ಪ್ರಸ್ತುತ ಅನೇಕ ಜನರು ತೀವ್ರ ಒತ್ತಡ ಮತ್ತು ಕಂಪ್ಯೂಟರ್ ಮುಂದೆ ಅತಿ ಹೆಚ್ಚು ಕೆಲಸದ ಸಮಯದಿಂದಾಗಿ ಫೈಬ್ರೊಮ್ಯಾಲ್ಗಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಾರ್ಪೋರೇಟ್ ಉದ್ಯೋಗಿಗಳಲ್ಲೇ ಈ ಸಮಸ್ಯೆ ಹೆಚ್ಚು. ಇದೊಂದು ಸಾಮಾನ್ಯ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಫೈಬ್ರೊಮ್ಯಾಲ್ಗಿಯಾದಿಂದಾಗಿ ಅನೇಕ ಜನರು ಸ್ನಾಯುಗಳು, ಕೀಲುಗಳು ಮತ್ತು ದೇಹದ ವಿವಿಧ ಭಾಗಗಳಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಆಯಾಸ ಮತ್ತು ಸೋಮಾರಿತನ ಆವರಿಸಿಕೊಳ್ಳುತ್ತಿದೆ. ನೀವೇನಾದರೂ ಆಗಾಗ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ದೈನಂದಿನ ಚಟುವಟಿಕೆಗಳು ನಿಮಗೆ ಕಷ್ಟಕರವಾಗುವ ಸಾಧ್ಯತೆಗಳಿವೆ.
ಫೈಬ್ರೊಮ್ಯಾಲ್ಗಿಯಾ ಪೀಡಿತರು ನಡೆಯಲು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಕೇವಲ 15 ಹೆಜ್ಜೆ ಇಟ್ಟ ನಂತರ ಅವರು ಸುಸ್ತಾಗುತ್ತಾರೆ. ಇದಲ್ಲದೆ, ತೂಕವನ್ನು ಎತ್ತುವ ಸಮಯದಲ್ಲಿ ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆಗಳಿವೆ. ಕೆಲವರಲ್ಲಿ ನಿದ್ರೆಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಈ ಸಮಸ್ಯೆಯ ಮುಖ್ಯ ಕಾರಣಗಳು ಯಾವುವು? ಈ ರೋಗವನ್ನು ಕಡಿಮೆ ಮಾಡುವುದು ಹೇಗೆ ಎಂದ ನಾವೀಗ ತಿಳಿಯೋಣ.
ಫೈಬ್ರೊಮ್ಯಾಲ್ಗಿಯಾ ಮುಖ್ಯ ಕಾರಣಗಳು
ಕೆಲಸದ ಒತ್ತಡ: ಕಾರ್ಪೊರೇಟ್ ಕಚೇರಿಗಳಲ್ಲಿ ಕೆಲಸದ ಒತ್ತಡ ಸಾಮಾನ್ಯವಾಗಿದೆ. ಹೇಳಿದ ಸಮಯಕ್ಕೆ ಕೆಲಸ ಮುಗಿಸಬೇಕಾದ್ದರಿಂದ ಒತ್ತಡ ಸಹಜವಾಗಿಯೇ ಇರುತ್ತದೆ. ಇದರಿಂದ ಅನೇಕರಿಗೆ ಫೈಬ್ರೊಮ್ಯಾಲ್ಗಿಯಾ ಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ದೀರ್ಘ ಸಮಯ ಕುಳಿತುಕೊಳ್ಳುವುದು: ಕಾರ್ಪೊರೇಟ್ ಕಚೇರಿಗಳಲ್ಲಿ ಹೆಚ್ಚಿನ ಕೆಲಸದ ಕಾರಣ, ಜನರು ಸಾಕಷ್ಟು ಸಮಯ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಅನೇಕ ಜನರು ಕೆಳ ಬೆನ್ನು ನೋವು ಮತ್ತು ಸ್ನಾಯು ನೋವುಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಗಳು ಫೈಬ್ರೊಮ್ಯಾಲ್ಗಿಯಾ ಕಾಯಿಲೆಗೆ ಕಾರಣವಾಗಬಹುದು.
ಅನಾರೋಗ್ಯಕರ ಆಹಾರ ಸೇವನೆ: ಆಧುನಿಕ ಜೀವನ ಶೈಲಿಯಿಂದಾಗಿ ಅನಾರೋಗ್ಯಕರ ಆಹಾರ ಸೇವನೆ ಹವ್ಯಾಸವಾಗಿ ಮಾರ್ಪಟ್ಟಿದೆ. ಯಾವುದೇ ವ್ಯತ್ಯಾಸವಿಲ್ಲದೇ ಎಲ್ಲರೂ ಸ್ಟ್ರೀಟ್ ಫುಡ್ ಹಾಗೂ ಕುರುಕಲು ತಿನಿಸುಗಳನ್ನು ಸೇವಿಸುವುದನ್ನು ರೂಢಿಸಿಕೊಂಡಿದ್ದಾರೆ. ಈ ರೀತಿಯ ಆಹಾರವನ್ನು ಪ್ರತಿದಿನ ಸೇವಿಸುವುದರಿಂದ ಫೈಬ್ರೊಮ್ಯಾಲ್ಗಿಯಾ ಸಾಧ್ಯತೆಯೂ ಹೆಚ್ಚಾಗುತ್ತದೆ.
ಮಾನಸಿಕ ಒತ್ತಡ: ಕಾರ್ಪೊರೇಟ್ ಕಚೇರಿಗಳಲ್ಲಿ ಹಲವು ಗಂಟೆಗಳ ಕಾಲ ಕೆಲಸ ಮಾಡಿದರೂ ಕೆಲವೊಮ್ಮೆ ಯೋಜನೆಗಳು ಪೂರ್ಣಗೊಳ್ಳುವುದಿಲ್ಲ. ಇದೇ ಕಾರಣದಿಂದಾಗಿ ಅನೇಕ ಜನರು ಮಾನಸಿಕವಾಗಿ ಬಳಲುತ್ತಿದ್ದಾರೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡದಿಂದಾಗಿ ಅನೇಕ ಜನರು ಫೈಬ್ರೊಮ್ಯಾಲ್ಗಿಯಾಕ್ಕೆ ಗುರಿಯಾಗುತ್ತಾರೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. (ಏಜೆನ್ಸೀಸ್)
ಏಷ್ಯಾಕಪ್ ಫೈನಲ್ಗೆ ಅಕ್ಷರ್ ಪಟೇಲ್ ಗೈರು, ವಾಷಿಂಗ್ಟನ್ ಸುಂದರ್ಗೆ ತುರ್ತು ಕರೆ!