ವೆಸ್ಟ್​ಇಂಡೀಸ್​ ವಿರುದ್ಧ ಒನ್​ ಡೇ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ : ಶಾರ್ದೂಲ್​ ಬದಲು ಉಮೇಶ್​ ಯಾದವ್​

ನವದೆಹಲಿ: ವೆಸ್ಟ್​ಇಂಡೀಸ್​ ವಿರುದ್ಧ ಅಕ್ಟೋಬರ್​ 21ರಿಂದ ಪ್ರಾರಂಭವಾಗುತ್ತಿರುವ ಏಕದಿನ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಶಾರ್ದೂಲ್​ ಠಾಕೂರ್ ಬದಲು ವೇಗದ ಬೌಲರ್​ ಉಮೇಶ್​ ಯಾದವ್​ಗೆ ಸ್ಥಾನ ನೀಡಲಾಗಿದೆ.

ತಂಡದ ವೇಗಿ ಶಾರ್ದೂಲ್​ ಗಾಯಗೊಂಡಿರುವ ಹಿನ್ನೆಲೆಯಲ್ಲಿ ವೆಸ್ಟ್​ಇಂಡೀಸ್​ ವಿರುದ್ಧದ ಮೊದಲ ಹಾಗೂ ಎರಡನೇ ಏಕದಿನ ಪಂದ್ಯಗಳಲ್ಲಿ ಅವರ ಬದಲು ಉಮೇಶ್​ ಯಾದವ್​ ಅವರಿಗೆ ಸ್ಥಾನ ನೀಡಲು ಆಲ್​ ಇಂಡಿಯಾ ಸೀನಿಯರ್​ ಆಯ್ಕೆ ಸಮಿತಿ ನಿರ್ಧಿರಿಸಿದೆ.
ಉಮೇಶ್​ ಯಾದವ್​ ಇತ್ತೀಚೆಗೆ ವೆಸ್ಟ್​ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 10 ವಿಕೆಟ್​ಗಳನ್ನು ಪಡೆದು ಭಾರತ ಸರಣಿ ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾರ್ದೂಲ್ ಸ್ನಾಯು ನೋವಿಗೆ ಒಳಗಾಗಿರುವ ಕಾರಣ ಈ ಏಕದಿನ ಪಂದ್ಯಾವಳಿಯಿಂದ ಅವರನ್ನು ಹೊರಗಿಡಲಾಗಿದೆ ಎನ್ನಲಾಗಿದೆ.

ವೆಸ್ಟ್​ಇಂಡೀಸ್​ ವಿರುದ್ಧದ ಮೊದಲ ಹಾಗೂ ಎರಡನೇ ಏಕದಿನ ಪಂದ್ಯಗಳಿಗೆ ಭಾರತ ತಂಡ ಹೀಗಿದೆ:
ವಿರಾಟ್​ ಕೊಹ್ಲಿ(ನಾಯಕ), ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್​.ರಾಹುಲ್​, ಅಂಬಟಿ ರಾಯುಡು, ಮನೀಶ್ ಪಾಂಡೆ, ಎಂ.ಎಸ್​. ಧೋನಿ(ವಿಕೆಟ್​ ಕೀಪರ್​), ರಿಶಬ್​ ಪಂತ್​​, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್​, ಕುಲದೀಪ್​ ಯಾದವ್​, ಮಹಮ್ಮದ್​ ಶಮಿ, ಖಲೀಲ್​ ಅಹ್ಮದ್​, ಉಮೇಶ್​ ಯಾದವ್​.