ಹಂದಿಗನೂರ ಗ್ರಾಪಂ ತನಿಖೆ ಏನಾಯಿತು ?

HANDIGANUR TOILET

ವಿಜಯಪುರ: ಸರ್ಕಾರದ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿರುವುದು ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದ್ದರೂ ಈವರೆಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಲಿ, ತನಿಖೆ ಪೂರ್ಣಗೊಳಿಸಿ ಸ್ಪಷ್ಟ ಮಾಹಿತಿ ಬಿಡುಗಡೆಗೊಳಿಸದೇ ಇರುವ ಪಂಚಾಯತ್ ರಾಜ್ಯ ವ್ಯವಸ್ಥೆಯ ಕಾರ್ಯವೈಖರಿ ಜನರಲ್ಲಿ ಜುಗುಪ್ಸೆ ಮೂಡಿಸಿದೆ.

ಹೌದು, ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆಯಡಿ ನಿರ್ವಹಣೆ ಹೆಸರಿನಲ್ಲಿ ಬಳಕೆಯಾದ ಅನುದಾನ ಮತ್ತು ಎಲ್‌ಡಬ್ಲುಎಮ್ ಅಡಿ ನಿರ್ಮಾಣಗೊಂಡ ಕಾಮಗಾರಿ ಹಾಗೂ ಉದ್ಯಾನ ಕಾಮಗಾರಿಯ ಅದ್ವಾನದ ಕುರಿತು ಈಗಾಗಲೇ ‘ವಿಜಯವಾಣಿ’ ವರದಿ ಪ್ರಕಟಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಕೂಡ ತಿಳಿಸಿದ್ದು, ಈಗಾಗಲೇ ಅವರ ನಿರ್ದೇಶನದ ಮೇರೆ ತಾಪಂ ಇಒ ರಾಮು ಅಗ್ನಿ ನೇತೃತ್ವದ ಅಧಿಕಾರಿಗಳ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾಮಗಾರಿ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ವರದಿ ಕೂಡ ಸಿದ್ಧಪಡಿಸುತ್ತಿರುವುದಾಗಿ ಪ್ರತಿಕ್ರಿಯಿಸಿದೆ. ಆದರೆ, ಈವರೆಗೆ ತನಿಖೆ ಯಾವ ಹಂತಕ್ಕೆ ಬಂದಿದೆ? ಎಂಬ ಮಾಹಿತಿ ಲಭ್ಯವಾಗಿಲ್ಲ.

ಇನ್ನೂ ಅನೇಕ ಕಾಮಗಾರಿಗಳ ಬಗ್ಗೆ ಆರೋಪಗಳಿದ್ದು ಆ ಬಗ್ಗೆಯೂ ತನಿಖೆ ಕೈಗೊಳ್ಳುವ ಅಗತ್ಯವಿದೆ. ಉದ್ಯೋಗ ಖಾತ್ರಿಯಡಿ ಕೈಗೊಂಡ ಹೂಳೆತ್ತುವ ಕಾಮಗಾರಿ, ಶಾಲಾ ಶೌಚಗೃಹ ನಿರ್ಮಾಣ, ಕೃಷಿ ಹೊಂಡ ಮತ್ತಿತರ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ ಎಂಬ ಆರೋಪಗಳಿದ್ದು, ಪೂರಕ ದಾಖಲೆಗಳು ಕೂಡ ಲಭ್ಯವಾಗಿವೆ. ಸದ್ಯ ಪ್ರಗತಿಯಲ್ಲಿರುವ ತನಿಖೆಯಾಧರಿಸಿ ಮುಂದಿನ ಕಾಮಗಾರಿಗಳ ಕುರಿತು ಧ್ವನಿ ಎತ್ತುವುದಾಗಿ ಸಾಮಾಜಿಕ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. ಅಲ್ಲದೇ, ಆ.9 ರಿಂದ 13ರವರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಜಿಲ್ಲಾ ಪ್ರವಾಸ ಕೈಗೊಂಡು ಅವ್ಯವಹಾರ ಮತ್ತು ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆ ನಡೆಸಲಿದ್ದು, ಈ ವೇಳೆ ಹಂದಿಗನೂರ ಪ್ರಕರಣ ಗಮನಕ್ಕೆ ತರಲು ಸಜ್ಜಾಗಿರುವುದಾಗಿ ಸಾಮಾಜಿಕ ಸಂಘಟನೆಗಳ ಜಿಲ್ಲಾ ಮುಖಂಡರು ತಿಳಿಸಿದ್ದಾರೆ. ಆದರೆ, ಅಷ್ಟರಲ್ಲಿ ಪ್ರಸಕ್ತ ಪ್ರಕರಣಗಳ ತನಿಖೆ ಮುಕ್ತಾಯಗೊಳ್ಳುವುದೇ ಎಂಬ ಕಾತರ ಸಾರ್ವಜನಿಕರನ್ನು ಕಾಡುತ್ತಿದೆ.

ತನಿಖೆಗೆ ಸಂಬಂಧಿಸಿದಂತೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಸಿಇಒ ರಿಷಿ ಆನಂದ ಅವರು, ಈಗಾಗಲೇ ಸಂಬಂಧಿಸಿದ ಇಒಗೆ ತಿಳಿಸಲಾಗಿದೆ. ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ಲೋಪ-ದೋಷ ಇದ್ದರೆ ತಿಳಿಸಿ ಆ ಬಗ್ಗೆ ಪರಿಶೀಲಿಸಲಾಗುವುದಲ್ಲದೇ, ಈವರೆಗಿನ ವರದಿ ತರಿಸಿಕೊಳ್ಳುವುದಾಗಿ ಪ್ರತಿಕ್ರಿಯಿಸಿದರು.

Share This Article

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ

ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…