ಉಗ್ರಗಾಮಿ ಮನೋಭಾವ ಇರುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದೇಕೆ?

ಹುಬ್ಬಳ್ಳಿ: ನಾಥೂರಾಮ್​ ಗೋಡ್ಸೆ ಈ ದೇಶದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯನ್ನು ಕೊಂದಾತ. ದೇಶದಲ್ಲಿ ಉಗ್ರಗಾಮಿಗಳು ದೇಶ ಭಕ್ತರಾಗುತ್ತಾರೆ. ಪ್ರಜ್ಞಾ ಸಿಂಗ್ ಠಾಕೂರ್ ಆರ್​ಎಎಸ್​ಎಸ್ ಮಹಿಳೆಯಾಗಿದ್ದು, ಉಗ್ರಗಾಮಿ ಮನೋಭಾವ ಇರುವವರ ಬಾಯಿಯಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಳಿನ್​ ಕುಮಾರ್​ ಕಟೀಲ್, ಅನಂತಕುಮಾರ್​ ಹೆಗಡೆಯನ್ನು ಹೇಗೆ ದೇಶ ಭಕ್ತರು ಎಂದು ಕರೆಯಲು ಸಾಧ್ಯ? ಕಟೀಲ್ ಸಂಸದರಾಗೋಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿರುವುದೇ ಕಾರಣ. ಸ್ವಾತಂತ್ರ್ಯ ಸಿಕ್ಕಲು ಸ್ವತಂತ್ರ್ಯ ಹೋರಾಟಗಾರರು, ಮಹಾತ್ಮ ಗಾಂಧೀಜಿ ಕಾರಣ. ಕಟೀಲ್, ಹೆಗಡೆ ಸ್ವಾತಂತ್ರ್ಯ ಹೋರಾಟಗಾರರ ಫಲಾನುಭವಿಗಳು ಎಂದರು.

ನಳಿನ್​ಕುಮಾರ್​ ಕಟೀಲ್, ಅನಂತ್​ಕುಮಾರ್ ಹೆಗಡೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಷಾ ಅವರು ಬಿಜೆಪಿಯಿಂದ ಹೊರಗೆ ಹಾಕಲಿ ಎಂದು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *