ವೆಸ್ಟ್​ಇಂಡೀಸ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾ ಮಡಿಲಿಗೆ ಸರಣಿ

ತಿರುವನಂತಪುರ: ಕೇರಳದ ತಿರುವನಂತಪುರಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯಾವಳಿಯಲ್ಲಿ ಭಾರತ ವೆಸ್ಟ್ಇಂಡೀಸ್​ ವಿರುದ್ಧ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ್ದು ಈ ಮೂಲಕ 3-1ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟ್​ ಮಾಡಿದ ವೆಸ್ಟ್ಇಂಡೀಸ್​ 31.5 ಓವರ್​ಗಳಲ್ಲಿ 104 ರನ್​ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 14.5 ಓವರ್​ಗಳಲ್ಲಿ ಒಂದು ವಿಕೆಟ್​ ಕಳೆದುಕೊಂಡು 105 ರನ್​ ಗಳಿಸಿ ಜಯಸಾಧಿಸಿತು.

ಭಾರತದ ಶಿಖರ್​ ಧವನ್​ 6ರನ್​ ಗಳಿಸಿ ಥಾಮಸ್​ಗೆ ವಿಕೆಟ್​ ಒಪ್ಪಿಸಿದರು. ರೋಹಿತ್​ ಶರ್ಮಾ 63 ಮತ್ತು ವಿರಾಟ್​ ಕೊಹ್ಲಿ 33 ರನ್​ಗಳೊಂದಿಗೆ ಅಜೇಯರಾಗಿ ಉಳಿದರು.

ಭಾರತದ ಪರ ರವೀಂದ್ರ ಜಡೇಜಾಗೆ 4, ಜಸ್ಪ್ರೀತ್​ ಬುರ್ಮಾ ಮತ್ತು ಖಲೀಲ್​ ಅಹ್ಮದ್​ ತಲಾ 2, ಭುವನೇಶ್ವರ್​ ಕುಮಾರ್​ ಮತ್ತು ಕುಲದೀಪ್​ ಯಾದವ್​ ತಲಾ 1 ವಿಕೆಟ್​ ಪಡೆದರು.