ಪ್ರೇಮ ಎಂದರೆ ಏನು, ನಾವೇಕೆ ಅದರಲ್ಲಿ ಬೀಳುತ್ತೇವೆ?

Art of Living

ನಾವು ಆಲೋಚಿಸಲು ಸಾಧ್ಯವಾಗದ ಒಂದು ವಿಷಯವೆಂದರೆ ಪ್ರೇಮ. ಆಲೋಚಿಸಬಹುದಾದರೆ ಅದು ಪ್ರೇಮವಾಗುವುದಿಲ್ಲ. ಆಲೋಚಿಸುವುದು ನಿಂತಾಗ ಪ್ರೇಮದ ಆರಂಭವಾಗುತ್ತದೆ. ಪ್ರೇಮಿಗಳು Art of Livingಆಲೋಚಿಸುವುದಿಲ್ಲವಾದ್ದರಿಂದ ಹೇಳಿದ್ದನ್ನೇ ಮತ್ತೆ ಮತ್ತೆ ಸಾವಿರಸಲ ಹೇಳುತ್ತಿರುತ್ತಾರೆ. ಆಲೋಚಿಸುವ ವ್ಯಕ್ತಿ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದಿಲ್ಲ. ನಾವು ಯಾರನ್ನೇ ಪ್ರೀತಿಸಿದರೂ, ನಿಜವಾಗಿಯೂ ನಾವು ಪ್ರೀತಿಸುತ್ತಿರುವುದು ನಮ್ಮನ್ನೆ. ಈ ಸತ್ಯವನ್ನು ನಾವು ಅರಿತುಕೊಳ್ಳುವುದಿಲ್ಲ. ಸದಾ ನಾಮ ಮತ್ತು ರೂಪದಲ್ಲೇ ಸಿಲುಕಿರುವುದರಿಂದ ನಮಗೆ ಈ ಸತ್ಯದ ಅರಿವಾಗುವುದಿಲ್ಲ. ಪ್ರೇಮವು ನಿರಾಕಾರ. ನಾಮ ಮತ್ತು ರೂಪದಿಂದ ಇದನ್ನು ಆರಂಭಿಸಬಹುದು. ನಿಮ್ಮಲ್ಲಿರುವ ಪ್ರೇಮದ ಕಿಡಿಯನ್ನು ಇದು ಉದ್ದೀಪಿಸಬಹುದು. ಈ ಪ್ರೇಮವು ಕ್ರಮೇಣವಾಗಿ ನಾಮ ರೂಪಗಳಿಗಿಂತಲೂ ಅತೀತವಾಗಿರುವ ನಿಮ್ಮದೇ ಸ್ವಭಾವದೆಡೆಗೆ ಕರೆದೊಯ್ಯುತ್ತದೆ. ನಿಮ್ಮ ಸ್ವಭಾವ ಶುದ್ಧ ಚೈತನ್ಯ, ಶುದ್ಧ ಶಕ್ತಿ.

ಶರಣಾಗತಿ ಮತ್ತು ಪ್ರೇಮ ಪರ್ಯಾಯ ವಾಚಕಗಳು. ನೀವು ಯಾರನ್ನೇ ಪ್ರೀತಿಸಿದರೂ ಅವರಿಗೆ ಶರಣಾಗುತ್ತೀರಿ. ಶರಣಾಗತಿ ಎಂದರೆ ನವಿರಾಗಿರುವ, ಮೃದುವಾಗಿರುವ ನಿಮ್ಮ ಚೇತನ. ಶರಣಾಗತಿ ಒಂದು ಕೃತ್ಯವಲ್ಲ, ಅಸ್ತಿತ್ವದ ಒಂದು ಸ್ಥಿತಿ. ಮನಸ್ಸು ಸಂಶಯಗಳಿಂದ, ಆಶಾಭಂಗದಿಂದ, ಹೋರಾಟಗಳಿಂದ ಮುಕ್ತವಾದಾಗ ಚೈತನ್ಯದ ನವಿರಾದ, ಮೃದುವಾದ ಸ್ಥಿತಿ ಉಂಟಾಗುತ್ತದೆ. ಆಗ ನೀವು ಶರಣಾಗಿರುತ್ತೀರಿ. ಈ ಸ್ಥಿತಿಯನ್ನು ಹೇಗೆ ಪಡೆಯಲು ಸಾಧ್ಯ? ನಿಮ್ಮ ಸಾಧನೆ ಸಹಾಯಕವಾಗುತ್ತದೆ, ಸ್ವಲ್ಪ ಬೌದ್ಧಿಕ ತಿಳಿವಳಿಕೆ- ಇದರಿಂದ ಸಿದ್ಧಾಂತಗಳನ್ನು, ಪೂರ್ವ ಭಾವಿತವಾದ ಆಲೋಚನೆಗಳನ್ನು, ಪ್ರತಿರೋಧಗಳನ್ನು ಬಿಡಲು ಸಾಧ್ಯವಾಗುತ್ತದೆ.

ಅನಂತವನ್ನು ಹೇಗೆ ಅನುಭವಿಸುವುದು? ಪ್ರೇಮದಿಂದ ಮಾತ್ರ. ಗುರುಗಳ ಕಣ್ಣಲ್ಲಿ ಮಗುವು ಪ್ರೇಮವನ್ನು ಕಂಡಾಗ ಮಗುವಿಗೆ ಅದರ ಕಂಪನಗಳು ಭಾಸವಾಗುತ್ತಿದ್ದವು. ಅಷ್ಟು ಸುಂದರವಾದ ಅನುಭವವನ್ನು ಮಗುವು ತನ್ನ ಅಂತರಾಳದೊಳಗೆ ಅನುಭವಿಸುತ್ತಿತ್ತು. ಆ ಮಗುವಿಗೆ ದೇಹ, ಮನಸ್ಸಿನ ಭಾವ ಕರಗಿ ಹೋಗಿ ಅತಿ ನವಿರಾದ ಭಾವನೆ ಅಂತರಾಳದಿಂದ ಉಕ್ಕುತ್ತಿತ್ತು. ಆಗ ಗುರುಗಳು, ‘ನೀನೇನನ್ನು ಅನುಭವಿಸುತ್ತಿರುವೆಯೋ ಅದೇ ನೀನು. ತತ್ವಮಸಿ; ನೀನೇ ಆ ಪ್ರೇಮ’ ಎಂದು ಉಪದೇಶಿಸುತ್ತಿದ್ದರು. ಈ ಜ್ಞಾನವನ್ನು ಪಡೆದುಕೊಂಡ ವಿದ್ಯಾರ್ಥಿಯ ಜೀವನ ಅಷ್ಟು ಸುಭದ್ರವಾಗಿ ನೆಲೆನಿಲ್ಲುತಿತ್ತು. ಈ ಜಗತ್ತಿನ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳು ಅನುಭವಿಸಿದರೂ, ಆ ಪ್ರೇಮವು ಮಾತ್ರ ದೃಢವಾಗಿ ನಿಲ್ಲುತ್ತದೆ. ನೀನು ಯಾರು? ನೀನು ಅದು. ನೀನು ಪ್ರೇಮದ ಕೋಮಲವಾದ ಸಾರ. ಆ ಪ್ರೇಮಕ್ಕಾಗಿ ಇಡೀ ಜೀವನದಲ್ಲಿ ಹುಡುಕಾಟ ಮಾಡುತ್ತಿರುವೆ ಎಂಬ ಅರಿವನ್ನು ಗುರುಗಳು ವಿದ್ಯಾರ್ಥಿಯಲ್ಲಿ ಮೂಡಿಸುತ್ತಿದ್ದರು.

ಪ್ರೇಮದ ಅಡ್ಡಿಯೆಂದರೆ, ಕಾಮ ಮತ್ತು ಮೋಹ, ಭ್ರಮೆ. ಪ್ರೇಮವೆಂದರೆ ಸಮೀಪವಾಗುವುದು, ಲಯವಾಗುವುದು. ಆದರೆ ಅನೇಕ ಜನ್ಮಗಳಿಂದ ಲಯವಾಗುವುದರ ಒಂದೇ ರೀತಿಯ ಅನುಭವವನ್ನು ಪಡೆದಿದ್ದೇವೆ, ಅದೇ ಕಾಮ. ಕೇವಲ ಕಾಮದಲ್ಲಿ ಜನರು ಲಯವಾಗುತ್ತಾರೆ. ನಾವು ಪಡೆದಿರುವ ಎಲ್ಲಾ ಜನ್ಮಗಳಲ್ಲೂ ಇದನ್ನು ಅನುಭವಿಸಿದ್ದೇವೆ. ಆದರೆ ಮಾನವತೆಯು ನಿರಂತರವಾಗಿ ಕಾಮದ ವಿರುದ್ಧ ಸೆಣಸಾಡುತ್ತಲೇ ಇದೆ. ಅನುಭವದಿಂದ, ಕಾಮವು ಒಬ್ಬರನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ ಎಂದು ಅಂತರಾಳದಲ್ಲಿ ನಮಗೆ ತಿಳಿದಿದೆ. ಪ್ರೇಮವು ಇದರಲ್ಲೆಲ್ಲೊ ಕಳೆದು ಹೋಗಿರುತ್ತದೆ. ಆದ್ದರಿಂದ ಮಾನವ ಕಾಮವನ್ನು ದಾಟಿ ಬರುವ ಯತ್ನದಲ್ಲೇ ಇರುತ್ತಾನೆ. ಆದರೆ ಕಾಮದೊಡನೆ ಸೆಣಸಾಡಿದಷ್ಟೂ, ಕಾಮವನ್ನು ಜಯಿಸಲು ಅಸಾಧ್ಯವಾಗುತ್ತದೆ. ನೀವು ಯಾರೊಡನೆಯಾದರೂ ಕಾದಾಡಿ ಜಗಳವಾಡಿದ್ದರೆ, ನಿಮ್ಮನ್ನು ಮೆಚ್ಚಿ ನಿಮಗೆ ಸನ್ಮಾನ ನೀಡಿದವರಿಗಿಂತಲೂ ಹೆಚ್ಚಾಗಿ, ಜಗಳವಾಡಿದವರೇ ಮನಸ್ಸಿನಲ್ಲಿ ಉಳಿಯುತ್ತಾರಲ್ಲ, ಹಾಗೆ.

ಕಾಮವೆಂದರೆ, ಅದರಲ್ಲಿ ಎಲ್ಲಾ ಬಯಕೆಗಳೂ ಒಳಗೊಂಡಿವೆ. ಒಂದು ಬಯಕೆ ಎದ್ದಾಗ ಅದನ್ನು ಗುರುತಿಸಿ, ಸನ್ಮಾನಿಸಿ, ಆ ಬಯಕೆಯನ್ನು ಅರ್ಪಿಸಿಬಿಡಿ. ಇಚ್ಛಾ ಶಕ್ತಿ-ನಮ್ಮಲ್ಲೇಳುವ ಬಯಕೆಯು; ಉಮಾಕುಮಾರಿ- ದೈವೀಕವಾದದ್ದು ಎನ್ನುತ್ತದೆ ಶಿವಸೂತ್ರಗಳು. ಜ್ಞಾನ ಶಕ್ತಿಯೂ ದೈವೀಶಕ್ತಿಯೆ. ಕ್ರಿಯಾಶಕ್ತಿ-ಕ್ರಿಯಾಶೀಲವಾಗಿಸುವ ಶಕ್ತಿಯೂ ದೈವೀಕವಾದದ್ದು. ಈ ಮೂರು ಶಕ್ತಿಗಳು- ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾಶಕ್ತಿ ನಿಮ್ಮ ಜೀವನವನ್ನು ಆಳುತ್ತವೆ. ಆದ್ದರಿಂದ ಈ ಮೂರು ಸೂಕ್ಷ್ಮಶಕ್ತಿಗಳನ್ನು, ಜಗನ್ಮಾತೆಯ ಮೂರು ಪ್ರಕಟನೆಗಳು ಎನ್ನುತ್ತಾರೆ.

ನಿಮ್ಮಲ್ಲಿ ಒಂದು ಬಯಕೆ ಮತ್ತು ಹೇಗೆ ಕ್ರಿಯಾಶೀಲವಾಗ ಬೇಕು, ಅದರ ಲಾಭ ನಷ್ಟ ಏನೆಂಬ ಜ್ಞಾನವೂ ನಿಮ್ಮ ಬಳಿ ಇರುತ್ತದೆ. ಜ್ಞಾನ, ಬಯಕೆ ಇದ್ದೂ ಅದರಂತೆ ಕಾರ್ಯಪ್ರವೃತ್ತರಾಗಲು ನಿಮ್ಮಿಂದ ಸಾಧ್ಯವಾಗದಿದ್ದರೆ, ನಿಮ್ಮ ಬಳಿ ಕ್ರಿಯಾಶಕ್ತಿಯ ಅಭಾವವಿದೆಯೆಂದಾಯಿತು. ಆದ್ದರಿಂದ ಈ ಮೂರು ಶಕ್ತಿಗಳು ನಿಮ್ಮ ಮನಸ್ಸನ್ನು, ನಿಮ್ಮ ಅಸ್ತಿತ್ವವನ್ನು ಉಂಟು ಮಾಡುತ್ತವೆ. ಈ ಬಯಕೆಗಳನ್ನು ಗುರುತಿಸಿ ಸನ್ಮಾನಿಸಿದಾಗ ಕಾಮನೆಗಳಿಂದ ದೂರವಿರುತ್ತೀರಿ, ಲೋಭ, ಅಹಂಕಾರ ಮತ್ತು ಎಲ್ಲಾ ದುರ್ಗಣಗಳಿಂದಲೂ ಸಹಜವಾದ ರೀತಿಯಲ್ಲಿ ದೂರವಿರುತ್ತೀರಿ.

(ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು)

(ಪ್ರತಿಕ್ರಿಯಿಸಿ:[email protected])

ನಿಮ್ಮ ಅಂಗೈನಲ್ಲಿ M ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Palmistry

Share This Article

ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ…

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…