ನಿಮ್ಮಮ್ಮ ಏನ್ ಮಾಡ್ತಾರೆ!: ಮಲೈಕಾ ಮಗನಿಗೆ ಗೆಳೆಯರ ಹೀಗೊಂದು ಪ್ರಶ್ನೆ

ಹಿಂದಿ ಚಿತ್ರರಂಗದಲ್ಲಿ ನಟನೆ, ನೃತ್ಯ, ನಿರೂಪಣೆ ಹಾಗೂ ಮಾಡಲಿಂಗ್ ಹೀಗೆ ವಿಭಿನ್ನವಾಗಿ ಗುರುತಿಸಿಕೊಂಡವರು ನಟಿ ಮಲೈಕಾ ಆರೋರಾ. ಮೊದಲು ಕಿರುತೆರೆಯಲ್ಲಿ ಮಿಂಚಿ ಬಳಿಕ ಬೆಳ್ಳಿತೆರೆಗೆ ಬಂದಿದ್ದ ಮಲೈಕಾ 1999ರಲ್ಲಿ ನಟ ಅರ್ಬಾಜ್ ಖಾನ್‌ನನ್ನು ಮದುವೆಯಾಗಿದ್ದರು. ಇವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು 2017ರಲ್ಲಿ ವಿಚ್ಛೇದನ ನೀಡಿದ್ದರು. ಈ ದಂಪತಿಗೆ ಅರ್ಹಾನ್ ಖಾನ್ ಎಂಬ ಪುತ್ರನಿದ್ದಾನೆ. ಬಳಿಕ ನಟ ಅರ್ಜುನ್ ಕಪೂರ್‌ನೊಂದಿಗೆ ಮೂರು ವರ್ಷ ರಿಲೇಷನ್‌ಶಿಪ್‌ನಲ್ಲಿದ್ದ ಮಲೈಕಾ ಇತ್ತೀಚೆಗಷ್ಟೇ ಸಂಬಂಧ ಕಡಿದುಕೊಂಡಿದ್ದಾರೆ. ಸದ್ಯ ಪುತ್ರ ಅರ್ಹಾನ್ ಖಾನ್‌ನೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಆದರೆ, ಅರ್ಹಾನ್ ಸ್ನೇಹಿತರು ತಾಯಿ ಕುರಿತಂತೆ ಕೇಳುವ ಪ್ರಶ್ನೆಗಳು ಅವನನ್ನು ಗೊಂದಲಕ್ಕೀಡು ಮಾಡಿವೆಯಂತೆ. ಈ ಬಗ್ಗೆ ಮಲೈಕಾನೇ ಮಾತನಾಡಿದ್ದು, ‘ನಿಮ್ಮಮ್ಮ ಜೀವನಕ್ಕಾಗಿ ಏನು ಮಾಡುತ್ತಾರೆ ಎಂದು ರ್ಹಾನ್ ಸ್ನೇಹಿತರು ಅವನನ್ನು ಕೇಳಿದ್ದರಂತೆ. ಅದಕ್ಕೆ ಅವನು, ಮಾಡಲಿಂಗ್, ನಟನೆ, ಡಾನ್ಸ್ ಸೇರಿದಂತೆ ಕಾರ್ಯಕ್ರಮಗಳನ್ನು ನಿರೂಪಿಸುತ್ತಾರೆ ಎಂದು ಹೇಳಿದ್ದನಂತೆ. ಈ ಬಗ್ಗೆ ನನ್ನ ಮುಂದೆ ಪ್ರಸ್ತಾಪಿಸಿದಾಗ ನಾನು ಕೂಡ ಗೊಂದಲಕ್ಕೀಡಾಗಿದ್ದೆ’ ಎಂದಿರುವ ಮಲೈಕಾ, ‘ನಾನು ನಿಖರವಾಗಿ ಏನು ಮಾಡುತ್ತೇನೆ ಎನ್ನುವುದಕ್ಕಿಂತ ಒಳ್ಳೆಯ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂಬ ತೃಪ್ತಿಯಿದೆ’ ಎಂದಿದ್ದಾರೆ. -ಏಜೆನ್ಸೀಸ್

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…