300 ಮೊಬೈಲ್​ ಫೋನ್​ಗಳನ್ನು ಮರಗಳು ಬಳಸುತ್ತಿದ್ದವೇ? ಬಾಲಾಕೋಟ್​ ವೈಮಾನಿಕ ದಾಳಿ ಕುರಿತು ರಾಜ್​ನಾಥ್​ ಸಿಂಗ್​ ಪ್ರಶ್ನೆ

ಧುಬ್ರಿ (ಅಸ್ಸಾಂ): ಬಾಲಾಕೋಟ್​ ಉಗ್ರ ತರಬೇತಿ ಕೇಂದ್ರದ ಮೇಲಿನ ಭಾರತದ ವೈಮಾನಿಕ ದಾಳಿ ಕುರಿತು ಅನುಮಾನ ವ್ಯಕ್ತಪಡಿಸುತ್ತಿರುವವರನ್ನು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ತರಾಟೆಗೆ ತೆಗೆದುಕೊಂಡಿದ್ದಾರೆ. ದಾಳಿಯ ವೇಳೆ ಈ ಪ್ರದೇಶದಲ್ಲಿ 300 ಮೊಬೈಲ್​ ಫೋನ್​ಗಳು ಕಾರ್ಯನಿರ್ವಹಿಸುತ್ತಿದ್ದವು. ಅವೆಲ್ಲವನ್ನೂ ಈ ಪ್ರದೇಶದಲ್ಲಿದ್ದ ಮರಗಳು ಬಳಸುತ್ತಿದ್ದವೇ ಎಂದು ಪ್ರಶ್ನಿಸಿದ್ದಾರೆ.

ಜೈಷ್​ ಎ ಮೊಹಮ್ಮದ್​ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆದಾಗ ಅಲ್ಲಿ 300 ಮೊಬೈಲ್​ ಫೋನ್​ಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್​ಟಿಆರ್​ಒ) ಮಾಹಿತಿ ನೀಡಿದೆ. ಪ್ರಧಾನಿ ಕಾರ್ಯಾಲಯದ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಎನ್​ಟಿಆರ್​ಒ ಮಾಹಿತಿಯ ಬಗ್ಗೆಯೂ ಪ್ರತಿಪಕ್ಷಗಳಿಗೆ ನಂಬಿಕೆ ಇಲ್ಲದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)