ಟಿಸಿವಿ?

    ಥ್ರೆಟ್ ಕಂಟೈನ್​ವೆುಂಟ್ ವೆಸೆಲ್-ಟಿಸಿವಿ ಎನ್ನುವುದು ಅತ್ಯಾಧುನಿಕ ಸ್ಪೋಟಕ ಸಾಗಾಟ ವಾಹನ. ಯಾವುದೇ ಸ್ಪೋಟಕ ಪತ್ತೆಯಾದಾಗ ಅದನ್ನು ಈ ಕಾಂಕ್ರೀಟ್ ಮಿಕ್ಸರ್ ಮಾದರಿ ಚೇಂಬರ್ ಒಳಗೆ ಇರಿಸಲಾಗುತ್ತದೆ.

    ಇದರಲ್ಲಿ ಫ್ರೀಜರ್ ಮಾದರಿಯಲ್ಲಿ ಕಡಿಮೆ ತಾಪಮಾನದಲ್ಲಿ ಸ್ಪೋಟಕಗಳನ್ನು ಇರಿಸಬಹುದು, ಸಾಗಿಸಬಹುದು. ಮಂಗಳೂರು ವಿಮಾನ ನಿಲ್ದಾಣದಲ್ಲೂ ಈ ಟಿಸಿವಿ ಇದ್ದು, ಅದನ್ನು ಮೊದಲ ಬಾರಿಗೆ ಬಳಸಲಾಗಿದೆ. ಈ ಚೇಂಬರ್ ಒಳಗೆ ಸ್ಪೋಟಕ ಸ್ಪೋಟವಾದರೂ ಯಾವುದೇ ಅಪಾಯ ಸಂಭವಿಸದು.

    ಜ್ಯಾಕ್​ನ ಕಮಾಲ್

    ಸಿಐಎಸ್​ಎಫ್ ಸಿಬ್ಬಂದಿ ವಿಮಾನ ನಿಲ್ದಾಣದ ಭದ್ರತೆಗೆ ಶ್ವಾನದಳವನ್ನೂ ಹೊಂದಿದ್ದಾರೆ. ಸೋಮವಾರ ಅನುಮಾನಾಸ್ಪದ ಬ್ಯಾಗ್ ಪತ್ತೆಯಾದಾಗ ಅದರಲ್ಲಿ ಸ್ಪೋಟಕವನ್ನು ಗುರುತಿಸಲು ಸಿಐಎಸ್​ಎಫ್​ನ ಜ್ಯಾಕ್ ಎನ್ನುವ ನಾಯಿಯನ್ನೂ ಕರೆತರಲಾಗಿದ್ದು ಅದು ತಕ್ಷಣವೇ ಸ್ಪೋಟಕ ಗುರುತಿಸಿದೆ, ಹಾಗಾಗಿ ಅದನ್ನು ತಕ್ಷಣವೇ ಅಲ್ಲಿಂದ ಸಾಗಿಸುವ ಮೂಲಕ ಯಾವುದೇ ಅನಾಹುತ ಸಂಭವಿಸುವುದನ್ನು ತಪ್ಪಿಸುವಲ್ಲಿ ಜ್ಯಾಕ್ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts