More

    ಈ ದೇಶವಾಸಿಗಳೆಲ್ಲರೂ ಹಿಂದುಗಳು ಮತ್ತು ನಮ್ಮ ಜೀವನ ಪದ್ಧತಿ ಹಿಂದುತ್ವ ಎಂದು ಆರೆಸ್ಸೆಸ್​ ಕಾರ್ಯಕರ್ತರು ಹೇಳುವುದೇಕೆ?: ವಿವರಿಸಿದ್ದಾರೆ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್

    ಲಖನೌ: ನಮ್ಮ ದೇಶದ 130 ಕೋಟಿಗೂ ಅಧಿಕ ಜನರು ಎಲ್ಲರೂ ಹಿಂದುಗಳು. ಈ ದೇಶ ಹಿಂದುಗಳದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಯಾಕೆ ಹೇಳುತ್ತಾರೆ? ಅವರ ಈ ಮಾತು ಒಂದು ಭಾಷೆಗೋ ಅಥವಾ ಒಂದು ಧರ್ಮಕ್ಕೋ ಸೇರಿದ್ದಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಡಾ.ಮೋಹನ ಭಾಗವತ್ ಹೇಳಿದ್ದಾರೆ.

    ಅವರು ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾವು ಭಾವನಾತ್ಮಕವಾಗಿ ಒಗ್ಗಟ್ಟಿನಿಂದ ಇರಬೇಕು ಎಂಬುದನ್ನು ನಮ್ಮ ಸಂವಿಧಾನ ಹೇಳುತ್ತದೆ. ಹಾಗಾದರೆ ಭಾವನೆ ಯಾವುದು? ಈ ದೇಶ ನಮಗೆ ಸೇರಿದ್ದು, ನಮ್ಮ ಹಿರೀಕರ, ಪೂರ್ವಜರ ಬಳುವಳಿ ಇದು. ನಮ್ಮ ವಿಭಿನ್ನತೆಯ ಹೊರತಾಗಿಯೂ ನಾವು ಒಟ್ಟಾಗಿ ಬಾಳುತ್ತಿದ್ದೇವೆ. ಇದನ್ನೇ ನಾವು ಹಿಂದುತ್ವ ಎಂದು ಹೇಳುವುದು ಎಂದು ಭಾಗವತ್ ವಿವರಿಸಿದರು.

    ದೇಶದ ಜನರೆಲ್ಲ ಹಿಂದೂಗಳು, ನಮ್ಮದು ಹಿಂದುತ್ವ ಎಂದು ಆರೆಸ್ಸೆಸ್ ಕಾರ್ಯಕರ್ತರು ಹೇಳುವುದು ಇದೇ ಅರ್ಥದಲ್ಲಿ ಹೊರತು, ಅದು ಯಾವುದೋ ಒಂದು ಭಾಷೆ, ಒಂದು ಧರ್ಮ ಅಥವಾ ಒಂದು ಜಾತಿಗೆ ಸೀಮಿತವಾದುದಲ್ಲ. ನಮಗೆ ಸಂವಿಧಾನದ ಹೊರತಾಗಿ ಯಾವುದೇ ಶಕ್ತಿ ಕೇಂದ್ರದ ಅಗತ್ಯವಿಲ್ಲ. ನಮಗೆ ಅದರಲ್ಲಿ ನಂಬಿಕೆಯೂ ಇಲ್ಲ ಎಂದು ಭಾಗವತ್ ಅವರು ವಿವರಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts