ಬೆಂಗಳೂರು: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವೆಸ್ಟ್ ಇಂಡೀಸ್ ಕೋಚ್ ಫಿಲ್ ಸಿಮ್ಮನ್ಸ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲು ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ನಲ್ಲಿದೆ. ತಂಡ ಕೂಡಿಕೊಳ್ಳುವುದಕ್ಕೂ ಮೊದಲು ಫಿಲ್ ಸಿಮ್ಮನ್ಸ್ ಎರಡು ಬಾರಿ ಕೋವಿಡ್-19 ಟೆಸ್ಟ್‌ಗೆ ಒಳಗಾಗಬೇಕಿದೆ. ಪರೀಕ್ಷಾ ವರದಿ ನೆಗೆಟಿವ್ ಬಂದರಷ್ಟೇ ತಂಡ ಸೇರ್ಪಡೆಗೊಳ್ಳಲು ಸೂಚಿಸಲಾಗಿದೆ. ಕಳೆದ ಶುಕ್ರವಾರ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡ ಸಿಮ್ಮನ್ಸ್, ಓಲ್ಡ್ ಟ್ರಾಫೋರ್ಡ್ ಹೋಟೆಲ್ ಕೊಠಡಿಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದಾರೆ.
ಇದನ್ನೂ ಓದಿ:ಜ್ವಾಲಾ ಗುಟ್ಟಾ ಮನೆಯ ವಿದ್ಯುತ್ ಬಿಲ್ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ!
ಸಿಮ್ಮನ್ಸ್ ಕ್ವಾರಂಟೈನ್‌ನಲ್ಲಿ ಇರುವುದರಿಂದ ಅಭ್ಯಾಸಕ್ಕೆ ಯಾವುದೇ ರೀತಿ ಅಡ್ಡಿಯುಂಟಾಗುವುದಿಲ್ಲ ಎಂದು ವೇಗಿ ಅಲ್ಜೇರಿ ಜೋಸೆಫ್ ತಿಳಿಸಿದ್ದಾರೆ. ನಮ್ಮ ಕೆಲಸ ನಾವು ನಿರ್ವಹಿಸಬೇಕಿದೆ. ಸಾಕಷ್ಟು ಜನ ಸಹಾಯಕ ಸಿಬ್ಬಂದಿ ಇದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಉಲ್ಬಣವಾಗುವುದಿಲ್ಲ. ಸಹಾಯಕ ಕೋಚ್‌ಗಳಾದ ರೊಡ್ಡಿ ಇಸ್ಟ್‌ವಿಕ್ ಹಾಗೂ ರೇಯಾನ್ ಗ್ರಿಫಿತ್ ಮಾರ್ಗದರ್ಶನದಲ್ಲಿ ತರಬೇತಿ ನಡೆಸಲಾಗುವುದು ಎಂದರು. ಮುಂದಿನ ಸೋಮವಾರದಿಂದ (ಜುಲೈ 8) ಸೌಥಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.